ಬಂದೇ ಬಿಡ್ತು.. ಆರ್ ಆರ್ ಆರ್ ನ `ಜನನಿ’ ಸಾಂಗ್
ನಿರ್ದೇಶಕ ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ಆರ್ ಆರ್ ಆರ್ ಸಿನಿ ಪ್ರೇಕ್ಷಕರಲ್ಲಿ ಭಾರಿ ಕುತೂಹಲವನ್ನು ಮೂಡಿಸಿದೆ.
ಈ ಚಿತ್ರದಲ್ಲಿ ಯಂಗ್ ಟೈಗರ್ ಜೂ.ಎನ್ ಟಿಆರ್ ಕೊಮುರಂ ಭೀಮ್ ಪಾತ್ರದಲ್ಲಿ, ಅಲ್ಲೂರಿ ಸೀತಾರಾಮರಾಜನಾಗಿ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಟಿಸುತ್ತಿರುವುದು ಗೊತ್ತೇ ಇದೆ.
ಈ ಸಿನಿಮಾದ ‘ನಾಟು ನಾಟು’ ಮತ್ತು ‘ದೋಸ್ತಿ’ ಹಾಡುಗಳಿಗೆ ಸಿನಿಮಾ ಪ್ರೇಕ್ಷಕರು ಫುಲ್ ಮಾಕ್ರ್ಸ್ ಕೊಟ್ಟಿದ್ದಾರೆ.
ಇದೀಗ ಸಿನಿಮಾದ ಮತ್ತೊಂದು ಜನನಿ ಹಾಡು ರಿಲೀಸ್ ಆಗಿದೆ. ಇದು ದೇಶಭಕ್ತಿಯಿಂದ ಕೂಡಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
‘ಜನನಿ.. ಪ್ರಿಯಾ ಭಾರತ ಜನನಿ..’ ಹಾಡು ‘ಆರ್‍ಆರ್‍ಆರ್’ ಚಿತ್ರದ ಆತ್ಮ ಇದ್ದಂತೆ ಎಂದು ಎಸ್‍ಎಸ್ ರಾಜಮೌಳಿ ಹೇಳಿದ್ದಾರೆ.
ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಈ ಹಾಡಿಗಾಗಿ ಎರಡು ತಿಂಗಳ ಕಾಲ ಶ್ರಮಿಸಿದ್ದಾರೆ. ಹಾಡಿಗೆ ಸಾಹಿತ್ಯವನ್ನೂ ಬರೆದಿದ್ದಾರೆ.