ಕಿರುತೆರೆ ನಟಿ ಕಾವ್ಯಾಗೌಡ ಅವರು ಸದ್ಯ ತಮ್ಮ ಮದುವೆ ಸಂಭ್ರಮದಲ್ಲಿ ತೊಡಗಿದ್ದಾರೆ.. ಅವರ ಮದುವೆ ಸಮಾರಂಭದಗಳು , ಕುಟುಂಬಸ್ಥರು , ಆತ್ಮೀಯರು , ಸ್ನೇಹತರೊಂದಿಗೆ ಬಹಳ ಅದ್ಧೂರಿಯಾಗಿ ನೆರವೇರುತ್ತಿದೆ..
ಈಗಾಗಲೇ ಅದ್ದೂರಿ ಮೆಹಂದಿ ಶಾಸ್ತ್ರ ಕೂಡ ನೆರವೇರಿದೆ. ನವೆಂಬರ್ 29, 30, ಡಿಸೆಂಬರ್ 1 ಮತ್ತು 2ರಂದು ಮದುವೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಾಲ್ಕು ದಿನದ ಮದುವೆಯ ಕಾರ್ಯಕ್ರಮವು ಅದ್ಧೂರಿಯಾಗಿಯೇ ನಡೆಯುತ್ತಿದೆ.
ಅದ್ಧೂರಿಯಾಗಿ ನೆರವೇರಿದ ಈ ಮೆಹಂದಿ ಕಾರ್ಯಕ್ರಮದಲ್ಲಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ಭಾಗಿ ಆಗಿದ್ದರು. ಕಪ್ಪು ಮತ್ತು ಗೋಲ್ಡನ್ ಬಣ್ಣದ ಸೀರೆಯಲ್ಲಿ ವಿಜಯಲಕ್ಷ್ಮಿ ಕಾಣಿಸಿಕೊಂಡಿದ್ದಾರೆ. ವಿಜಯಲಕ್ಷ್ಮಿ ಮದುವೆ ಮನೆಯಲ್ಲಿ ಎಲ್ಲರೊಂದಿಗೆ ಹಾಡಿ ಸಂಭ್ರಮಿಸಿರುವ ವೀಡಿಯೋ ಕೂಡ ಹಂಚಿಕೊಂಡಿದ್ದಾರೆ.
ಅಲ್ಲದೇ ಕಾವ್ಯ ಗೌಡ ಮೆಹಂದಿ ಕಾರ್ಯಕ್ರಮದಲ್ಲಿ ತಮ್ಮ ಭಾವಿ ಪತಿಯ ಜೊತೆಗೆ ಕ್ಯಾಮೆರಾಗೆ ಫೋಸ್ ಕೊಟ್ಟಿದ್ದು ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.. ನವ ಜೋಡಿಗಳಿಬ್ಬರೂ ಒಂದೇ ಬಣ್ಣ ಹಾಗೂ ಡಿಸೈನ್ ನ ಉಡುಪು ಧರಿಸಿದ್ದು, ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ..
ಕೈ ತುಂಬಾ ಅಂದವಾದ ಮೆಹಂದಿ ಹಾಕಿಕೊಂಡು, ಭಾವಿ ಪತಿಯ ಜೊತೆಗೆ ಕಾವ್ಯ ಸಂಭ್ರಮಿಸಿದ್ದಾರೆ. ಬಳಿಕ ಸಂಗೀತ ಕಾರ್ಯಕ್ರಮದಲ್ಲಿ ಕಾವ್ಯ, ಸೋಮಶೇಖರ್ ಅವರ ಜೊತೆಗೆ ಹೆಜ್ಜೆ ಹಾಕಿದ್ದಾರೆ. ಕಾವ್ಯ ಗೌಡ ಅವರ ಸಹೋದರಿ ಭವ್ಯ ಗೌಡ ಮತ್ತು ಕಾವ್ಯ ಸ್ನೇಹಿತರು, ಸಂಬಂಧಿಕರು ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಿದ್ದಾರೆ.
ಅಂದ್ಹಾಗೆ ಕಾವ್ಯಾ ಗೌಡ , ಮನೆಯಲ್ಲಿ ದೊಡ್ಡವರು ನಿಶ್ಚಯಿಸಿದ ಹುಡುಗನನ್ನು ಮದುವೆಯಾಗ್ತಿದ್ದಾರೆ.. ಈ ಹಿಂದೆ ಕಾವ್ಯ ಮತ್ತು ಸೋಮಶೇಖರ್ ತಮ್ಮ ಪ್ರೀ ವೆಡ್ಡಿಂಗ್ ಫೊಟೋ ಶೂಟನ್ನು ದುಬೈನಲ್ಲಿ ಮಾಡಿಸಿದ್ದರು. ಜೊತೆಗೆ ಅದ್ಧೂರಿಯಾದ ಬ್ಯಾಚುಲರ್ ಪಾರ್ಟಿಯಯನ್ನೂ ಕೂಡ ಮಾಡಿಕೊಂಡಿದ್ದರು..