ಶೃತಿ ಹರಿಹರನ್ ಗೆ ನೋಟೀಸ್ , ಅರ್ಜುನ್ ಸರ್ಜಾಗೆ ರಿಲೀಫ್..!
ಬೆಂಗಳೂರು : 3 ವರ್ಷಗಳ ಹಿಂದೆ ಸ್ಯಾಂಡಲ್ ವುಡ್ ನಲ್ಲಿ ಅಷ್ಟೇ ಅಲ್ದೇ ಇಡೀ ಭಾರತೀಯ ಸಿನಿಮಾರಂಗವನ್ನೇ ಅಲುಗಾಡಿಸಿದ್ದಿದ್ದು #MeToo ಪ್ರಕರಣ.. ಅದ್ರಲ್ಲೂ ಸ್ಯಾಂಡಲ್ ವುಡ್ ನಟಿ ಶೃತಿ ಹರಿಹರನ್ ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ #MeToo ಆರೋಪ ಮಾಡಿ ವಿವಾದ ಹೊತ್ತಿಸಿಬಿಟ್ಟಿದ್ರು.. ಆಗಲೂ ಕೂಡ ಬಹುತೇಕರು ಅರ್ಜುನ್ ಸರ್ಜಾ ಪರವೇ ನಿಂತಿದ್ರು.. ಇದೀಗ ನಟಿ ಶೃತಿ ಹರಿಹರನ್ ಗೆ ಮೀಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ.
ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿ 2018ರಲ್ಲಿ ನಟಿ ಶೃತಿಹರಿಹರನ್ ಅವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಶೃತಿ ಹರಿಹರನ್ ದೂರಿನ್ವಯ ಅರ್ಜುನ್ ಸರ್ಜಾ ವಿರುದ್ಧ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದರು.
3 ವರ್ಷಗಳ ಬಳಿಕ ಇದೀಗ ಮತ್ತೆ ಮೀಟೂ ಪ್ರಕರಣ ಕುರಿತಂತೆ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವಂತೆ ಶೃತಿ ಹರಿಹರನ್ಗೆ ಕಬ್ಬನ್ ಪಾರ್ಕ್ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ.
ನವೆಂಬರ್ 2015ರಲ್ಲಿ ಹೆಬ್ಬಾಳ ಹಾಗೂ ದೇವನಹಳ್ಳಿಯಲ್ಲಿ ವಿಸ್ಮಯ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಅರ್ಜುನ್ ಸರ್ಜಾ ಅವರು ಲೈಂಗಿಕ ಕಿರುಕುಳ ನೀಡಿದ್ದರು ಎಂದು ಶೃತಿ ಹರಿಹರನ್ ಆರೋಪಿಸಿದ್ದರು. ಈ ಘಟನೆ ನಡೆದ ಎರಡು ವರ್ಷಗಳ ನಂತರ ಶೃತಿ ಹರಿಹರನ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು.
ಇನ್ನೂ ಶೃತಿ ಹರಿಹರನ್ ದೂರು ನೀಡಿದ ಬೆನ್ನಲ್ಲೇ ಫಿಲ್ಮ್ ಚೇಂಬರ್ ಕಡೆಯಿಂದ ಅಂಬರೀಶ್ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು.. ಸಭೆಯಲ್ಲಿ ಶೃತಿ ಮನವಗೊಲಿಸುವ ಪ್ರಯತ್ನಗಳೂ ಆಗಿದ್ವು.. ಅರ್ಜುನ್ ಸರ್ಜಾ ಅವರು ಶೃತಿ ಆರೋಪವನ್ನ ತಳ್ಳಿ ಹಾಕಿ ದೂರು ದಾಖಲಿಸಿದ್ದರು..