ಕೊರೊನಾ ನಂತರ ಥಿಯೇಟರ್ ಗಳಲ್ಲಿ 100 % ಸೀಟಿಂಗ್ ಗೆ ಸರ್ಕಾರ ಅನುಮತಿ ಕೊಟ್ಟ ನಂತರದಲ್ಲಿ ರಿಲೀಸ್ ಆದ ಸ್ಟಾರ್ ನಟರ ಸಿನಿಮಾಗಳ ಪೈಕಿ ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಕೂಡ ಒಂದು.. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು.. ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಲೆಕ್ಷನ್ ಮಾಡಿತ್ತು..
ಇದೀಗ ಕೋಟಿಗೊಬ್ಬ 3 ಸಿನಿಮಾ ಓಟಿಟಿ ಪ್ಲಾಟ್ ಫಾರ್ಮ್ ಅಮೇಜಾನ್ ನಲ್ಲಿ ರಿಲೀಸ್ ಆಗಿದೆ. ಈ ಮೂಲಕ ಯಾರೆಲ್ಲಾ ಕೋಟಿಗೊಬ್ಬ3 ಸಿನಿಮಾವನ್ನ ಚಿತ್ರಮಂದಿರಗಳಲ್ಲಿ ಮಿಸ್ ಮಾಡಿಕೊಂಡಿದ್ರೋ ಅವರು ಈಗ ಮನೆಯಲ್ಲೇ ಕೂತು ತಮ್ಮ ಮೊಬೈಲ್ , ಲ್ಯಾಪ್ ಟಾಪ್ ಗಳಲ್ಲಿ ಅಮೇಜಾನ್ ಪ್ರೈಮ್ ನಲ್ಲಿ ವೀಕ್ಷಣೆ ಮಾಡಬಹುದಾಗಿದೆ.. ಅಂದ್ಹಾಗೆ ಇಂದಿನಿಂದ್ಲೇ ಸಿನಿಮಾ ಅಮೇಜಾನ್ ಪ್ರೈಮ್ ನಲ್ಲಿ ಲಭ್ಯವಿದೆ.
ಕಳೆದ ಅಕ್ಟೋಬರ್ 15ಕ್ಕೆ ಕೋಟಿಗೊಬ್ಬ3 ಥಿಯೇಟರ್ ಗಳಲ್ಲಿ ರಿಲೀಸ್ ಆಗಿತ್ತು.. ಸಿನಿಮಾಗೆ ತಮಿಳು ನಿರ್ದೇಶಕ ಶಿವ ಕಾರ್ತಿಕ್ ಆಕ್ಷನ್ ಕಟ್ ಹೇಳಿದ್ರು. ಮೂಲಗಳ ಪ್ರಕಾರ ಸಿನಿಮಾವನ್ನ ಅಮೇಜಾನ್ ಭಾರೀ ಮೊತ್ತ ಕೊಟ್ಟು ಖರೀದಿಸಿದೆ ಎನ್ನಲಾಗಿದೆ.