‘ಸಖತ್’ ಸಿನಿಮಾಗೆ ಎದುರಾಗಿತ್ತು ಸಂಕಷ್ಟ : ಕ್ಷಮೆಯಾಚಿಸಿದ್ದ ಸುನಿ..!
ಗೋಲ್ಡನ್ ಸ್ಟಾರ್ ಗಣೇಶ್ ನಟನೆ ಹಾಗೂ ಸಿಂಪಲ್ ಸುನಿ ನಿರ್ದೇಶನದ ‘ಸಖತ್’ ಸಿನಿಮಾ ನವೆಂಬರ್ 26 ರಾಜ್ಯಾದ್ಯಂತ ರಿಲೀಸ್ ಆಗಿದೆ.. ಚಮಕ್ ಬಳಿಕ ಗಣೇಶ್ ಹಾಗೂ ಸಿಂಪಲ್ ಸುನಿ ಕಾಂಬಿನೇಷನ್ ಸಿನಿಪ್ರಿಯರಲ್ಲಿ ಕುತೂಹಲ ಕೆರಳಿಸಿತ್ತು. ಆದ್ರೆ ಸಿನಿಮಾ ರಿಲೀಸ್ ಆದ ದಿನವೇ ಅದಕ್ಕೆ ಸ್ಟೇ ಆರ್ಡರ್ ತರುವ ಯತ್ನ ನಡೆದದಿತ್ತು.,. ಹೀಗಾಗಿ ಶೋ ನಿಲ್ಲುವ ಸಂಕಷ್ಟ ಎದುರಾಗಿತ್ತು.. ಗಣೇಶ್, ನಿಶ್ವಿಕಾ ನಾಯ್ಡು ನಟಿಸಿದ ಈ ಸಿನಿಮಾ ವಿರುದ್ಧ ಸಂಸ್ಥೆಯೊಂದು ಕೋರ್ಟ್ ಮೆಟ್ಟಿಲೇರಿತ್ತು..
ಹೌದು.. ಸಿನಿಮಾ ರಿಲೀಸ್ ಗೆ ಹಿಂದಿನ ದಿನವೇ ‘ಸಖತ್’ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡಬಾರದೆಂದು ಆಗ್ರಹಿಸಿ ಅಂಧರ ಅಸೋಸಿಯೇಷನ್ ನ್ಯಾಯಾಲಯದಲ್ಲಿ ಸ್ಟೇ ತರಲು ಮುಂದಾಗಿತ್ತು.. ಸಿನಿಮಾದಲ್ಲಿ ಅಂಧರಿಗೆ ಅವಮಾನ ಆಗುವಂತಹ ದೃಶ್ಯಗಳಿವೆ ಎನ್ನಲಾಗಿದ್ದು, ಸಿನಿಮಾ ಪ್ರದರ್ಶನ ನಿಲ್ಲಿಸುವಂತೆ ಕೋರ್ಟ್ ಮೊರೆ ಹೋಗಲು ಅಂಧರ ಸಮುದಾಯ ಮುಂದಾಗಿತ್ತು ಎನ್ನಲಾಗಿದೆ..
ಆದ್ರೆ ಈ ವಿಚಾರ ಗೊತ್ತಾಗ್ತಿದ್ದಂತೆ ಸಿಂಪಲ್ ಸುನಿ ಕ್ಷಮೆಯಾಚಿಸಿದ್ದಾರೆ.. ಪತ್ರದ ಮೂಲಕ ಕ್ಷಮೆ ಕೋರಿರುವ ಸುನಿಲ್ , “ನೀವು ಹೇಳುವ ತಿದ್ದುಪಡಿಗಳನ್ನು ಸರಿಪಡಿಸಿಕೊಳ್ಳಲು ಒಪ್ಪಿರುತ್ತೇನೆ. ಹೀಗಾಗಿ ನೀವು ಚಿತ್ರ ಬಿಡುಗಡೆ ಅನುಕೂಲ ಮಾಡಿಕೊಡಬೇಕೆಂದು ವಿನಂತಿಸಿಕೊಳ್ಳುತ್ತೇನೆ. ತಿಳಿದೋ.. ತಿಳಿಯದೆಯೋ ತಪ್ಪಾಗಿದ್ದರೆ ನಾನು ಮತ್ತು ನನ್ನ ತಂಡದ ಪರವಾಗಿ ನಿಮ್ಮಲ್ಲಿ ಕ್ಷಮೆಯಾಚಿಸುತ್ತೇನೆ.. ಮನ್ನಿಸಿ.” ಎಂದು ಸುನಿ ಅವರು ಸಿನಿಮಾ ಬಿಡುಗಡೆಗೆ ಒಂದು ದಿನದ ಹಿಂದೆಯೇ ಅಂದ್ರೆ ನವೆಂಬರ್ 25ಕ್ಕೆ ಪತ್ರ ಬರೆದಿದ್ದರಂತೆ..