ಭಾರಿ ಕತೂಹಲ ಮೂಡಿಸಿರುವ ‘ದೃಶ್ಯ 2’ ಡಿಸೆಂಬರ್ 10ರಂದು ತೆರೆಗೆ…!
ಕಿಚ್ಚ ಸುದೀಪ ಅವರಿಂದ “ದೃಶ್ಯ 2” ಚಿತ್ರದ ಟ್ರೇಲರ್ ಅನಾವರಣ..!
ಸಖತ್ ಥ್ರಿಲ್ಲಿಂಗ್ ಆಗಿದೆ ‘ದೃಶ್ಯ 2’ ಟ್ರೇಲರ್
ರವಿಚಂದ್ರನ್ ನಟನೆಯ ಸೂಪರ್ ಹಿಟ್ ದೃಶ್ಯ ಸಿನಿಮಾದ ಸೀಕ್ವೆಲ್ ದೃಶ್ಯ 2 ಶೀಘ್ರವೇ ಬರಲಿದೆ.. ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ತಾಯಿದೆ..
ಅಂದ್ಹಾಗೆ “ದೃಶ್ಯ” ಚಿತ್ರದ ಮುಂದುವರಿದ ಭಾಗ “ದೃಶ್ಯ 2”. ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿ ಈ ಸಮಾರಂಭಕ್ಕೆ ಬಂದಿದ್ದು, ನನಗೆ ಖುಷಿಯಾಗಿದೆ. ರವಿ ಅಣ್ಣ ನನ್ನನ್ನು, ನಮ್ಮ ಕುಟುಂಬದವನು ಎಂದದ್ದು ಇನ್ನೂ ಸಂತೋಷ ತಂದಿದೆ. ಈ ಚಿತ್ರ ಮಲೆಯಾಳಂ, ತೆಲುಗು ಭಾಷೆಯಲ್ಲಿ ಬಂದಿದೆ ಅಂದರು. ಆದರೆ ನಾನು ಯಾವ ಭಾಷೆಯಲ್ಲೂ ಈ ಸಿನಿಮಾ ನೋಡಿಲ್ಲ. ಹಾಗಾಗಿ ನನಗೆ ಕಥೆ ಗೊತ್ತಿಲ್ಲ. ನನ್ನ ಹೆಂಡತಿ ಮಲೆಯಾಳಿ. ಅವರು ಮಲೆಯಾಳಂ ಚಿತ್ರ ನೋಡುವಾಗ ನನಗೂ ತೋರಿಸುತ್ತಾರೆ. ನಾನು ಸಬ್ ಟೈಟಲ್ ನೋಡುತ್ತಿರುತ್ತೇನೆ. ಒಳ್ಳೆಯ ಕಲಾವಿದರು ಹಾಗೂ ಒಳ್ಳೆಯ ತಂತ್ರಜ್ಞರು ಸೇರಿ ಮಾಡಿದಾಗ ಅದು ಒಳ್ಳೆಯ ಸಿನಿಮಾನೇ ಆಗಿರುತ್ತದೆ. ದೃಶ್ಯ ಚಿತ್ರವನ್ನು ಕನ್ನಡದಲ್ಲೇ ನೋಡಿದ್ದೀನಿ. ಎರಡನೇ ಭಾಗವನ್ನು ಕನ್ನಡದಲ್ಲೇ ನೋಡುತ್ತೇನೆ. ನೀವು ಮೂರನೇ ಭಾಗ ಮಾಡುವುದಿದ್ದರೆ ಮೊದಲು ಕನ್ನಡದಲ್ಲೇ ಮಾಡಿ ಎಂದು ಸುದೀಪ್ ಸಲಹೆ ನೀಡಿದರು.
ದೃಶ್ಯ ಮೊದಲ ಭಾಗದ ಸಿನಿಮಾ ಮಾತುಕತೆ ಆರಂಭವಾಗಿದ್ದು, ನಮ್ಮ ಮಾಣಿಕ್ಯ ಚಿತ್ರದ ಚಿತ್ರೀಕರಣ ಸಮಯದಲ್ಲಿ. ನಾನು ರವಿ ಸರ್ ಗೆ ಒಂದು ಚೆನ್ನಾಗಿರುವ ಮಲೆಯಾಳಂ ಕಥೆ ಬಂದಿದೆ ಕೇಳಿ ಅಂತ ಹೇಳಿದೆ. ಅವರು ಮೊದಲು ಕೇಳಲಿಲ್ಲ. ನಂತರ ಕೆಲವು ದಿನಗಳ ನಂತರ ಕಥೆ ಕೇಳಿದರು. ದೃಶ್ಯ ಆರಂಭವಾಯಿತು ಎಂದು ಸುದೀಪ್ ಆ ದಿನಗಳನ್ನು ನೆನಪಿಸಿಕೊಂಡರು.
ಬಳಿಕ ಮಾತನಾಡಿದ ರವಿಚಂದ್ರನ್ ಅವರು ಸುದೀಪ್ ನನ್ನ ಮಗ. ಆತನನ್ನು ಬರಮಾಡಿಕೊಳ್ಳಲು ನಾನೇ ಮುಖ್ಯದ್ವಾರದ ಬಳಿ ಹೋಗಿದ್ದೆ. ನನ್ನ ಸಮಾರಂಭಕ್ಕೆ ಬರಲು ಸುದೀಪ್ ಗೆ ಕರೆಯಬೇಕೆಂದು ಏನು ಇಲ್ಲ. ಆರ್ಡರ್ ಮಾಡಬಹುದು. ಏಕೆಂದರೆ ಆತ ನನ್ನ ಮಗ. ಸುದೀಪ್ ಸಮಾರಂಭಗಳಿಗೆ ನಾನು ಹಾಗೆ ಹೋಗುತ್ತೇನೆ. ನಮ್ಮಿಬ್ಬರಲ್ಲಿ ಆ ಬಾಂಧವ್ಯವಿದೆ. ಎಂದು ಚಿತ್ರೀಕರಣದ ಕೆಲವು ಅನುಭವಗಳನ್ನು ಹಂಚಿಕೊಂಡರು.
ಸಂಗೀತ ನೀಡಿರುವ ಅಜನೀಶ್ ಲೋಕನಾಥ್ ಸಂಗೀತದ ಬಗ್ಗೆ, ಪ್ರಮೋದ್ ಶೆಟ್ಟಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು.
E4 entertainment ಲಾಂಛನದಲ್ಲಿ ನಿರ್ಮಾಣವಾಗಿದ್ದು, ನಿರ್ಮಾಪಕರಲೊಬ್ಬರಾದ ಮುಖೇಶ್ ಮೆಹ್ತಾ ಮಾತನಾಡಿ ಕನ್ನಡದಲ್ಲಿ ಇದು ನಮ್ಮ ಎರಡನೇ ಚಿತ್ರ. ಎಲ್ಲರ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಟ್ರೇಲರ್ ಬಿಡುಗಡೆಗೆ ಬಂದಿರುವ ಸುದೀಪ್ ಅವರಿಗೆ ಧನ್ಯವಾದ ಎಂದರು.
ವಿಷಯಗಳನ್ನು ಹಂಚಿಕೊಂಡರು. ಮೊದಲ ಬಾರಿಗೆ ಕನ್ನಡ ಸಿನಿಮಾವೊಂದನ್ನು ಬಿಡುಗಡೆ ಮಾಡುತ್ತಿರುವ ಜೀ ಸಿನಿಮಾಸ್ ನ ನೀರಜ್ ಸಹ ಕೆಲವು ವಿಚಾರಗಳನ್ನ ಹಂಚಿಕೊಂಡ್ರು..
ಮಳಯಾಳಂನಲ್ಲಿ ಮೋಹನ್ ಲಾಲ್ ನಟಿಸಿದ್ದ ದೃಶ್ಯಂ ಸಿನಿಮಾವನ್ನ ಸೌತ್ ಇಂಡಿಯಾದ ಎಲ್ಲಾ ಭಾಷೆಗಳಲ್ಲೂ ರೀಮೇಕ್ ಮಾಡಲಾಗಿತ್ತು.. ಎಲ್ಲಾ ಬಾಷೆಗಳಲ್ಲೂ ಸಿನಿಮಾ ಸೂಪರ್ ಹಿಟ್ ಆಗಿತ್ತು..
ಅಂತೆಯೇ 2014 ಕನ್ನಡದಲ್ಲಿ ರವಿಚಂದ್ರನ್ ನಟನೆಯ ದೃಶ್ಯ ಸಿನಿಮಾ ರಿಲೀಸ್ ಆಗಿತ್ತು.. ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗೆ ಜನ ಜೈಕಾರ ಹಾಕಿದ್ರು.. ಇದೀಗ ತೆಲುಗು , ಮಳಯಾಳಂನಲ್ಲಿ ದೃಶ್ಯಂ 2 ಬಂದಾಗಿದೆ.. ಆದ್ರೆ ಎರೆಡೂ ಭಾಷೆಗಳಲ್ಲೂ ಈ ಸಿನಿಮಾ ನೇರವಾಗಿ ಒಟಿಟಿಗೆ ಬಮದಿದ್ದವು.. ಇದೀಗ ಕನ್ನಡದಲ್ಲೂ ದೃಶ್ಯ 2 ಬರುತ್ತಿದೆ.. ಆದರೆ ಈ ಸಿನಿಮಾ ಒಟಿಟಿಯಲ್ಲಿ ಬರೋದಿಲ್ಲ , ಥಿಯೇಟರ್ ಗಳಲ್ಲೇ ರಿಲೀಸ್ ಆಗಲಿದೆ.
2014 ರ ‘ದೃಶ್ಯ’ ಸಿನಿಮಾದಲ್ಲಿ ರವಿ ಬೋಪಣ್ಣ ಮುಚ್ಚಿ ಹಾಕಿದ್ದ ಕೊಲೆಯ ರಹಸ್ಯ ಈ ಸಿನಿಮಾದಲ್ಲಿ ತೆರೆದುಕೊಳ್ಳಲಿವೆ ಎಂಬುದನ್ನು ಟ್ರೇಲರ್ ಹೇಳುತ್ತಿದೆ. 2014 ರ ‘ದೃಶ್ಯ’ ಸಿನಿಮಾ ನಿರ್ದೇಶಿಸಿದ್ದ ಪಿ.ವಾಸು ಅವರೇ ‘ದೃಶ್ಯ 2’ ಅನ್ನು ಸಹ ನಿರ್ದೇಶನ ಮಾಡಿದ್ದಾರೆ. ರವಿಚಂದ್ರನ್ ಜೊತೆಗೆ ನವ್ಯಾ ನಾಯರ್, ಮಕ್ಕಳ ಪಾತ್ರದಲ್ಲಿ ಸ್ವರೂಪಿಣಿ ನಾರಾಯಣ್, ಉನ್ನತಿ, ಮೊದಲ ಸಿನಿಮಾದಲ್ಲಿದ್ದ ಸಾಧು ಕೋಕಿಲ, ತಮಿಳಿನ ಪ್ರಭು, ಆಶಾ ಶರತ್ ಇವರುಗಳ ಜೊತೆಗೆ ಮತ್ತೊಂದು ಮುಖ್ಯ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ಸಹ ಇರಲಿದ್ದಾರೆ.