ಕನ್ನಡ ಕಿರುತೆರೆ ಉದ್ಯಮದ ಕಲಾವಿದರು ತಂತ್ರಜ್ಞರಿಗೆ ‘ಅಪ್ಪು ಅಮರ ಕಾರ್ಯಕ್ರಮದಲ್ಲಿ’ ಸಿಹಿಸುದ್ದಿ..!
ಕನ್ನಡ ‘ರಾಜರತ್ನ’ ಕೋಟ್ಯಾಂತರ ಅಭಿಮಾನಿಗಳ ‘ಯುವರತ್ನ’ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಿಧನರಾಗಿ ಹತ್ತಿರ ಹತ್ತಿರ ಒಂದು ತಿಂಗಳು ಕಳೆದರೂ ಈ ಕಹಿ ಸತ್ಯವನ್ನ ಅರಗಿಸಿಕೊಳ್ಳಲು ಇನ್ನೂವರೆಗೂ ಸಾಧ್ಯವಾಗ್ತಿಲ್ಲ.. ಅಪ್ಪು ಸದಾ ಜನರ ಹೃದಯದಲ್ಲಿ ವಿರಾಜಮಾನರಾಗಿರುತ್ತಾರೆ..
ಈ ನಡುವೆ ಕನ್ನಡ ಕಿರುತೆರೆ ಉದ್ಯಮದ ಕಲಾವಿದರು ಹಾಗೂ ತಂತ್ರಜ್ಞರಿಗೆ ಅಪ್ಪು ಅಮರ ಕಾರ್ಯಕ್ರಮದಲ್ಲಿ ಸಿಹಿಸುದ್ದಿ ನೀಡಲು ಚಿಂತನೆ ನಡೆದಿದೆ. ಹೌದು ಕರ್ನಾಟಕ ಟೆಲಿವಿಷನ್ ಅಸೋಸಿಯೇಶನ್ ಸಹಯೋಗದಲ್ಲಿ ಬೆಂಗಳೂರಿನ ಪ್ರತಿಷ್ಟಿತ ಕಾವೇರಿ ಆಸ್ಪತ್ರೆಯು, ಕಿರುತೆರೆ ಕಲಾವಿದರು ಹಾಗೂ ತಂತ್ರಜ್ಞರಿಗೆ ಅಪ್ಪು ಅಮರ ಪ್ರಿವಿಲೇಜ್ ಕಾರ್ಡ್ ವಿತರಿಸಲಿದೆ.
ಇದರಿಂದ ಉಚಿತ ಆರೋಗ್ಯ ತಪಾಸಣೆ ರಿಯಾಯಿತಿಯಲ್ಲಿ ಚಿಕಿತ್ಸೆ ದೊರೆಯಲಿದೆ. ಸುಮಾರು 4000 ಕ್ಕೂ ಹೆಚ್ಚು ಸದಸ್ಯರು ಇದರ ಲಾಭ ಪಡೆಯಲಿದ್ದಾರೆ. ಕಿರುತೆರೆ ಉದ್ಯಮದ ಮಟ್ಟಿಗೆ ಇದೊಂದು ಐತಿಹಾಸಿಕ ದಾಖಲೆ ಎನ್ನಬಹುದಾಗಿದೆ. ಈ ಸುದ್ದಿಯನ್ನು ಅಪ್ಪು ಅಮರ ಕಾರ್ಯಕ್ರಮದಲ್ಲಿ ಕಾವೇರಿ ಆಸ್ಪತ್ರೆಯ ಎಕ್ಸಿಕ್ಯುಟಿವ್ ಡೈರೆಕ್ಟರ್ ಡಾ.ವಿಜಯಭಾಸ್ಕರನ್ ಸುಂದರರಾಜು ಪ್ರಟಿಸಲಿದ್ದಾರೆ.
ಅದರೊಂದಿಗೆ ಪುನೀತ್ ರಾಜ್‍ಕುಮಾರ್ ರವರ ಶಕ್ತಿಧಾಮ ದ ಸದಸ್ಯರ ಆರೋಗ್ಯ ಸಂಬಂಧಿತ ಜವಾಬ್ದಾರಿಯನ್ನು ತೆಗದುಕೊಳ್ಳುವುದಾಗಿಯೂ ತಿಳಿಸಿದ್ದಾರೆ. 28-11-2021 ರ ಭಾನುವಾರ ಹೆಚ್.ಎನ್ ಕಲಾಕ್ಷೇತ್ರದಲ್ಲಿ ನಡೆಯಲಿರುವ ಈ ಅಪ್ಪು ಅಮರ ಕಾರ್ಯಕ್ರಮದಲ್ಲಿ ಸರಿ ಸುಮಾರು 100ಕ್ಕೂ ಹೆಚ್ಚು ಕಿರುತೆರೆ ಸದಸ್ಯರು ನೇತ್ರದಾನ ಮಾಡಲಿದ್ದಾರೆ. ಅಪ್ಪು ಆದರ್ಶದ ಹಾದಿಯಲ್ಲಿ ಸಾಗುವ ಹಿರಿದಾದ ಹೆಜ್ಜೆ ಇದಾಗಲಿದೆ ಎಂದು ತಿಳಿಸಲು ಕೆಟಿವಿಎ ಹರ್ಷಿಸುತ್ತದೆ.