ಬೆಂಗಳೂರು : ಅಪ್ಪು ನಮ್ಮನ್ನೆಲ್ಲ ಅಗಲಿರುವ ಕಹಿ ಸತ್ಯವನ್ನ ಈವರೆಗೂ ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗ್ತಿಲ್ಲ.. ಈ ನಡುವೆ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಚಿತ್ರನಟಪುನೀತ್ ರಾಜ್ ಕುಮಾರ್ ಅವರನ್ನು ರಾಜಕೀಯಕ್ಕೆ ಆಹ್ವಾನಿಸಿದ್ದರು. ಇದನ್ನು ಅಪ್ಪು ತಿರಸ್ಕರಿಸಿದ್ದರು ಎಂದು ಅಪ್ಪು ಅವರ ಆಪ್ತ , ಪ್ರೊಡಕ್ಷನ್ ಮ್ಯಾನೇಜರ್ ಎನ್ ಎಸ್ ರಾಜಕುಮಾರ್ ಅವರು ಹೇಳಿಕೊಂಡಿರೋದಾಗಿ ವರದಿಯಾಗಿದೆ..
ಅಲ್ಲದೇ ಕಳೆದ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ನಟ ಹಾಗೂ ಬಿಜೆಪಿ ನಾಯಕ ಜಗ್ಗೇಶ್ , ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ , ನಿರ್ಮಾಪಕ ವಿ. ಬಾಬು ಸೇರಿದಂತೆ ಅನೇಕರು ಪುನೀತ್ ರಾಜ್ ಕುಮಾರ್ ಅವರನ್ನ ರಾಜಕೀಯಕ್ಕೆ ಬರುವಂತೆ ಬಹಳ ಪ್ರಯತ್ನ ಮಾಡಿದ್ದರೂ ಸಾಧ್ಯವಾಗಲಿಲ್ಲವಂತೆ..
ಅಲ್ಲದೇ ರಾಜಕೀಯದ ಆಫರ್ ಅನ್ನ ಮಯವಾಗಿಯೇ ತಿರಸ್ಕರಿಸಿದ್ದ ಅಪ್ಪು ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ.. ನಾನು ನನ್ನ ತಂದೆ ರಾಜ್ ಕುಮಾರ್ ಹಾದಿಯಲ್ಲಿಯೇ ಸಾಗುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದ್ರಂತೆ.. ಅಷ್ಟೇ ಅಲ್ಲ ರಾಜಕೀಯಕ್ಕೆ ಬರುವುದೇನೂ ಬೇಡ , ಒಂದು ಬಾರಿ ನರೇಂದ್ರ ಮೋದಿಯವರನ್ನು ದೆಹಲಿಗೆ ಬಂದು ಭೇಟಿ ಮಾಡಿ ಎಂದು ಮನವಿ ಮಾಡಲಾಗಿದ್ದಾಗಲೂ ಕೂಡ ಪುನೀತ್ ಅದನ್ನ ತಿರಸ್ಕರಿಸಿದ್ದರಂತೆ.. ಅಲ್ಲದೇ ನಮಗೆ ಎಲ್ಲ ಪಕ್ಷದವರೂ ಬೇಕಾದವರೇ. ಸಿದ್ದರಾಮಯ್ಯ, ಹೆಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ ಎಲ್ಲರೂ ಬೇಕು. ಎಲ್ಲ ಪಕ್ಷಗಳಲ್ಲಿಯೂ ನಮ್ಮ ಅಭಿಮಾನಿಗಳಿದ್ದಾರೆ. ಮೋದಿಯವರನ್ನು ಭೇಟಿಯಾದರೆ ಅದು ರಾಜಕೀಯವಾಗುತ್ತದೆ ಎಂದಿದ್ದರಂತೆ..
ಅಷ್ಟಕ್ಕೂ ಮೀರಿ ಅಪ್ಪಾಜಿ ಕುರಿತಾದ ಪುಸ್ತಕ ನೀಡುವ ನೆಪದಲ್ಲಿಯಾದರೂ ಭೇಟಿ ಮಾಡಿ ಮೋದಿ ಅವರನ್ನ ಭೇಟಿ ಮಾಡುವಂತೆ ಕೇಳಿಕೊಂಡಾಗ ಅಪ್ಪು ಮೋದಿ ಅವರ ಭೇಟಿಗೆ ಒಪ್ಪಿದ್ರಂತೆ.. ಹೆಚ್ಎಎಲ್ ಏರ್ ಪೋರ್ಟ್ ಟ್ರಾನ್ಸಿಟ್ನಲ್ಲಿ ಪ್ರಧಾನಿಯವರನ್ನು ಅಪ್ಪು ಮತ್ತು ಅಶ್ವಿನಿಯವರು ಭೇಟಿಯಾದರು. ಪ್ರಧಾನಿಯವರು ಸುಮಾರು 7 ನಿಮಿಷ ಮಾತನಾಡಿದರು ಅಪ್ಪು ಅವರೊಂದಿಗೆ ಮಾತನಾಡಿದ್ರು. ನಿಮ್ಮಂಥ ಯುವಕರು ರಾಜಕೀಯಕ್ಕೆ ಬಂದರೆ ದೇಶ ಬದಲಾಗಲಿದೆ ಎಂದು ಹೇಳಿದರು. ಅಪ್ಪು ಮುಗುಳ್ನಕ್ಕು ವಂದನೆ ಸಲ್ಲಿಸಿ ಮರಳಿದರು ಎಂದೂ ಕೂಡ ರಾಜ್ ಕುಮಾರ್ ಅವರು ಹೇಳಿಕೊಂಡಿರೋದಾಗಿ ವರದಿಯಾಗಿದೆ..