ಸೌತ್ ಸಿನಿಮಾ ಇಂಡಸ್ಟ್ರಿಯ ಕ್ಯೂಟ್ ಕಪಲ್ ಎನಿಸಿಕೊಂಡಿದ್ದ ಸಮಂತಾ ನಾಗಚೈತನ್ಯ ತಮ್ಮ 6 ವರ್ಷಗಳ ಪ್ರೀತಿ ಹಾಗೂ 4 ವರ್ಷಗಳ ದಾಂಪತ್ಯ ಜೀವನಕ್ಕೆ ಎಳ್ಳುನೀರು ಬಿಟ್ಟಿ ದೂರ ದೂರವಾಗಿದ್ದಾರೆ.. ಮದುವೆಯಾದ 4 ವರ್ಷಗಳ ಬಳಿಕ ಡಿವೋರ್ಸ್ ಪಡೆದುಕೊಂಡಿದ್ದಾರೆ.. ಇಬ್ಬರೂ ದೂರವಾಗಿರೋದು ಅಭಿಮಾನಿಗಳಿಗೆ ಸಾಕಷ್ಟು ಬೇಸರ ತಂದಿದೆ..
ಈ ನಟುವೆ ಮತ್ತೆ ಸಮಂತಾ ನಾಗ ಚೈತನ್ಯ ಒಂದಾಗ್ತಾರಾ ಅನ್ನೋ ಚರ್ಚೆಗಳು ಅಭಿಮಾನಿಗಳ ನಡುವೆ ಹುಟ್ಟುಕೊಂಡಿದೆ.. ಇದಕ್ಕೆ ಕಾರಣ ಸಮಂತಾ ನಾಗರ್ಜುನ ಅವರ ಅನ್ನಪೂರ್ಣ ಸ್ಟುಡಿಯೋಗೆ ಭೇಟಿ ನೀಡಿದ್ದಿದ್ದು..
ಸಮಂತಾ ಇತ್ತೀಚೆಗೆ ಮಾವ ನಾಗರ್ಜುನ ಅವರ ಅನ್ನಪೂರ್ಣ ಸ್ಟುಡಿಯೋಗೆ ತೆರಳಿದ್ದಾರೆ. ಈ ಸುದ್ದಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸಮಂತಾ ಸ್ಟುಡಿಯೋಗೆ ಯಾಕೆ ಹೋಗಿರಬಹುದು ಮತ್ತೆ ಈ ಜೋಡಿ ಒಂದಾಗಬಹುದಾ ಅನ್ನೋ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಆದ್ರೆ ಇದಕ್ಕೆ ಈಗ ಉತ್ತರ ಸಿಕ್ಕಿದೆ..
ಅಂದ್ಹಾಗೆ ಸಮಂತಾ ಅಭಿನಯದ ಶಕುಂತಲಂ ಸಿನಿಮಾ ಈಗಾಗಲೇ ಶೂಟಿಂಗ್ ಮುಗಿಸಿ ಡಬ್ಬಿಂಗ್ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಶಕುಂತಲಂ ಚಿತ್ರದ ಡಬ್ಬಿಂಗ್ ಕೆಲಸ ನಾಗಾರ್ಜುನ ಅವರ ಅನ್ನಪೂರ್ಣ ಸ್ಟುಡಿಯೋದಲ್ಲೇ ನಡೆಯುತ್ತಿದ್ದು, ಸಮಂತಾ ಅವರು ಕೂಡ ತನ್ನ ಪಾತ್ರದ ಡಬ್ಬಿಂಗ್ ಮುಗಿಸೋದಕ್ಕಾಗಿ ಅನ್ನಪೂರ್ಣ ಸ್ಟುಡಿಯೋಗೆ ತೆರಳಿದ್ದರು ಎಂಬ ಬಗ್ಗೆ ತಿಳಿದು ಬಂದಿದೆ. ಈ ವಿಚಾರವನ್ನು ಸ್ವತಃ ಶಕುಂತಲಂ ಚಿತ್ರತಂಡ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದೆ.