ರವಿಚಂದ್ರನ್ ನಟನೆಯ ಸೂಪರ್ ಹಿಟ್ ದೃಶ್ಯ ಸಿನಿಮಾದ ಸೀಕ್ವೆಲ್ ದೃಶ್ಯ 2 ಶೀಘ್ರವೇ ಬರಲಿದೆ.. ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ತಾಯಿದೆ.. ಮಳಯಾಳಂನಲ್ಲಿ ಮೋಹನ್ ಲಾಲ್ ನಟಿಸಿದ್ದ ದೃಶ್ಯಂ ಸಿನಿಮಾವನ್ನ ಸೌತ್ ಇಂಡಿಯಾದ ಎಲ್ಲಾ ಭಾಷೆಗಳಲ್ಲೂ ರೀಮೇಕ್ ಮಾಡಲಾಗಿತ್ತು.. ಎಲ್ಲಾ ಬಾಷೆಗಳಲ್ಲೂ ಸಿನಿಮಾ ಸೂಪರ್ ಹಿಟ್ ಆಗಿತ್ತು..
ಅಂತೆಯೇ 2014 ಕನ್ನಡದಲ್ಲಿ ರವಿಚಂದ್ರನ್ ನಟನೆಯ ದೃಶ್ಯ ಸಿನಿಮಾ ರಿಲೀಸ್ ಆಗಿತ್ತು.. ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗೆ ಜನ ಜೈಕಾರ ಹಾಕಿದ್ರು.. ಇದೀಗ ತೆಲುಗು , ಮಳಯಾಳಂನಲ್ಲಿ ದೃಶ್ಯಂ 2 ಬಂದಾಗಿದೆ.. ಆದ್ರೆ ಎರೆಡೂ ಭಾಷೆಗಳಲ್ಲೂ ಈ ಸಿನಿಮಾ ನೇರವಾಗಿ ಒಟಿಟಿಗೆ ಬಮದಿದ್ದವು.. ಇದೀಗ ಕನ್ನಡದಲ್ಲೂ ದೃಶ್ಯ 2 ಬರುತ್ತಿದೆ.. ಆದರೆ ಈ ಸಿನಿಮಾ ಒಟಿಟಿಯಲ್ಲಿ ಬರೋದಿಲ್ಲ , ಥಿಯೇಟರ್ ಗಳಲ್ಲೇ ರಿಲೀಸ್ ಆಗಲಿದೆ.
2014 ರ ‘ದೃಶ್ಯ’ ಸಿನಿಮಾದಲ್ಲಿ ರವಿ ಬೋಪಣ್ಣ ಮುಚ್ಚಿ ಹಾಕಿದ್ದ ಕೊಲೆಯ ರಹಸ್ಯ ಈ ಸಿನಿಮಾದಲ್ಲಿ ತೆರೆದುಕೊಳ್ಳಲಿವೆ ಎಂಬುದನ್ನು ಟ್ರೇಲರ್ ಹೇಳುತ್ತಿದೆ. 2014 ರ ‘ದೃಶ್ಯ’ ಸಿನಿಮಾ ನಿರ್ದೇಶಿಸಿದ್ದ ಪಿ.ವಾಸು ಅವರೇ ‘ದೃಶ್ಯ 2’ ಅನ್ನು ಸಹ ನಿರ್ದೇಶನ ಮಾಡಿದ್ದಾರೆ. ರವಿಚಂದ್ರನ್ ಜೊತೆಗೆ ನವ್ಯಾ ನಾಯರ್, ಮಕ್ಕಳ ಪಾತ್ರದಲ್ಲಿ ಸ್ವರೂಪಿಣಿ ನಾರಾಯಣ್, ಉನ್ನತಿ, ಮೊದಲ ಸಿನಿಮಾದಲ್ಲಿದ್ದ ಸಾಧು ಕೋಕಿಲ, ತಮಿಳಿನ ಪ್ರಭು, ಆಶಾ ಶರತ್ ಇವರುಗಳ ಜೊತೆಗೆ ಮತ್ತೊಂದು ಮುಖ್ಯ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ಸಹ ಇರಲಿದ್ದಾರೆ.