ಬೆಂಗಳೂರು : “ನಾವು ಬಂದೇವಾ” ಅಂತ ಬೆಂಗಳೂರಿಗರಿಗೆ ಬಂದು ಬದುಕು ಕಟ್ಟಿಕೊಳ್ಳುವವರ ಪರಿಸ್ಥಿತಿಯನ್ನ ಒಂದೇ ಹಾಡಲ್ಲಿ ಅಚ್ಚುಕಟ್ಟಾಗಿ ತೋರಿಸಿದ್ದ “ಅಮೃತ ಅಪಾರ್ಟ್ಮೆಂಟ್ಸ್” ಸಿನಿಮಾ ಈಗ ಅದೇ ಹಾಡಿನ ಡಿಜೆ ವರ್ಷನ್ ರಿಲೀಸ್ ಮಾಡಿದೆ.. ಈ ಡಿಜೆ ವರ್ಷನ್ ಹಾಡಿನ ಬೀಟ್ಸ್ ಯುವಕರ ಕ್ರೇಜ್ ಹೆಚ್ಚಿಸಿದೆ.. ಹಾಡಂತು ಸಖತ್ ಕಲರ್ ಫುಲ್ ಆಗಿ ಮೂಡಿಬಂದಿದೆ..
ಎಸ್ ಡಿ ಅರವಿಂದ ಅವರ ಸಂಗೀತ , ಬಿ ಆರ್ ಪೊಲೀಸ್ ಪಾಟೀಲ್ ಅವರ ಸಾಲುಗಳಿಗೆ ತೇಜಸ್ವಿ ಹರಿದಾಸ್ ಅವರು ಧ್ವನಿಯಾಗಿದ್ದಾರೆ.. ಯೂಟ್ಯೂಬ್ ನಲ್ಲಿ ಹಾಡು ರಿಲೀಸ್ ಆಗಿದ್ದು, ನೆಟ್ಟಿಗರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ತಿದೆ.. ಜೇಂಖಾರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಹಾಡು ರಿಲೀಸ್ ಆಗಿದೆ..
https://www.youtube.com/watch?v=Wv_ZHZHI8PA
ಇನ್ನೂ ಸಿನಿಮಾದ ಕಾಸ್ಟ್ ಅಂಡ್ ಕ್ರೀವ್ ಬಗ್ಗೆ ಮಾತನಾಡೋದಾದ್ರೆ ಕೆಜಿಎಫ್ ನಲ್ಲಿ ನಟಿಸಿರುವ ತಾರಕ್ ಪೊನ್ನಪ್ಪ ಹಾಗೂ ಹೊಸ ಪರಿಚಯ ಊರ್ವಸಿ ಗೋವರ್ಧನ್ ನಾಯಕ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ..
ಗುರುರಾಜ್ ಕುಲಕರ್ಣಿ ಅವರು ಆಕ್ಷನ್ ಕಟ್ ಹೇಳಿ ಬಂಡವಾಳ ಹೂಡಿರುವ ಈ ಸಿನಿಮಾ G9 ಕಮ್ಯುನಿಕೇಷನ್ಸ್ ಬ್ಯಾನರ್ ನ ಅಡಿ ಮೂಡಿಬಂದಿದ್ದು, ಎ ಎಮ್ ಶಾ ಬ್ಯಾಕ್ ಗ್ರೌಂಡ್ ಮ್ಯೂಸಿಕ್, ಅರ್ಜುನ್ ಅಜಿತ್ ಛಾಯಾಗ್ರಣ ಚಿತ್ರಕ್ಕಿದೆ..