ತಂದೆಯ ನಿರ್ಮಾಣದಲ್ಲಿ ಮೊದಲ ಬಾರಿಗೆ ಜಾನ್ವಿ ನಟನೆ
ಮುಂಬೈ : ಬಾಲಿವುಡ್ ನ ಯುವ ನಟಿ , ಸ್ಟಾರ್ ನಟಿ ದಿವಂಗತ ಶ್ರೀದೇವಿ ಹಾಗೂ ನಿರ್ಮಾಪಕ ಬೋನಿ ಕಪೂರ್ ಪುತ್ರ ಜಾನ್ವಿ ಕಪೂರ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.. ಮರಾಠಿಯ ಸೈರಾಟ್ ನ ರಿಮೇಕ್ “ಧಡಾಕ್” ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದ ಜಾನ್ವಿ ಈಗಾಗ್ಲೇ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ..
ಆದ್ರೆ ಜಾನವಿ ಇದೇ ಮೊದಲ ಬಾರಿಗೆ ತಂದೆ ಬೋನಿ ಕಪೂರ್ ನಿರ್ಮಾಣದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.. ಹೌದು ‘ಮಿಲ್ಲಿ’ ಎಂಬ ಹೊಸ ಸಿನಿಮಾ ಮಾಡುತ್ತಿದ್ದು, ಈ ಸಿನಿಮಾಗೆ ತಂದೆಯೇ ಖುದ್ದು ಬಂಡವಾಳ ಹೂಡ್ತಿದ್ದಾರೆ.. ಈ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಜಾನ್ವಿ , ಮಿಲ್ಲಿ – ನನ್ನ ತಂದೆಯೊಂದಿಗಿನ ನನ್ನ ಮೊದಲ ಚಿತ್ರ. ನಾನು ನಿಮ್ಮೊಂದಿಗೆ ಕೆಲಸ ಮಾಡುವುದನ್ನ ತಿಳಿದಾಗ ನನಗೆ ಬಹಳ ಖುಷಿಯಾಯ್ತು. ನೀವು ಕೈಗೆತ್ತಿಕೊಳ್ಳುವ ಪ್ರತಿಯೊಂದು ಚಿತ್ರಕ್ಕೂ ಸಂಪೂರ್ಣವಾಗಿ ನಿಮ್ಮನ್ನು ನೀವು ಅರ್ಪಿಸಿಕೊಳ್ಳುತ್ತಿರಾ.
ಈ ಸಿನಿಮಾ ನನಗೆ ತುಂಬಾ ವಿಶೇಷವಾಗೋದಕ್ಕೆ ಇದೊಂದೆ ಕಾರಣವಲ್ಲ. ಸಿನಿಮಾದ ಮೇಲಿರುವ ಪ್ರೀತಿ ಮತ್ತು ಸಿನಿಮಾಗಾಗಿ ಸಂಪೂರ್ಣ ಜೀವನ ಸೇವಿಸಿದವರೊಂದಿಗೆ ಕೆಲಸ ಮಾಡಲು ನನಗೆ ಇನ್ನು ಸ್ಪೂರ್ತಿದಾಯಕವಾಗಿರುತ್ತೆ. ಅಂತಹವರಲ್ಲಿ ಮಾತುಕುಟ್ಟಿ ಕ್ಸೇವಿಯರ್ ಸರ್ ಕೂಡ ಒಬ್ಬರು. ನೋಬಲ್ ಥಾಮಸ್ ನಿಮ್ಮ ಮಾರ್ಗದರ್ಶನ ಮತ್ತು ತಾಳ್ಮೆಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ನೀವು ಪ್ರಾಮಾಣಿಕವಾಗಿ ಮತ್ತು ಸಾಕಷ್ಟು ಕಷ್ಟಪಟ್ಟು ಕೆಲಸ ಮಾಡಿದ್ದೀರಿ. ಪ್ರಯಾಣವು ಎಷ್ಟೇ ಕಠಿಣವಾಗಿದ್ದರೂ ಅದು ಕಷ್ಟ ಎನಿಸುವುದಿಲ್ಲ. ಈ ಕಷ್ಟಗಳೇ ಸಿನಿಮಾ ಇನ್ನೂ ಯಶಸ್ವಿಯಾಗಿ ಮಾಡಲು ಸಾಧ್ಯವಾಗುತ್ತೆ ಎಂದು ಹೇಳಿದ ಜಾನ್ವಿ ಅಭಿಮಾನಿಗಳಿಗೆ, ಈ ಸಿನಿಮಾವನ್ನು ನೀವು ನೋಡಿದಾಗ ಹೆಮ್ಮೆಪಡುತ್ತಿರಾ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.