ಇನ್ಮುಂದೆ ಥಿಯೇಟರ್ ಮುಂದೆ ಜನ ಟಿಕೆಟ್ ಪಡೆಯೋಕೆ ಕ್ಯೂ ನಿಲ್ಲೋದಾಗ್ಲಿ , ಆನ್ ಲೈನ್ ಮೂಲಕ ಟಿಕೆಟ್ ಖರೀದಿ ಮಾಡೋ ಅವಶ್ಯಕತೆ ಬೀಳೋದಿಲ್ಲ.. ಕಾರಣ ಸರ್ಕಾರವೇ ಇನ್ಮುಂದೆ ಆನ್ ಲೈನ್ ಫ್ಲಾಟ್ ಫಾರ್ಮ್ ಮೂಲಕ ಸಿನಿಮಾ ಟಿಕೆಟ್ ಮಾರುವ ಪ್ಲಾನ್ ಗೆ ಮುಂದಾಗಿದೆ.. ಈ ಮೂಲಕ ಹಲವು ವರ್ಷಗಳ ಸಿನಿಮಾ ಪದ್ದತಿಗೆ ತಿಲಾಂಜಲಿ ಇಡಲಾಗಿದೆ..
ಅಂದ್ಹಾಗೆ ಈ ನಿಯಮ ಜಾರಿಗೆ ಬಂದಿರೋದು ನಮ್ಮ ಕರ್ನಾಟಕದಲ್ಲಿ ಅಲ್ಲ.. ಬದಲಾಗಿ ನೆರೆಯ ಆಂಧ್ರಪ್ರದೇಶದಲ್ಲಿ ಸರ್ಕಾರ ಇಂತಹದೊಂದು ನಿಯಮ ಜಾರಿಗೆ ತರುತ್ತಿದ್ದು, ಇದಕ್ಕೆ ಎಲ್ಲೆಡೆಯಿಂದ ಬಾರೀ ವಿರೋಧ ವ್ಯಕ್ತವಾಗ್ತಿದೆ.. ಯಾಕಂದ್ರೆ, ಸರ್ಕಾರ ಕೇವಲ ಟಿಕೆಟ್ಗಳನ್ನಷ್ಟೇ ಮಾರಾಟ ಮಾಡುವುದಿಲ್ಲ. ಬದಲಾಗಿ, ಎಷ್ಟು ಶೋಗಳನ್ನು ಪ್ರದರ್ಶನ ಮಾಡಬೇಕು. ಒಂದು ಟಿಕೆಟ್ಗೆ ಎಷ್ಟು ಹಣ ನಿಗದಿ ಮಾಡಬೇಕು ಅನ್ನುವುದನ್ನೂ ಸರ್ಕಾರವೇ ನಿರ್ಧರಿಸಲಿದೆ.
ಹೌದು.. ಆಂಧ್ರ ಪ್ರದೇಶ ಸರ್ಕಾರ ನವೆಂಬರ್ 24ರಂದು ಸಿನಿಮಾ ಟಿಕೆಟ್ ವಿತರಣೆಗೆ ಸಂಬಂಧಿಸಿದಂತೆ ಹೊಸ ನೀತಿಯನ್ನು ಜಾರಿಗೆ ತಂದಿದೆ. ಸರ್ಕಾರದ ಆನ್ಲೈನ್ ವೇದಿಕೆ ಮೂಲಕವೇ ಚಿತ್ರಮಂದಿರಗಳು ಆನ್ಲೈನ್ ಟಿಕೆಟ್ ಮಾರಾಟ ಮಾಡುವುದು ಕಡ್ಡಾಯಗೊಳಿಸುವ ಮಸೂದೆಗೆ ಆಂಧ್ರದ ವಿಧಾನಸಭೆಯಲ್ಲಿ ಅಂಗೀಕಾರ ಸಿಕ್ಕಿದೆ.
ಇಂದು ವಿಧಾನ ಪರಿಷತ್ನಲ್ಲಿ ಈ ಹೊಸ ಮಸೂದೆಯನ್ನು ಸರ್ಕಾರ ಪ್ರಸ್ತಾಪಿಸಲಿದೆ. ಈ ಮೂಲಕ ಆಂಧ್ರದಲ್ಲಿ ಸಿನಿಮಾ ಟಿಕೆಟ್ ಮಾರಾಟ ಹಕ್ಕು ಸರ್ಕಾರದ ಪಾಲಾಗಲಿದೆ. ಆಂಧ್ರ ಪ್ರದೇಶದ ಸಿನಿಮಾ ರೆಗ್ಯೂಲೇಷನ್ ಕಾಯ್ದೆ ಅಡಿಯಲ್ಲಿ ಈ ಮಸೂದೆಯನ್ನು ಜಾರಿಗೆ ತರಲಾಗಿದೆ. ಈ ಕಾಯ್ದೆ ಪ್ರಕಾರ, ಆಂಧ್ರದಲ್ಲಿ ಯಾವುದೇ ಸಿನಿಮಾ ದಿನಕ್ಕೆ ನಾಲ್ಕು ಶೋಗಳಿಗಿಂತ ಹೆಚ್ಚು ಪ್ರದರ್ಶನ ಮಾಡುವಂತಿಲ್ಲ. ಸೂಪರ್ಸ್ಟಾರ್ ಸಿನಿಮಾಗಳು ಬಿಡುಗಡೆಯಾದಾಗ ವಿತರಕರು ಹಣ ಮಾಡುವ ಉದ್ದೇಶದಿಂದ ದಿನಕ್ಕೆ ಆರರಿಂದ ಏಳು ಶೋಗಳನ್ನು ಪ್ರದರ್ಶನ ಆಯೋಜಿಸುತ್ತಿದ್ದರು. ಅಲ್ಲದೆ ಒಂದು ಟಿಕೆಟ್ಗೆ 500 ರೂಪಾಯಿಗಳಿಂದ 1000 ಸಾವಿರ ರೂಪಾಯಿಗಳವರೆಗೆ ಟಿಕೆಟ್ ದರವನ್ನು ಹೆಚ್ಚಿಸಲಾಗುತ್ತಿತ್ತು. ಎಂದು ಆಂಧ್ರದ ಮಾಹಿತಿ ಹಾಗೂ ಸಾರ್ವಜನಿಕ ಸಂಪಕ ಸಚಿವ ಪೇರ್ನಿ ವೆಂಕಟ್ರಾಮಯ್ಯ ತಿಳಿಸಿದ್ದಾರೆ.
ಈ ಆನ್ಲೈನ್ ವೇದಿಕೆಯನ್ನು ರಾಜ್ಯ ಸರ್ಕಾರವೇ ನೋಡಿಕೊಳ್ಳುವುದರಿಂದ ತೆರಿಗೆ ವಂಚನೆಗೆ ಕಡಿವಾಣ ಹಾಕಿದಂತಾಗುತ್ತೆ. ನಿರ್ಮಾಪಕರು ಮತ್ತು ವಿತರಕರು ತೆರಿಗೆ ವಂಚನೆ ಮಾಡುವುದನ್ನು ತಪ್ಪಿಸಬಹುದು. ಅಲ್ಲದೆ ಥಿಯೇಟರ್ಗಳಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗೇಟ್ವೇ ಮೂಲಕ ಪ್ರತಿ ದಿನ ಹಣ ವರ್ಗಾವಣೆಯಾಗುತ್ತೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಆನ್ಲೈನ್ ಬುಕಿಂಗ್ ವ್ಯವಸ್ಥೆಯಿಂದ ಜನರಿಗೆ ಹಲವು ಅನುಕೂಲಗಳಿವೆ. ಜನರು ಟಿಕೆಟ್ ಖರೀದಿ ಮಾಡಲು ಸರದಿ ಸಾಲಿನಲ್ಲಿ ನಿಲ್ಲಬೇಕಿಲ್ಲ. ಇದರಿಂದ ನಗರದಲ್ಲಿ ಟ್ರಾಫಿಕ್ ಸಮಸ್ಯೆ, ವಾಯು ಮಾಲಿನ್ಯದ ಜೊತೆ ಬ್ಲ್ಯಾಕ್ ಟಿಕೆಟ್ ಮಾರಾಟ ವ್ಯವಸ್ಥೆಯನ್ನು ತಡೆಯಬಹುದು. ತಮಗೆ ಬೇಕಾದ ಚಿತ್ರಮಂದಿರಗಳಲ್ಲಿ, ಆನ್ಲೈನ್ ಮೂಲಕ, ಫೋನ್ ಮೂಲಕ, ಎಸ್ಎಂಎಸ್ ಮಾಡುವ ಮಾಡುವ ಮೂಲಕ ಟಿಕೆಟ್ ಪಡೆಯಬಹುದಾಗಿದೆ ಎಂದು ಸಚಿವರು ವಿವರಿಸಿದ್ದಾರೆ. ಆದ್ರೆ ಇಂತಹ ನಿಯಮದಿಂದಾಗಿ ಬಿಗ್ ಬಜೆಟ್ ಸಿನಿಮಾಗಳಿಗೆ ನಷ್ಟವಾಗಲಿದೆ..