ಬೆಂಗಳೂರು : ಚಂದನವನದ ಮೋಹಕ ತಾರೆ ರಮ್ಯಾ ಅವರಿಗೆ ಇಂದು 40ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ.. ಈ ವಿಶೇಷ ದಿನದಂದು ರಮ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ವಯಸ್ಸನ್ನು ಬಹಿರಂಗ ಪಡಿಸಿದ್ದಾರೆ.
ರಮ್ಯಾ ಚಂದನವನದಲ್ಲಿ ಸ್ಟಾರ್ ನಟರೊಂದಿಗೆ ಸ್ಕ್ರೀನ್ ಶೇರ್ ಮಾಡಿ ಅಪಾರ ಅಭಿಮಾನಿಗಳನ್ನ ಗಳಿಸಿರುವ ನಟಿ.. ನಟನೆ ಅಷ್ಟೇ ಅಲ್ದೇ ರಾಜಕೀಯಕ್ಕೂ ಇಳಿದಿದ್ದರು ರಮ್ಯಾ.. ಆದ್ರೆ ಸಿನಿಮಾರಂಗದಂತೆಯೇ ರಾಜಕೀಯ ಅವರ ಕೈ ಹಿಡಿಯಲಿಲ್ಲ.. ಸದ್ಯ ಈಗ ರಮ್ಯಾ ಸಿನಿಮಾ ಹಾಗೂ ರಾಜಕೀಯ ಎರಡರಿಂದಲೂ ದೂರವೇ ಉಳಿದುಕೊಂಡಿದ್ದಾರೆ..
ಕೇವಲ ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲಿಯೂ ಬಣ್ಣಹಚ್ಚಿರುವ ರಮ್ಯಾ ಒಂದು ದಶಕದಲ್ಲಿ ಸ್ಯಾಂಡಲ್ವುಡ್ನ ಟಾಪ್ ನಟಿಯಾಗಿ ಮಿಂಚಿದ್ದವರು.. ಇಂದು ರಮ್ಯಾ 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇದೇ ಖುಷಿಯಲ್ಲಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದು, ಶುಭಾಶಯ ತಿಳಿಸಿದ ಪ್ರೀತಿಯ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಫೋಟೋದಲ್ಲಿ ರಮ್ಯಾ ಮಾಸ್ಕ್ ಧರಿಸಿದ್ದಾರೆ. ನನಗೆ ಶುಭಾ ಕೋರಿದ ಎಲ್ಲರಿಗೂ ಧನ್ಯವಾದಗಳು. ಸದ್ಯ ಅಟ್ಲಾಂಟಿಕ್ ಸಾಗದಲ್ಲೆಲ್ಲೋ ಇದ್ದೇನೆ. ತುಂಬಾ ಸುಸ್ತಾಗುತ್ತಿದೆ. ನಿದ್ರೆ ಬರುತ್ತಿದೆ. ಆದರೂ 39 ವರ್ಷ ಕಳೆದುಹೋಗಿದ್ದಕ್ಕೆ ಖುಷಿಯಿದೆ. ಎಲ್ಲರೂ ಸುರಕ್ಷಿತವಾಗಿರಿ. ಮಾಸ್ಕ್ ಧರಿಸಿ ಎಂದು ಬರೆದುಕೊಂಡಿದ್ದಾರೆ..