ಸಲ್ಮಾನ್, ಅಕ್ಷಯ್ ರೆಕಾರ್ಡ್ ಪೀಸ್ ಪೀಸ್…! ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಯಾವ ಹೀರೋಗೆ..?
ಭಾರತದಲ್ಲಿ ಬಾಲಿವುಡ್ ನ ಕಿಲಾಡಿ ಅಕ್ಷಯ್ ಕುಮಾರ್ , ಸಲ್ಮಾನ್ ಖಾನ್ ಅವರೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರು ಎನಿಸಿಕೊಂಡಿದ್ರು.. ಆದ್ರೀಗ ಅವರ ರೆಕಾರ್ಡ್ ಬ್ರೇಕ್ ಮಾಡಿರೋದು ನಮ್ಮ ಸೌತ್ ಸಿನಿಮಾದ ನಟ.. ಹೌದು.. ಆ ನಟ ಮತ್ಯಾರು ಅಲ್ಲ ಬಾಹುಬಲಿ ಪ್ರಭಾಸ್… ಬಾಹುಬಲಿ ಸಿನಿಮಾ ಆದ ಮೇಲೆ ಪ್ರಭಾಸ್ ಅವರ ಖದರೇ ಬದಲಾಗಿದೆ.. ಬಾಲಿವುಡ್ ನಲ್ಲೂ ಡಾರ್ಲಿಂಗ್ ಗೆ ಡಿಮ್ಯಾಂಡ್ ಹೆಚ್ಚಾಗಿದೆ. ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಸಿನಿಮಾಗಳಲ್ಲಿ ಬಾಹುಬಲಿ ಬ್ಯುಸಿಯಿದ್ದಾರೆ..
ಮುಖ್ಯವಾಗಿ ಕೆಜಿಎಫ್ ಖ್ಯಾತಿಯ ಕಿಂಗ್ ಮೇಕರ್ ಪ್ರಶಾಂತ್ ನೀಲ್ ಪ್ರಸ್ತುತ ಪ್ರಭಾಸ್ ಜೊತೆ ಸಲಾರ್ ಸಿನಿಮಾ ಮಾಡ್ತಿದ್ದು, ಈ ಸಿನಿಮಾ ಮೇಲೆ ಭರ್ಜರಿ ನಿರೀಕ್ಷೆಯಿದೆ.. ಇದರ ಹೊರತಾಗಿ ಪ್ರಭಾಸ್ ಆದಿಪುರುಷ್ ನಲ್ಲಿ ಬ್ಯುಸಿಯಿದ್ದಾರೆ.. ಜೊತೆಗೆ ಮತ್ತೊಂದು ಬಿಗ್ ಬಜೆಟ್ ಸಿನಿಮಾ ರಾಧೆ ಶ್ಯಾಮ್ ಕೂಡ ರಿಲೀಸ್ ಡೇಟ್ ಅನೌನ್ಸ್ ಆಗಿದೆ.. ಜನವರಿ 14 ರಂದು ಬಿಡುಗಡೆಗೆ ಸಿದ್ಧವಾಗಿದೆ. ಮುಂದೆ ಸ್ಪಿರಿಟ್ ಸಿನಿಮಾ ಮಾಡಲಿದ್ದಾರೆ..
ಅಂದ್ಹಾಗೆ ಪ್ರಭಾಸ್ ಈ ಹಿಂದೆ 100 ಕೋಟಿ ಸಂಭಾವನೆಯಿಂದ ಸುದ್ದಿಯಾಗಿದ್ರು.. ಆದ್ರೀಗ ಒಂದ್ ಹೆಜ್ಜೆ ಮುಂದೆ ಹೋಗಿರೋ ಬಾಹುಬಲಿ ಸ್ಪಿರಿಟ್ ಸಿನಿಮಾಗಾಗಿ 150 ಕೋಟಿ ರೂಪಾಯಿ ಸಂಭಾವನೆ ಪಡೆದಿರೋದಾಗಿ ತಿಳಿದುಬಂದಿದೆ.. ಹೌದು.. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರು ನಿರ್ದೇಶಿಸಲಿರುವ ಸ್ಪಿರಿಟ್ ಚಿತ್ರಕ್ಕಾಗಿ ಪ್ರಭಾಸ್ 150 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ. ಜೊತೆಗೆ ಆದಿ ಪುರುಷ್ ಚಿತ್ರಕ್ಕೂ ಕೂಡ ಪ್ರಭಾಸ್ 150 ಕೋಟಿ ಪಡೆದಿದ್ದಾರೆ ಎನ್ನಲಾಗಿದೆ. ಈ ಮೂಲಕ ಪ್ರಭಾಸ್ ಅತಿಹೆಚ್ಚು ಸಂಭಾವನೆ ಪಡೆದ ಭಾರತೀಯ ಏಕೈಕ ನಟ ಎನಿಸಿಕೊಂಡಿದ್ದಾರೆ.
ಈ ಮೂಲಕ ಸಲ್ಮಾನ್ ಖಾನ್, ಅಕ್ಷಯ್ ಕುಮಾರನ್ನು ಮೀರಿಸಿದ್ದಾರೆ ಪ್ರಭಾಸ್.. ಪ್ರಭಾಸ್ 10 ವರ್ಷಗಳಲ್ಲಿ 100 ಕೋಟಿಗೆ ಸಂಭಾವನೆ ಹೆಚ್ಚಿಸಿಕೊಂಡ 3ನೇ ಬಿಗ್ ಸ್ಟಾರ್ ಆಗಿದ್ದಾರೆ.. ಸುಲ್ತಾನ್ ಮತ್ತು ಟೈಗರ್ ಜಿಂದಾ ಹೈ ಚಿತ್ರಗಳಿಗೆ ಸಲ್ಮಾನ್ ಖಾನ್ 100 ಕೋಟಿ ಪಡೆದಿದ್ದರು. ಇನ್ನು ಅಕ್ಷಯ್ ಕುಮಾರ್ ಬೆಲ್ ಬಾಟಮ್ ಚಿತ್ರಕ್ಕಾಗಿ 100 ಕೋಟಿ ರೂ. ಸಂಭಾವನೆ ಪಡೆದಿದ್ದರು. ಇದೀಗ ಪ್ರಭಾಸ್ 150 ಕೋಟಿ ಸಂಭಾವನೆ ಪಡೆದಿರೋದಾಗಿ ಸುದ್ದಿ ಆಗಿದ್ದಾರೆ. ಈ ಸುದ್ದಿ ನಿಜವೇ ಆಗಿದ್ದು, ಅಧಿಕೃತಗೊಂಡ್ರೆ ಪ್ರಭಾಸ್ ಅಕ್ಷಯ್ ಕುಮಾರ್ ಹಾಗೂ ಸಲ್ಲುಗಿಂತ ಒಂದ್ ಹೆಜ್ಜೆ ಮುಂದಿದ್ದಾರೆ ಎಂತಲೇ ಅರ್ಥ. ಬಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಾಯಕರೂ ಹೌದು..