ಜ್ಯೂನಿಯರ್ ಎನ್ ಟಿ ಆರ್, ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಒಟ್ಟಾಗಿ ಅಭಿನಯಿಸುತ್ತಿರುವ ಸಿನಿಮಾ ಆರ್ ಆರ್ ಆರ್. ಈ ಬಿಗ್ ಬಜೆಟ್ ಸಿನಿಮಾದ ಮೇಲೆ ಆಕಾಶದಷ್ಟು ನಿರೀಕ್ಷೆಗಳಿವೆ.
ಬಾಹುಬಲಿ ಬಳಿಕ ಎಸ್ ಎಸ್ ರಾಜಮೌಳಿ ನಿರ್ದೇಶನದ ಸಿನಿಮಾ ಅನ್ನೋದು ಒಂದು ಕಡೆ..
ತೆಲುಗು ಸಿನಿಮಾ ಇಂಡಸ್ಟ್ರೀಯ ಎರಡು ದಿಗ್ಗಜ ಕುಡಿಗಳು ಇದೇ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡುತ್ತಿರುವುದು ಸಿನಿಮಾದ ಮೇಲೆ ನಿರೀಕ್ಷೆಗಳನ್ನು ದುಪ್ಪುಟ್ಟು ಮಾಡಿವೆ.
ಈಗಾಗಲೇ ಚಿತ್ರತಂಡ ಟೀಸರ್.. ಹಾಡುಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಈ ಸದ್ದನ್ನ ಮತ್ತಷ್ಟು ಡಬಲ್ ಮಾಡುವ ನಿಟ್ಟಿನಲ್ಲಿ ಇತ್ತೀಚೆಗೆ ಹಳ್ಳಿ ನಾಟು ಹಾಡು ರಿಲೀಸ್ ಮಾಡಿತ್ತು ಸಿನಿಮಾ ತಂಡ.
ಪಕ್ಕಾ ಮಾಸ್ ಬೀಟ್ ಇರುವ ಈ ಸಾಂಗ್ ನಲ್ಲಿ ಎನ್ ಟಿಆರ್, ರಾಮ್ ಚರಣ್ ಒಟ್ಟಾಗಿ ಡ್ಯಾನ್ಸ್ ಮಾಡಿದ್ದು, ಈ ಹಾಡಿಗೆ ಮಾಸ್ ಹೀರೋಗಳ ಡ್ಯಾನ್ಸ್ ಗೆ ಸಿನಿಪ್ರೇಕ್ಷಕರು ಫಿದಾ ಆಗಿದ್ರು..
ಮುಖ್ಯವಾಗಿ ಎನ್ ಟಿಆರ್, ರಾಮ್ ಚರಣ್ ಒಟ್ಟಿಗೆ ಒಂದೇ ಸ್ಟೆಪ್ ಹಾಕಿರೋದು ಕಣ್ಣಿಗೆ ಹಬ್ಬ ನೀಡುವಂತೆ ಇತ್ತು.. ಇದೆಲ್ಲದರ ನಡುವೆ ಇದೀಗ ಸಿನಿಮಾ ಮೂರನೇ ಹಾಡು ರಿಲೀಸ್ ಮಾಡೋದಕ್ಕೆ ದಿನಾಂಕ ಫಿಕ್ಸ್ ಮಾಡಿದೆ.. ಅಧಿಕೃತವಾಗಿ ಟ್ವೀಟ್ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ.. ಹೌದು #RRR SoulAnthem ಇದೇ ತಿಂಗಳ 26 ಅಂದ್ರೆ ಇದೇ ಶುಕ್ರವಾರ ರಿಲೀಸ್ ಆಗಲಿದೆ..
ರಾಜಮೌಳಿ, ರಾಮಚರಣ್ , ಜ್ಯೂ. NTR ಕಾಂಬೋದ ಮೇಲೆ ಜನರಿಗೆ ಬೆಟ್ಟದಷ್ಟು ನಿರೀಕ್ಷೆ ಇದೆ..