1999ರ ಡಿಸೆಂಬರ್ 1.. ಇದು ಕನ್ನಡದ ರಾಜರತ್ನ ಪುನೀತ್ ರಾಜಕುಮಾರ್ ಅವರು ಅಶ್ವಿನಿ ಅವರನ್ನು ಮದುವೆಯಾದ ದಿನ. ಇಂದಿಗೆ 22 ವರ್ಷಗಳ ಹಿಂದೆ ಜೀವನ ಪರಿಯಂತ ಜೊತೆಯಾಗಿ ಇರುತ್ತೇನೆ ಅಶ್ವಿನಿ ಅವರ ಕೈ ಹಿಡಿದಿದ್ದ ಅಪ್ಪು ಈಗ ಲೋಕವನ್ನೇ ಬಿಟ್ಟು ತೆರಳಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮೆಲ್ಲರನ್ನು ಅಗಲಿ ತಿಂಗಳು ಕಳೆದಿದೆ. ಅಪ್ಪು ಈಗ ಬರಿ ನೆನಪಾಗಿದ್ದಾರೆ. ಈ ನೋವಿನಲ್ಲೂ ಅವರ ಕುಟುಂಬಕ್ಕೆ ಇಂದು ಸಂತಸದ ದಿನ. ಇಂದು (ಡಿಸೆಂಬರ್ 1) ಪುನೀತ್ ರಾಜ್‍ಕುಮಾರ್ ಮತ್ತು ಅಶ್ವಿನಿ ಅವರ ವಿವಾಹ ಆದ ದಿನ.
ಅಶ್ವಿನಿ ಮತ್ತು ಪುನೀತ್ ರಾಜ್ ಕುಮಾರ್ ಅವರದ್ದು ಪ್ರೇಮ ವಿವಾಹ. ಇವರ ಪ್ರೇಮಕಥೆ ಹುಟ್ಟಿಕೊಂಡಿದ್ದು ಜಿಮ್ ನಲ್ಲಿ. ಪುನೀತ್ ರಾಜಕುಮಾರ್ ಮತ್ತು ಅಶ್ವಿನಿ ಇಬ್ಬರು ಕೂಡ ಒಂದೇ ಜಿಮ್‍ಗೆ ಹೋಗುತ್ತಿದ್ದರು. ಇಲ್ಲಿ ಪುನೀತ್ ರಾಜಕುಮಾರ್, ಅಶ್ವಿನಿ ಸ್ನೇಹಿತರಾಗಿದ್ದರು. ಬಳಿಕ ಪ್ರೇಮಿಗಳಾದರು.
ಮೊದಲಿಗೆ ಅಶ್ವಿನಿ ಅವರ ಮನೆಯಲ್ಲಿ ಇವರ ಪ್ರೇಮವಿವಾಹಕ್ಕೆ ಹಿರಿಯರು ಒಪ್ಪಿರಲಿಲ್ಲವಂತೆ. ಸಾಕಷ್ಟು ಮಾತುಕತೆ ನಡೆದ ಬಳಿಕ ಅಶ್ವಿನಿಯ ಮನೆಯವರಿಂದಲೂ ಒಪ್ಪಿಗೆ ಸಿಕ್ಕಿತು. ಇತ್ತ ಅಪ್ಪು ಮನೆಯಲ್ಲಿ ಎಲ್ಲವೂ ಓಕೆ ಆಗಿತ್ತು. ನಂತರ 1999ರ ಡಿಸೆಂಬರ್ 1ರಂದು ಅಪ್ಪಿ- ಅಶ್ವಿನಿ ವೈವಾಹಿಕ ಬಾಳಿಗೆ ಕಾಲಿಟ್ಟಿದ್ದರು.