ಸದ್ಯ ಬಾಲಿವುಡ್ ಹಾಲಿವುಡ್ ನಲ್ಲಿ ಸಕ್ರಿಯವಾಗಿರುವ ಸ್ಟಾರ್ ನಟಿ ಪ್ರಿಯಾಂಕಾ ಮದುವೆಯಾದ ನಂತರ ಅಮೆರಿಕಾದಲ್ಲೇ ಪತಿ ನಿಕ್ ಜಾನಸ್ ಜೊತೆಗೆ ವಾಸ್ತವ್ಯ ಹೂಡಿದ್ದಾರೆ.. ಈ ಜೋಡಿಗೆ ಹಾಲಿವುಡ್ ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ.. ಪ್ರಿಯಾಂಕಾ ಪತಿ ನಿಕ್ ಜಾನಸ್ ಅಮೆರಿಕಾದ ಖ್ಯಾತ ಪಾಪ್ ಸಿಂಗರ್..
ಆದ್ರೆ ಧಿಡೀರನೇ ಪ್ರಿಯಾಂಕಾ ಹಾಗೂ ನಿಕ್ ಜಾನಸ್ ಡಿವೋರ್ಸ್ ಪಡೆಯುತ್ತಾರೆ ಅನ್ನೋ ಸುದ್ದಿ ಬಿರುಗಾಳಿಯಂತೆ ಹಬ್ಬಿದ್ದು, ಸಾಕಷ್ಟು ಅಭಿಮಾನಿಗಳೂ ಸಹ ಆತಂಕೀಡಾಗಿದ್ಧಾರೆ.. ಇಷ್ಟಕ್ಕೆಲ್ಲ ಕಾರಣ ಸೋಷಿಯಲ್ ಮೀಡಿಯಾದಿಂದ ತಮ್ಮ ಹೆಸರಿನ ಜೊತೆಗಿದ್ದ ಪತಿಯ ಹೆಸರನ್ನ ತೆಗೆದು ಹಾಕಿರೋದು.. ಇದೇ ರೀತಿಯಲ್ಲೇ ನಟಿ ಸಮಂತಾ ಕೂಡ ಪತಿಯ ಹೆಸರನ್ನ ತೆಗೆದು ಹಾಕಿದ್ದರು.. ಅದಾದ ಕೆಲ ದಿನಗಳ ನಂತರವೇ ನಾಗಚೈತನ್ಯ ಜೊತೆಗೆ ವಿಚ್ಛೇಧನ ಪಡೆದ ಸುದ್ದಿ ಪ್ರಕಟವಾಗಿತ್ತು.. ಆದ್ರೆ ಈ ಗಾಸಿಪ್ ಗಳಿಗೆ ಈಗ ಪ್ರಿಯಾಂಕಾ ಸ್ಪಷ್ಟನೆ ನೀಡಿದ್ದಾರೆ.. ಹೌದು ಪತಿ ನಿಕ್ ಪೋಸ್ಟ್ ಗೆ ಪ್ರತಿಕ್ರಿಯೆ ನೀಡುವ ಮೂಲಕ ಗಾಸಿಪ್ ಗಳಿಗೆ ಬ್ರೇಕ್ ಹಾಕಿದ್ದಾರೆ ಪ್ರಿಯಾಂಕಾ..
ನವೆಂಬರ್ 22 ರಂದು ಪ್ರಿಯಾಂಕಾ ಚೋಪ್ರಾ ತನ್ನ ಟ್ವೀಟರ್ ಖಾತೆಯಿಂದ ಚೋಪ್ರಾ ಹಾಗೂ ಜೋನಸ್ ಎರಡೂ ಹೆಸರುಗಳನ್ನು ತೆಗೆದು ಹಾಕಿದ್ದರು. ಇನ್ಸ್ಟಾಗ್ರಾಂ ಖಾತೆಯಲ್ಲಿ ಜೋನಸ್ ಹೆಸರುನ್ನು ಕೈ ಬಿಟ್ಟಿದ್ದರು. ಇದು ಪ್ರಿಯಾಂಕಾ ಚೋಪ್ರಾ ಅಭಿಮಾನಿಗಳಲ್ಲಿ ಆತಂಕ ಹುಟ್ಟಿಸಿತ್ತು. ಈ ಬೆನ್ನಲೇ ಪ್ರಿಯಾಂಕಾ-ನಿಕ್ ದಾಂಪತ್ಯದಲ್ಲಿ ಬಿರುಕು ಬಿಟ್ಟಿದೆ ಎಂಬ ವದಂತಿ ಶುರುವಾಗಿತ್ತು.. ಆದ್ರೆ ಈ ವದಂತಿಗಳಿಗೆ ಪ್ರಿಯಾಂಕಾ ಬ್ರೇಕ್ ಹಾಕಿದ್ದಾರೆ..
ನಿಕ್ ಜೋನಸ್ ಇನ್ಸ್ಟಾಗ್ರಾಂನಲ್ಲಿ ವರ್ಕ್ಔಟ್ ವಿಡಿಯೋವನ್ನು ಶೇರ್ ಮಾಡಿದ್ದರು. ಆ ವಿಡಿಯೋಗೆ ಪ್ರಿಯಾಂಕಾ ಚೋಪ್ರಾ ಪ್ರತಿಕ್ರಿಯೆ ನೀಡಿದ್ದಾರೆ. “ ಡಾಮ್ ನಿನ್ನ ತೋಳುಗಳಲ್ಲಿ ಉಸಿರು ನಿಂತು ಹೋಯಿತೆಂದು ಕಮೆಂಟ್ ಮಾಡಿದ್ದಾರೆ. ಈ ಮೂಲಕ ಡಿವೋರ್ಸ್ ಸುದ್ದಿಗೆ ಬ್ರೇಕ್ ಹಾಕಿದ್ದಾರೆ.. ಆದ್ರೆ ನಿಕ್ ಹೆಸರು ಕೈಬಿಟ್ಟಿದ್ದಕ್ಕೆ ಇನ್ನೂ ಸರಿಯಾದ ಉತ್ತರ ಸಿಕ್ಕಿಲ್ಲ.. ಮತ್ತೊಂದೆಡೆ ಪ್ರಿಯಾಂಕಾ ವಿವಾದ ಬಿಟ್ಟು ತಮ್ಮ ಹೊಸ ಹಾಲಿವುಡ್ ಸಿನಿಮಾದ ಅಪ್ ಡೇಟ್ ನೀಡಿದ್ದಾರೆ. ಹೌದು ‘ದಿ ಮ್ಯಾಟ್ರಿಕ್ಸ್ ರಿಸರೆಕ್ಷನ್ಸ್’ ಚಿತ್ರದಲ್ಲಿನ ಪ್ರಿಯಾಂಕಾ ಚೋಪ್ರಾ ಲುಕ್ ರಿವೀಲ್ ಆಗಿದೆ. ಮೊದಲ ಪೋಸ್ಟರ್ ನಲ್ಲಿಯೇ ಪ್ರಿಯಾಂಕಾ ಹೆಚ್ಚು ಗಮನ ಸೆಳೆದಿದ್ದಾರೆ. ಪ್ರಿಯಾಂಕಾ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ಮಾಡುತ್ತಿದ್ದಾರೆ.