ಮುಂಬೈ : ಬಾಲಿವುಡ್ ಬ್ಯಾಡ್ ಬಾಯ್ , ಬಾಕ್ಸ್ ಆಫೀಸ್ ಸುಲ್ತಾನ ಸಲ್ಮಾನ್ ಖಾನ್ ಅವರು ಸಿನಿಮಾ ವಿಚಾರವಾಗಿ ಅಷ್ಟೇ ಅಲ್ದೇ ಮದುವೆ ವಿಚಾರಕ್ಕೂ ಆಗಾಗ ಸುದ್ದಿಯಲ್ಲಿರುತ್ತಾರೆ. ಸಲ್ಮಾನ್ ಗೆ ವಯಸ್ಸು 50 ದಾಟಿದ್ರೂ ಇನ್ನೂ ಯಂಗ್ ಆಗಿ ಕಾಣಿಸ್ತಾರೆ… ಸಲ್ಮಾನ್ ಖಾನ್ ಈಗಲೂ ಹೂ ಅಂದ್ರೆ ಅವರನ್ನ ಮದುವೆಯಾಗೋದಕ್ಕೆ ಹುಡುಗಿಯರು ಕ್ಯೂ ನಿಲ್ತಾರೆ ಇಷ್ಟಾದ್ರೂ ಸಲ್ಲೂ ಮಾತ್ರ ಇನ್ನೂವರೆಗೂ ಮದುವೆಯಾಗಿಲ್ಲ.. ಆದ್ರೆ ಅವರ ಜೀವನದಲ್ಲಿ ಸಾಕಷ್ಟು ನಟಿಯರು , ಮಾಡೆಲ್ ಗಳ ಜೊತೆಗೆ ಅವರ ಹೆಸರು ಕೇಳಿಬಂದಿದೆ.. ಈ ಪೈಕಿ ಸ್ಟಾರ್ ನಟಿ ಐಶ್ವರ್ಯಾ ರೈ ಬಚ್ಚನ್ ಕೂಡ ಒಬ್ರು.. ಕತ್ರಿನಾ ಕೈಫ್ ಜೊತೆಗೂ ಸಲ್ಲುಗೆ ಪ್ರೀತಿ ಚಿಗುರಿತ್ತು ಎಂಬ ಮಾತಿದೆ. ಆದ್ರೆ ಅದ್ಯಾವುದೂ ಹೆಚ್ಚು ದಿನ ಉಳಿಯಲಿಲ್ಲ.
ಆದ್ರೆ ಸಲ್ಲು ಯಾಕಿನ್ನೂ ಮದುಎಯಾಗಿಲ್ಲ ಅನ್ನೋ ವಿಚಾರವನ್ನು ಆಯುಶ್ ಶರ್ಮಾ ಈಗ ಹಂಚಿಕೊಂಡಿದ್ದಾರೆ. ಅಂದ್ಹಾಗೆ ಆಯುಶ್ ಶರ್ಮಾ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಪತಿ.. ಅಲ್ಲದೇ ಅಲ್ಮಾನ್ ಖಾನ್ ಹೊಸ ಸಿನಿಮಾ ಅಂತಿಮ್ : ದ ಫೈನಲ್ ಟ್ರೂಥ್ ನ ಸಹ ನಟ ಕೂಡ.. ಈ ಸಿನಿಮಾ ಈಗಾಗಲೇ ರಿಲೀಸ್ ಆಗಿದ್ದು, ಥಿಯೇಟರ್ ಗಳಲ್ಲಿ ಪ್ರದರ್ಶನ ಕಾಣ್ತಿದೆ. ಸಿನಿಮಾದ ಪ್ರಮೋಷನ್ ಕಾರ್ಯಕ್ರಮದಲ್ಲಿ ಸಲ್ಮಾನ್ ಮದುವೆಯಾಗದೇ ಇರೋದಕ್ಕೆ ಕಾರಣವನ್ನ ಆಯುಶ್ ಬಿಚ್ಚಿಟ್ಟಿದ್ದಾರೆ.
ಸಲ್ಮಾನ್ ಮದುವೆಯ ವಿಷಯದ ಬಗ್ಗೆ ನಾನು ಮಾತನಾಡುವುದಿಲ್ಲ. ಅವರು ಹೇಗೆ ಕೆಲಸ ಮಾಡುತ್ತಾರೆ, ಹೇಗೆ ಬದುಕುತ್ತಿದ್ದಾರೆ ಎಂಬುದನ್ನು ನಾನು ನೋಡಿದ್ದೇನೆ. ನನಗೆ ಅನಿಸಿದಂತೆ ಅವರಿಗೆ ಮದುವೆ ಆಗಲು ಸಮಯ ಇಲ್ಲ. ಈಗ ಹೇಗಿದ್ದಾರೋ ಹಾಗೆಯೇ ಅವರು ಖುಷಿ ಆಗಿದ್ದಾರೆ. ಬದುಕಿನ ನಿರ್ಧಾರಗಳನ್ನು ಅವರೇ ತೆಗೆದುಕೊಳ್ಳುತ್ತಾರೆ ಎಂದು ಆಯುಶ್ ಶರ್ಮಾ ಹೇಳಿದ್ದಾರೆ. ಈ ಮೂಲಕ ತಮ್ಮ ಭಾವನಿಗೆ ಮದುವೆಯಾಗೋದಕ್ಕೆ ಟೈಮ್ ಇಲ್ಲ ಎಂದಿದ್ದಾರೆ.