ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 8 ರಲ್ಲಿ ತಮ್ಮದೇ ಆದ ವಿಭಿನ್ನ ಪರ್ಸನಾಲಿಟಿಯಿಂದ ಗುರುತಿಸಿಕೊಂಡಿದ್ದ ಸ್ಯಾಂಡಲ್ ವುಡ್ ನಟಿ ಶುಭಾ ಪುಂಜಾ ಸಾಕಷ್ಟು ಮಂದಿಗೆ ಹಿಡಿಸಿದ್ರು.. ಸಿನಿಮಾಗಿಂತ ಬಿಗ್ ಬಾಸ್ ಮೂಲಕವೇ ಅವರು ಜನರ ಮನಸ್ಸಿಗೆ ತಮ್ಮ ಮುಗ್ಧತೆಯಿಂದ ಹತ್ತಿರವಾದ್ರೂ.. ಅಲ್ಲದೇ ಬಿಗ್ ಬಾಸ್ ಮನೆಯಲ್ಲಿ ಸದಾ ತಾವು ಮದುವೆಯಾಗೋ ಹುಡುಗನ ಬಗ್ಗೆಯೇ ಮಾತನಾಡುತ್ತಿದ್ರು..
ನಂತರ ಮನೆಯಿಂದ ಹೊರ ಬಂದ್ಮೇಲೆ ಭಾವಿ ಪತಿ ಜೊತೆಗೆ ಸಾಕಷ್ಟು ಸುತ್ತಾಡಿದ್ದಾರೆ.. ಫೋಟೋಗಳನ್ನು ಹಂಚಿಕೊಳ್ತಾಯಿರುತ್ತಾರೆ. ಇದೀಗ ಶುಭಾ ತಮ್ಮ ‘ಚಿನ್ನಿ ಬಾಂಬ್’ ( ಮದುವೆಯಾಗುವ ಹುಡುಗ) ಜೊತೆಗೆ ಮುಂದಿನ ತಿಂಗಳು ಅಂದ್ರೆ ಡಿಸೆಂಬರ್ ನಲ್ಲಿ ಮದುವೆಯಾಗಲಿದ್ದಾರಂತೆ.. ಈ ಕುರಿತು ಸ್ವತಃ ಶುಭಾ ಅವರೇ ಖಾಸಗಿ ಚಾನೆಲ್ ಒಂದರ ಶೋನಲ್ಲಿ ಹೇಳಿಕೊಂಡಿದ್ದಾರೆ. ಈಗಾಗಲೇ ಮದುವೆಗೆ ಸಕಲ ತಯಾರಿ ನಡೆಯುತ್ತಿರೋದಾಗಿ ತಿಳಿಸಿದ್ದಾರೆ..
ಶುಭಾ ಪೂಂಜಾ ಅವರು ತಮ್ಮ ಗೆಳೆಯ ಸುಮಂತ್ ಮಹಾಬಲ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇವರಿಬ್ಬರು ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಕಳೆದ ವರ್ಷವೇ ಇವರ ಮದುವೆ ನಡೆಯಬೇಕಾಗಿತ್ತು. ಆದ್ರೆ ಬಿಗ್ ಬಾಸ್ ಗಾಗಿ ಮದುವೆ ಮುಂದೂಡಿಕೊಂಡಿದ್ದರು..