‘ಮದಗಜ’ದ ಸ್ಯಾಟಲೈಟ್ ಹಕ್ಕು ಭಾರೀ ಮೊತ್ತಕ್ಕೆ ಸೇಲ್ : ಖರೀದಿಸಿದ್ದು ಯಾರು..?
ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿನಯದ ಬಹುನಿರೀಕ್ಷೆಯ ಮದಗಜ ಸಿನಿಮಾದ ಟೀಸರ್ ಇತ್ತೀಚೆಗೆ ರಿಲೀಸ್ ಆಗಿದ್ದು , ತನ್ನ ವಿಶ್ಯುಯಾಲಿಟಿ ಹಾಗೂ ಬಿಜಿಎಂನಿಂದ, ಆಕ್ಷನ್ ಸೀನ್ಸ್ ವಿಚಾರಕ್ಕೇ ಭಾರೀ ಸದ್ದು ಮಾಡ್ತಿದೆ. ಇನ್ನೂ ಸೆನ್ಸಾರ್ ಮಂಡಳಿಯಿಂದಲೂ U/A ಸರ್ಟಿಫಿಕೇಟ್ ಪಡೆದುಕೊಂಡಿದೆ..
ಸಿನಿಮಾದಲ್ಲಿ ಮುರುಳಿ ರಗಡ್ ಲುಕ್ , ಜಗಪತಿ ಬಾಬು , ಗರುಡ ರಾಮ್ ಟೆರರ್ ಲುಕ್ , ಮಸ್ತ್ ಆಕ್ಷನ್ ಸೀನ್ಸ್ ಸಿಕ್ಕಾಪಟ್ಟೆ ಗಮನ ಸೆಳೆಯುತ್ತಿದೆ.. ಸಿನಿಮಾ ಡಿಸೆಂಬರ್ 3 ಕ್ಕೆ ಕನ್ನಡ , ತೆಲುಗು , ತಮಿಳು ಮೂರೂ ಭಾಷೆಗಳಲ್ಲೂ ಅದ್ಧೂರಿಯಾಗಿ ತೆರೆಕಾಣಲಿದೆ..
ಇದೀಗ ಸಿನಿಮಾದ ಸ್ಯಾಟಿಲೈಟ್ ಹಕ್ಕು ಭಾರೀ ಮೊತ್ತಕ್ಕೆ ಸೇಲ್ ಆಗಿದೆ ಎಂಬ ಮಾಹಿತಿ ಸಿಕ್ಕಿದೆ.. ಹೌದು ಇನ್ನೇನು 5 ದಿನಗಳಲ್ಲಿ ಮದಗಜ ಥಿಯೇಟರ್ ಗೆ ಗ್ರ್ಯಾಂಡ್ ಆಗಿ ಎಂಟ್ರಿಕೊಡಲಿರುವ ಮದಗಜದ ಸ್ಯಾಟಿಲೈಟ್ ಹಕ್ಕು ಕಲರ್ಸ್ ಕನ್ನಡದ ಪಾಲಾಗಿದೆ..
ಕೆಲವು ದಿನಗಳ ಹಿಂದೆ ಸಿನಿಮಾ ಡಬ್ಬಿಂಗ್ ರೈಟ್ಸ್ ಮಾರಾಟ ಮಾಡಿದ್ದ ತಂಡ ಈಗ ಸ್ಯಾಟಲೈಟ್ ಹಕ್ಕುಗಳನ್ನು ಸೇಲ್ ಮಾಡಿದೆ. ಅಂದ್ಹಾಗೆ ಮದಗಜದ ಸ್ಯಾಟಲೈಟ್ ಹಕ್ಕು ಬರೋಬ್ಬರಿ 6 ಕೋಟಿಗೆ ಸೇಲ್ ಆಗಿದೆ ಎನ್ನಲಾಗ್ತಿದೆ..
ಇನ್ನೂ ಸಿನಿಮಾದಲ್ಲಿ ಆಶಿಕಾ ರಂಗನಾಥ್ ನಾಯಕಿಯಾಗಿದ್ದಾರೆ.. ಚಿಕ್ಕಣ್ಣ, ಶಿವು ಕೆ.ಆರ್ ಪೇಟೆ, ಧರ್ಮಣ್ಣ ಕಾಮಿಡಿ ಜನರನ್ನ ನಕ್ಕಿ ನಗಿಸಲಿದೆ..sa