ಕಮಲ್ ಹಾಸನ್ ಬದಲು ಬಿಗ್ ಬಾಸ್ ನಿರೂಪಣೆ ಮಾಡಲಿದ್ದಾರೆ “ಶಿವಗಾಮಿ”
ಕನ್ನಡ , ಹಿಂದಿ ಹೀಗೆ ಪ್ರಸಾರವಾಗುತ್ತಿರುವ ಎಲ್ಲಾ ಬಾಷೆಗಳಲ್ಲೂ ಜನಪ್ರಿಯತೆ ಗಳಿಸಿರುವ ರಿಯಾಲಿಟಿ ಶೋ ‘ಬಿಗ್ ಬಾಸ್’ ಗೆ ತಮಿಳಿನಲ್ಲೂ ಕೂಡ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ.. ಕನ್ನಡದಲ್ಲಿ ಸುದೀಪ್ ನಿರೂಪಣೆ, ಹಿಂದಿಯಲ್ಲಿ ಸಲ್ಮಾನ್ ಖಾನ್ ನಿರೂಪಣೆ ಜನರಿಗೆ ಆ ಶೋ ಮೇಲಿನ ಒಲವು ಹೆಚ್ಚಿಸಿದ್ರೆ , ತಮಿಳಿನಲ್ಲಿ ಕಮಲ್ ಹಾಸನ್ ಅವರ ನಿರೂಪಣೆಗಾಗಿ ಜನ ವಾರ ಪೂರ್ತಿ ಕಾಯ್ತಾಯಿರುತ್ತಾರೆ..
ಆದ್ರೆ ಈಗ ಕಮಲ್ ಹಾಸನ್ ಅವರಿಗೆ ಕೊರೊನಾ ಪಾಸಿಟಿವ್ ಆಗಿದೆ.. ಅವರ ಆರೋಗ್ಯ ವಿಚಾರವಾಗಿ ಅಭಿಮಾನಿಗಳು ಆತಂಕಗೊಂಡಿರುವುದು ಒಂದೆಡೆಯಾದ್ರೆ ಅನುಪಸ್ಥಿತಿಯಲ್ಲಿ ಬಿಗ್ ಬಾಸ್ ಶೋ ನಿರೂಪಣೆ ಮಾಡೋದ್ಯಾರು ಅನ್ನೋ ಪ್ರಶ್ನೆಯೂ ಎದ್ದಿತ್ತು..ಆದ್ರೆ ಇದೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ.. ಸೌತ್ ಇಂಡಿಯಾದಲ್ಲಿ ನಟಿಯರ ಪೈಕಿ ತಮ್ಮದೇ ಆದ ಮೇರು ವರ್ಚಸ್ಸು ಹೊಂದಿರುವ ಸ್ಟಾರ್ ನಟಿ ರಮ್ಯಾ ಕೃಷ್ಣನ್ ಕಮಲ್ ಬದಲಿಗೆ ಅವರ ಅನುಪಸ್ಥಿತಿಯಲ್ಲಿ ಶೋ ನಡೆಸಿಕೊಡಲಿದ್ದಾರೆ..
ಈ ಹಿಂದೆ ಕಮಲ್ ಹಾಸನ್ ಮಗಳು ಶ್ರುತಿ ಹಾಸನ್ ಈ ಶೋ ನಡೆಸಿಕೊಡ್ತಾರೆ ಎನ್ನಲಾಗಿತ್ತು.. ಆದ್ರೀಗ ಸ್ಟಾರ್ ಹಿರಿಯ ನಟಿ ರಮ್ಯಾ ಕೃಷ್ಣನ್ ಈ ಜವಾಬ್ದಾರಿಯನ್ನ ತಮ್ಮ ಹೆಗಲಿಗೆ ತೆಗೆದುಕೊಂಡಿದ್ದಾರೆ.. ಕಮಲ್ ಹಾಸನ್ ಸೆಟ್ ಗೆ ಮರಳುವ ವರೆಗೂ ರಮ್ಯಾ ಕೃಷ್ಣನ್ ಅವರೇ ಶೋ ನಡೆಸಿಕೊಡಲಿದ್ದಾರೆ..ಅಂದ್ಹಾಗೆ ರಮ್ಯಾ ಕೃಷ್ಣನ್ ಅವರಿಗೆ ಬಿಗ್ ಬಾಸ್ ನಿರೂಪಣೆಯ ಅನುಭವ ಈಗಾಗಲೇ ಇದೆ.. ಈ ಹಿಂದೆ 2019ರಲ್ಲಿ ರಮ್ಯಾ ಕೃಷ್ಣನ್ ಬಿಗ್ ಬಾಸ್ ಶೋ ನಿರೂಪಣೆ ಮಾಡಿದ್ರು.. ಆದ್ರೆ ತೆಲುಗಿನಲ್ಲಿ.. ನಾಗಾರ್ಜುನ್ ಅವರ ಅನುಪಸ್ಥಿತಿಯಲ್ಲಿ ರಮ್ಯಾ ಕೃಷ್ಣನ್ ಶೋ ನಿರೂಪಿಸಿದ್ದರು..