ಮುಂಬೈ: ಬಾಲಿವುಡ್ ನ ಸ್ಟಾರ್ ನಟಿ ಕತ್ರೀನಾ ಕೈಫ್ ಹಾಗೂ ಆಕೆಯ ಬಾಯ್ ಫ್ರೆಂಡ್ ವಿಕ್ಕಿ ಕೌಶಾಲ್ ಇದೇ ಡಿಸೆಂಬರ್ ನಲ್ಲಿ ವೈಹಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.. ರಾಜಸ್ಥಾನದ ಸವಾಯಿ ಮಾಧೋಪುರ್ನಲ್ಲಿ ಮದುವೆ ಸಂಭ್ರಮಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ ಎನ್ನಲಾಗಿದೆ.. ಅಂದ್ಹಾಗೆ ಈ ಇಬ್ರೂ ಸಹ ಅಧಿಕೃತವಾಗಿ ಒಮದುವೆಯ ವಿಚಾರವಾಗಿ ಇನ್ನೂವರೆಗೂ ತುಟಿಬಿಚ್ಚಿಲ್ಲ.. ಆದ್ರೆ ಮದುವೆ ತಯಾರಿ ನಡೆಯುತ್ತಿರೋದಂತು ಪಕ್ಕಾ ಅನ್ನೋದು ಮೂಲಗಳಿಂದ ತಿಳಿದುಬಂದಿದೆ..
ಈ ನಡುವೆ ಭಾರತದಲ್ಲಿ ಕೊರೊನಾ ಹಾವಳಿಯೂ ಹೆಚ್ಚಾಗೋದ್ರ ಜೊತೆಗೆ ಹೊಸ ವೈರಸ್ ,. ಕೊರೊನಾ ರೂಪಾಂರಿ ಓಮಿಕ್ರಾನ್ ಕಂಟಕ ಎದುರಾಗಿದೆ.. ಡಿಸೆಂಬರ್ 7ರಿಂದ 9ರವರೆಗೆ ಈ ಜೋಡಿಯ ಮದುವೆ ನಡೆಯಲಿದೆ. ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಹೋಟೆಲ್ನಲ್ಲಿ ವಿವಾಹ ಸಮಾರಂಭ ಏರ್ಪಡಿಸಲಾಗಿದೆ ಎನ್ನಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಬಾಲಿವುಡ್ ಸೆಲೆಬ್ರಿಟಿಗಳಿಗೆ ಮದುವೆ ಆಮಂತ್ರಣ ಹೋಗಿದೆ. ಹೀಗಿರುವಾಗಲೇ ಭಾರತದಲ್ಲಿ ಕೋವಿಡ್ ಸಂಖ್ಯೆ ಹೆಚ್ಚುತ್ತಿದೆ. ಕೊರೊನಾದ ರೂಪಾಂತರಿಯೂ ಪತ್ತೆ ಆಗಿದೆ. ಈ ಕಾರಣಕ್ಕೆ ಮದುವೆಗೆ ಸಮಸ್ಯೆ ಎದುರಾಗುವ ಸೂಚನೆ ಸಿಕ್ಕಿದೆ.
ಈ ಮದುವೆಗೆ ಬಾಲಿವುಡ್ನ ಅನೇಕ ಸ್ಟಾರ್ ಕಲಾವಿದರು ಭಾಗಿಯಾಗಲು ತೆರಳುತ್ತಿದ್ದಾರೆ ಆಗುತ್ತಾರೆ ಎನ್ನಲಾಗುತ್ತಿತ್ತು. 45 ಹೋಟೆಲ್ ಕೂಡಾ ಬುಕ್ ಮಾಡಲಾಗಿತ್ತು. ಆದರೆ ಹೊಸ ವೈರಸ್ ಕಾರಣದಿಂದಾಗಿ ಮದುವೆ ಬರುತ್ತಿರುವ ಗಣ್ಯರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಲಿದೆ ಎಂದು ತಿಳಿದು ಬಂದಿದೆ. ಕೋವಿಡ್ ರೂಪಾಂತರಿ ವೈರಸ್ ಆತಂಕ ಹೆಚ್ಚಾಗಿದೆ. ಎಲ್ಲ ರಾಜ್ಯಗಳಲ್ಲೂ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಅಂದ್ಹಾಗೆ ಈ ಮದುವೆಗೆ ಆಗಮಿಸುವ ಅತಿಥಿಗಳು ಮೊಬೈಲ್ ಬಳಸದಂತೆಯೂ ಸೂಚನೆ ನೀಡಲಾಗಿದೆ.. ತಮ್ಮ ವಿವಾಹದ ಸಂದರ್ಭದಲ್ಲಿ ಅತಿಥಿಗಳು ಮೊಬೈಲ್ ಬಳಸದಂತೆ ನೋಡಿಕೊಳ್ಳಬೇಕು ಎಂದು ಸಮಾರಂಭ ಆಯೋಜಕರಿಗೆ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ.
ವಿವಾಹದ ಫೋಟೊ ಮತ್ತು ವೀಡಿಯೋಗಳನ್ನು ತೆಗೆದುಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಹರಡುವುದಕ್ಕೆ ಅವಕಾಶ ನೀಡಬಾರದು. ವಿವಾಹ ಸಮಾರಂಭದ ಸ್ಥಳದಲ್ಲಿ ನಮ್ಮ ಖಾಸಗಿತನಕ್ಕೆ ಧಕ್ಕೆಯಾಗದಂತೆ ಭದ್ರತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಅಂದ್ಹಾಗೆ ಈ ಹಿಂದೆ ನಟಿ ಪ್ರಿಯಾಂಕಾ ಚೋಪ್ರಾ-ನಿಕ್ ಜಾನ್ಸನ್ ಹಾಗೂ ದೀಪಿಕಾ ಪಡುಕೋಣೆ-ರಣವೀರ್ ಸಿಂಗ್ ಜೋಡಿ ವಿವಾಹ ಸಂದರ್ಭದಲ್ಲೂ ಅತಿಥಿಗಳು ಮೊಬೈಲ್ ಬಳಸುವುದಕ್ಕೆ ನಿಷೇಧ ಹೇರಲಾಗಿತ್ತು.