ಕ್ರೇಜಿಸ್ಟಾರ್ ನಟನೆಯ ‘ಕನ್ನಡಿಗ’ ಸಿನಿಮಾದ ಕನ್ನಡಿಗ ಹಾಡು ರಿಲೀಸ್ ಆಗಿದೆ.. ಈ ಹಾಡು ಸಾಕಷ್ಟು ವಿಶೇಷತೆಗಳಿಂದ ಕೂಡಿದೆ.. ಮುಖ್ಯವಾಗಿ ಈ ಹಾಡಿಗೆ ಹದ್ಯಾಟ್ರಿಕ್ ಹೀರೋ ಶಿವಣ್ಣ ಧ್ವನಿಯಾಗಿದ್ದಾರೆ.. ಈ ಸಿನಿಮಾದಲ್ಲಿ ರವಿಚಂದ್ರನ್ ಅವರ ಲುಕ್ ಅನಾವರಣಗೊಂಡು ಈಗಾಗಲೇ ಗಮನ ಸೆಳೆದಿದೆ.
ಸಿನಿಮಾ ಈ ಹೊಸ ಹಾಡು ಸಖತ್ ಪವರ್ ಫುಲ್ ಆಗಿದೆ. ಹಾಡಿಗೆ ಶಿವಣ್ಣ ಧ್ವನಿಯಾಗಿರೋದು ಹಾಡಿನ ಗತ್ತನ್ನ ಹೆಚ್ಚಿಸಿದೆ.. ಕನ್ನಡಿಗ ಸಿನಿಮಾ ಟೈಟಲ್ ಮೂಲಕವೇ ಗಮನ ಸೆಳೆದಿತ್ತು. ಈಗ ಪವರ್‌ಫುಲ್ ಹಾಡು ರಿಲೀಸ್ ಆಗಿದೆ. ಸದ್ಯ ಹಾಡಿನ ಲಿರಿಕಲ್ ವೀಡಿಯೋ ಮಾತ್ರ ರಿಲೀಸ್ ಆಗಿದೆ.
ಇದು ಚಿತ್ರದ ಟೈಟಲ್ ಟ್ರ್ಯಾಕ್ ಆಗಿದೆ. ಶಿವರಾಜ್ಕುಮಾರ್ ಧ್ವನಿಯಲ್ಲಿ ಮೂಡಿ ಬಂದಿರೋ ಈ ಹಾಡು ಸಖತ್ತಾಗಿದೆ. ಈ ಸಿನಿಮಾದಲ್ಲಿ ಕ್ರೇಜಿಸ್ಟಾರ್ ಲಿಪಿಕಾರನ ರೂಪದಲ್ಲಿ ಕಾಣಿಸಿಕೊಳ್ತಿರೋದು ವಿಶೇಷ.
ಶಿವರಾಜ್ಕುಮಾರ್ ಹಾಡಿರು ಹಾಡಿನ ಮೇಕಿಂಗ್ ಮಾತ್ರ ರಿವೀಲ್ ಮಾಡಲಾಗಿದೆ. ಚಿತ್ರದಲ್ಲಿ ರವಿಚಂದ್ರನ್ ಎರಡು ಶೇಡ್ಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಬಿ.ಎಂ ಗಿರಿರಾಜ್ ನಿರ್ದೇಶನ, ಎನ್.ಎಸ್ ರಾಜ್ ಕುಮಾರ್ ಅವರ ನಿರ್ಮಾಣದಲ್ಲಿ ಈ ಚಿತ್ರ ಮೂಡಿಬಂದಿದೆ. ಚಿತ್ರದ ಬಹುತೇಕ ಕೆಲಸಗಳು ಮುಗಿದಿವೆ. ಸದ್ಯದಲ್ಲೇ ಸಿನಿಮಾದ ರಿಲೀಸ್ ದಿನಾಂಕವನ್ನು ಚಿತ್ರತಂಡ ಪ್ರಕಟ ಮಾಡಲಿದೆ.