ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿನಯದ ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಸಿನಿಮಾ ‘ಮದಗಜ’ಕ್ಕೆ ಸೆನ್ಸಾರ್ ಮಂಡಳಿಯಿಂದ U/A ಸರ್ಟಿಫಿಕೇಟ್ ಸಿಕ್ಕಿದೆ..
ಡಿಸೆಂಬರ್ 03ಕ್ಕೆ ದೇಶಾದ್ಯಂತ ಈ ಸಿನಿಮಾ ಅದ್ದೂರಿಯಾಗಿ ತೆರೆಕಾಣಲಿದೆ.. 3 ಬಾಷೆಗಳಲ್ಲಿ ಸಿನಿಮಾ ರಿಲೀಸ್ ಆಗ್ತಿದ್ದು, ಈಗಾಗಲೇ ಮೂರೂ ಭಾಷೆಗಳಲ್ಲೂ ಟ್ರೇಲರ್ ರಿಲೀಸ್ ಆಗಿ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದೆ.. ಇದೊಂದು ಮಾಸ್ ಸ್ಟೋರಿ , ಭರಪೂರ ಆಕ್ಷನ್ , ಥ್ರಿಲ್ಲಿಂಗ್ ಎಲಿಮೆಂಟ್ಸ್ ಜೊತೆಗೆ , ಪವರ್ ಫುಲ್ ಬಿಜಿಎಂ , ಅಧ್ಬುತ ವಿಶುಲೈಸೇಷನ್ ಸಿನಿಮಾದ ಮೇಲೆ ಕುತೂಹಲ ಹೆಚ್ಚಿಸಿದೆ..
ನವೆಂಬರ್ 27ರಂದು ಸೆನ್ಸಾರ್ ಬೋರ್ಡ್ ಅಧಿಕಾರಿಗಳು ಚಿತ್ರ ವೀಕ್ಷಿಸಿದ್ದಾರೆ. ಆದರೆ ಟ್ರೇಲರ್ ನಲ್ಲಿ ಕೊಂಚ ಹಿಂಸೆಯ ದೃಶ್ಯಗಳಿವೆ ಅನ್ನಿಸಿತ್ತು.. ಹೀಗಾಗಿ ಜನರು ಇದಕ್ಕೆ U/A ಸರ್ಟಿಫಿಕೆಟ್ ಸಿಗೋದಿಲ್ಲ ಎಂದು ಅನುಮಾನಗಳನ್ನೂ ವ್ಯಕ್ತಪಡಿಸಿದ್ರು..
ಆದ್ರೆ ಸಿನಿಮಾ ವೀಕ್ಷಣೆ ಮಾಡಿರುವ ಸೆನ್ಸಾರ್ ಬೋರ್ಡ್ ಮದಗಜ ಚಿತ್ರಕ್ಕೆ U/A ಸರ್ಟಿಫಿಕೇಟ್ ನೀಡಿದ್ದಾರೆ.. ಅಷ್ಟೇ ಅಲ್ಲ ಸಿನಿಮಾ ನೋಡಿದ ಮೇಲೆ ಯಾವುದೇ ಕಟ್ ಕೊಟ್ಟಿಲ್ಲ. ಸಂಭಾಷಣೆಯನ್ನು ತೆಗೆಯುವಂತೆ ತಿಳಿಸಿಲ್ಲ ಎನ್ನಲಾಗಿದೆ.
ಅಲ್ಲದೇ ಈ ಬಗ್ಗೆ ಮಾಹಿತಿ ನೀಡಿರುವ ಮದಗಜ ಚಿತ್ರದ ನಿರ್ದೇಶಕ ಮಹೇಶ್ ಕುಮಾರ್ ಅವರು , ಚಿತ್ರ ಚೆನ್ನಾಗಿದೆ ಎಂದು ಸೆನ್ಸಾರ್ ಅಧಿಕಾರಿಗಳು ಹೇಳಿದ್ದಾರೆ. ಸಿನಿಮಾಗೆ ಯು/ಎ ಸರ್ಟಿಫಿಕೇಟ್ ಕೊಟ್ಟಿದ್ದು ಯಾವುದೇ ದೃಶ್ಯಕ್ಕೆ ಕತ್ತರಿ ಹಾಕಿಲ್ಲ. ಸಂಭಾಷಣೆಯನ್ನು ತೆಗೆಯುವಂತೆಯು ಸೂಚಿಸಿಲ್ಲ. ಹೀಗಾಗಿ ಇದೊಂದು ನೀಟ್ ಸಿನಿಮಾ ಆಗಿದ್ದು, ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿಮಾನಿಗಳಿಗೆ ಹಬ್ಬ ಎಂದಿದ್ದಾರೆ..
ಅಂದ್ಹಾಗೆ ರಾಬರ್ಟ್ ಸಿನಿಮಾದ ನಿರ್ಮಾಪಕ ಉಮಾಪತಿ ಈ ಸಿನಿಮಾದ ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ಮುರುಳಿಗೆ ಆಶಿಕಾ ರಂಗನಾಥ್ ನಾಯಕಿಯಾಗಿ ಕಾಣಿಸಿಕೊಳ್ತಾಯಿದ್ದಾರೆ..
ಜಗಪತಿ ಬಾಬು, ಗರುಡಾ ರಾಮ್, ಚಿಕ್ಕಣ್ಣ, ಶಿವು ಕೆ.ಆರ್ ಪೇಟೆ, ಧರ್ಮಣ್ಣ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರಕ್ಕಿದೆ.