ಬೆಂಗಳೂರು: ಬಿಗ್ ಬಾಸ್ ನಲ್ಲಿ ತಮ್ಮದೇ ಆದ ವಿಭಿನ್ನ ಕ್ಯಾರೆಕ್ಟರ್ ನಿಂದ ಗುರುತಿಸಿಕೊಂಡು ಜನರ ಮನಸ್ಸಿಗೆ ಹತ್ತಿರವಾದ ಸ್ಯಾಂಡಲ್ ವುಡ್ ನಟಿ ಶುಭಾ ಪುಂಜಾ ತಮ್ಮ ಗೆಳೆಯನ ಜೊತೆಗೆ ಡಿಸೆಂಬರ್ ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ಸುದ್ದಿ ಜೋರಾಗಿ ಸೌಂಡ್ ಮಾಡ್ತಿದೆ..
ಇದರ ನಡುವೆಯೇ ಶುಭಾ ಹೊಸ ಹೇರ್ ಕಟ್ ಮಾಡಿಸಿಕೊಂಡು ಡಾಲ್ ರೀತಿ ಫೋಟೋ ಕ್ಲಿಕ್ಕಿಸಿಕೊಂಡು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.. ಜೊತೆಗೆ ಮೇಕ್ ಓವರ್ ಕ್ರೆಡಿಟ್ ಅನ್ನ ನಟಿ ನೀತುಗೆ ನೀಡಿದ್ದಾರೆ. ಹೊಸ ಕ್ಯೂಟ್ ಹೇರ್ ಸ್ಟೈಲ್ ಮಾಡಿಸಿದ ಖುಷಿಯಲ್ಲಿ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅಭಿಮಾನಿಗಳು ಶುಭಾ ಅವರ ಹೊಸ ಲುಕ್ ಬಗ್ಗೆ ನಾನಾ ಕಮೆಂಟ್ ಗಳನ್ನ ಮಾಡ್ತಾಯಿದ್ದಾರೆ.
ಶುಭಾ ಪೂಂಜಾ ಅವರ ಹೊಸ ಹೇರ್ ಸ್ಟೈಲ್ ಫೋಟೋವನ್ನು ನಟಿ ನಿತ್ಯಾ ಶೆಟ್ಟಿ ಅವರು ಕ್ಲಿಕ್ ಮಾಡಿದ್ದಾರೆ. ಶುಭಾ, ನಿತ್ಯಾ ಇಬ್ಬರು ಜೊತೆಯಾಗಿ ಮಧ್ಯಾಹ್ನದ ಊಟವನ್ನು ಮಾಡುತ್ತಾ ಕೆಲವು ಸಮಯ ಜೊತೆಯಾಗಿ ಕಳೆದಿದ್ದಾರೆ. ಈ ವಿಚಾರವನ್ನು ಶುಭಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಬಿಗ್ ಬಾಸ್ ನಲ್ಲಿ ಸಹ ಸ್ಪರ್ಧಿಗಳಾಗಿದ್ದ ದಿವ್ಯಾ ಸುರೇಶ್, ದಿವ್ಯಾ ಉರುಡುಗ , ಗೀತಾ ಭಾರತೀ ಭಟ್ ಕ್ಯೂಟ್ ಎಂದು ಕಾಮೆಂಟ್ ಮಾಡಿದ್ದಾರೆ. ಶುಭಾ ಪೂಂಜಾ ಅವರು ತಮ್ಮ ಗೆಳೆಯ ಸುಮಂತ್ ಮಹಾಬಲ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇವರಿಬ್ಬರು ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದಾರೆ.