ಕಿರುತೆರೆಯ ಖ್ಯಾತ ನಟಿ ಲಕ್ಷ್ಮೀ ಬಾರಮ್ಮ ಖ್ಯಾತಿಯ ಗೊಂಬೆ ನೇಹಾ ಗೌಡ ಹಾಗೂ ಚಂದನ್ ದಂಪತಿ “ರಾಜಾ ರಾಣಿ” ಕಿರೀಟ ಗೆದ್ದಿದ್ದಾರೆ.. ಖಾಸಗಿ ವಾಹಿನಿಯಲ್ಲಿ ಬರುತ್ತಿದ್ದ ರಿಯಾಲಿಟಿ ಶೋ ಸಾಕಷ್ಟು ಜನಪ್ರಿಯತೆಯಯನ್ನ ಗಳಿಸಿತ್ತು. ಸ್ಟಾರ್ ದಂಪತಿಗಳು ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ರು. ಸೃಜನ್ ಲೋಕೇಶ್ ಮತ್ತು ಹಿರಿಯ ನಟಿ ತಾರಾ ಜಡ್ಜ್ ಆಗಿದ್ದ ಈ ಕಾರ್ಯಕ್ರಮದ ಫಿನಾಲೆ ಭಾನುವಾರ ನಡೆಯಿತು. ಅದ್ಧೂರಿ ಗ್ರ್ಯಾಂಡ್ ಫಿನಾಲೆಗೆ ಸಾಕಷ್ಟು ಸೆಲೆಬ್ರಿಟಿಗಳು ಆಗಮಿಸಿದ್ದರು.. ಬಿಗ್ ಬಾಸ್ ಸೀಸನ್ 8 ರ ವಿನ್ನರ್ ಮಂಜು ಪಾವಗಡ , ಶುಭಾ ಪುಂಜಾ ಕೂಡ ಬಂದು ಗಮನ ಸೆಳೆದಿದ್ದರು.
ಗ್ರ್ಯಾಂಡ್ ಫಿನಾಲೆಯಲ್ಲಿ ನೇಹಾ ಗೌಡ ಚಂದನ್ ಗೆದ್ದಿದ್ದಾರೆ.. ಈ ಮೂಲಕ ರಾಜಾ-ರಾಣಿ ಕಿರೀಟ ತಮ್ಮದಾಗಿಸಿಕೊಂಡಿದ್ದಾರೆ.. ಈ ರಿಯಾಲಿಟಿ ಶೋಗೆ ಸಾಕಷ್ಟು ಜನ ಫ್ಯಾನ್ ಗಳಾಗಿದ್ದರು. ಇನ್ನೂ ಮೊದಲನೇ ರನ್ನರ್ ಅಪ್ ಜೋಡಿಯಾಗಿ ಇಶಿತಾ ವರ್ಷ – ಮುರುಗ ಜೋಡಿ ಹೊರಹೊಮ್ಮಿದ್ರೆ, 2ನೇ ರನ್ನರ್ ಜೋಡಿಯಾದವರು ಗಾಯಕಕ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ.. ಅಂದ್ಹಾಗೆ ನೇಹಾ ಹಾಗೂ ಚಂದನ್ ದಂಪತಿ ವಿನ್ನರ್ ಕಿರೀಟದ ಜೊತೆಗೆ 5 ಲಕ್ಷ ರೂಪಾಯಿಗಳ ನಗದು ಬಹುಮಾನವನ್ನೂ ಪಡೆದ್ರು.. ಇಶಿತಾ ವರ್ಷ – ಮುರುಗ ಜೋಡಿಗೆ 2.5 ಲಕ್ಷ ನಗದು ಬಹುಮಾನ ನೀಡಲಾಯ್ತು..