ಮದುವೆಯ ಮೆಹಂದಿಗೆ ಕತ್ರೀನಾ ಖರ್ಚು ಮಾಡ್ತಿರೋದೆಷ್ಟು..?
ಮುಂಬೈ: ಬಾಲಿವುಡ್ ನ ಸ್ಟಾರ್ ನಟಿ ಕತ್ರೀನಾ ಕೈಫ್ ಹಾಗೂ ಆಕೆಯ ಬಾಯ್ ಫ್ರೆಂಡ್ ವಿಕ್ಕಿ ಕೌಶಾಲ್ ಇದೇ ಡಿಸೆಂಬರ್ ನಲ್ಲಿ ವೈಹಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.. ಡಿ.12ರಿಂದ 17ನೇ ತಾರೀಖಿನ ಅವಧಿಯಲ್ಲಿ ರಾಜಸ್ಥಾನದ ಹೋಟೆಲೊಂದರಲ್ಲಿ ಕತ್ರಿನಾ ಹಾಗೂ ವಿಕ್ಕಿ ವಿವಾಹ ನಡೆಯಲಿದೆ. ಈಗಾಗಲೇ 10 ಮಂದಿಯ ತಂಡವೊಂದು ಹೋಟೆಲ್‌ಗೆ ತೆರಳಿ ವಿವಾಹ ಸಮಾರಂಭದ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ ಕತ್ರೀನಾ ಮುದೆವೆ ಸಂಬಂಧ ಮತ್ತೊಂದು ವಿಚಾರ ಹೊರಬಿದ್ದಿದೆ.. ಕತ್ರೀನಾ ಮದುವೆಗೆ ಸುಮಾರು 1 ಲಕ್ಷ ರೂ. ವೆಚ್ಚದ ಮೆಹಂದಿ ಬಳಸಲಾಗ್ತಿದೆ ಎಂದು ಹೇಳಲಾಗ್ತಿದೆ. ಜೋಧ್‍ಪುರದ ಪಾಲಿ ಜಿಲ್ಲೆಯ ಸೋಜತ್ ಮೆಹೆಂದಿ ಎಂಬ ವಿಶೇಷ ರೀತಿಯ ಗೋರಂಟಿ ವಧು-ವರರಿಗೆ ಬಳಸಲಾಗುತ್ತಿದೆ. ಸೋಜತ್‍ನ ಕುಶಲಕರ್ಮಿಗಳು ಸ್ವಾಭಾವಿಕವಾಗಿ ಮೆಹಂದಿಯನ್ನು ತಯಾರಿಸುತ್ತಿದ್ದಾರೆ ಮತ್ತು ಅದಕ್ಕೆ ಯಾವುದೇ ರಾಸಾಯನಿಕವನ್ನು ಸೇರಿಸುವುದಿಲ್ಲ.
ಸೋಜತ್ ಗೋರಂಟಿಯನ್ನು ಕೈಯಿಂದ ತಯಾರಿಸಿ ಕತ್ರಿನಾಗೆ ಕಳುಹಿಸಲಾಗುವುದು. ಸೋಜತ್‍ನ ಮೆಹಂದಿ ಮಾರಾಟಗಾರರ ಪ್ರಕಾರ, ಕತ್ರಿನಾ ಅವರ ಮದುವೆಗೆ ಮೆಹಂದಿ ತಯಾರಿಗೆ ಸುಮಾರು 50,000 ರಿಂದ 1 ಲಕ್ಷ ರೂಪಾಯಿ ವೆಚ್ಚವಾಗುತ್ತದೆ ಎನ್ನಲಾಗಿದೆ.. ಅಂದ್ಹಾಗೆ ಕತ್ರೀನಾ ತಮ್ಮ ಮದುವೆಗೆ ಬರುವ ದಂಪತಿಗಳಿಗೆ ಒಂದು ಕಂಡೀಷನ್ ಇಟ್ಟಿದ್ದಾರೆ..
ಅದೇನೆಂದ್ರೆ ವಿಕ್ಕಿ ಕೌಶಲ್ ಅವರ ವಿವಾಹ ಸಮಾರಂಭಕ್ಕೆ ಆಗಮಿಸುವ ಅತಿಥಿಗಳಿಗೆ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ತಮ್ಮ ವಿವಾಹದ ಸಂದರ್ಭದಲ್ಲಿ ಅತಿಥಿಗಳು ಮೊಬೈಲ್ ಬಳಸದಂತೆ ನೋಡಿಕೊಳ್ಳಬೇಕು ಎಂದು ಸಮಾರಂಭ ಆಯೋಜಕರಿಗೆ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ. ವಿವಾಹದ ಫೋಟೊ ಮತ್ತು ವೀಡಿಯೋಗಳನ್ನು ತೆಗೆದುಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಹರಡುವುದಕ್ಕೆ ಅವಕಾಶ ನೀಡಬಾರದು. ವಿವಾಹ ಸಮಾರಂಭದ ಸ್ಥಳದಲ್ಲಿ ನಮ್ಮ ಖಾಸಗಿತನಕ್ಕೆ ಧಕ್ಕೆಯಾಗದಂತೆ ಭದ್ರತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಅಂದ್ಹಾಗೆ ಈ ಹಿಂದೆ ನಟಿ ಪ್ರಿಯಾಂಕಾ ಚೋಪ್ರಾ-ನಿಕ್ ಜಾನ್ಸನ್ ಹಾಗೂ ದೀಪಿಕಾ ಪಡುಕೋಣೆ-ರಣವೀರ್ ಸಿಂಗ್ ಜೋಡಿ ವಿವಾಹ ಸಂದರ್ಭದಲ್ಲೂ ಅತಿಥಿಗಳು ಮೊಬೈಲ್ ಬಳಸುವುದಕ್ಕೆ ನಿಷೇಧ ಹೇರಲಾಗಿತ್ತು.