ಬೆಂಗಳೂರು : ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಖ್ಯಾತ ಸ್ಟಾಂಡ್ ಅಪ್ ಕಮಿಡಿಯನ್ ಮುನವ್ವರ್ ಫಾರೂಕಿ ನಡೆಸಬೇಕಿದ್ದ ಕಾಮಿಡಿ ಶೋ ಅನ್ನು ಸ್ಥಳೀಯ ಆಡಳಿತ ರದ್ದುಗೊಳಿಸಿತ್ತು.. ಇದೀಗ ಮತ್ತೊಬ್ಬ ಕಾಮಿಡಿಯನ್ ಶೋ ರದ್ದುಗೊಳಿಸಲಾಗಿದೆ..
ಮುನ್ನಾವ್ವರ್ ಫಾರೂಕಿ ಅವರು ಶೋ ರದ್ದಾದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ರು. ಪುನೀತ್ ರಾಜ್ ಕುಮಾರ್ ಅವರ ಸ್ಮರಣಾರ್ಥ ಶೋ ಆಯೋಜಿಸಿ ಬಂದಂತಹ ಹಣವನ್ನ ಅಪ್ಪು ಅವರಂತೆಯೇ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಲು ಉದ್ದೇಶಿಸಲಾಗಿತ್ತು. ಆದ್ರೆ ಶೋ ರದ್ದಾದ ನಂತರ ಇನ್ಮುಂದೆ ತಾವು ಕಾಮಿಡಿ ಶೋ ಮಾಡುವುದಿಲ್ಲ ಎಂದು ಮುನ್ನಾವ್ವರ್ ತಿಳಿಸಿದ್ರು..
ಇದೀಗ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಮತ್ತೊಬ್ಬ ಜನಪ್ರಿಯ ಕಮಿಡಿಯನ್ ಕ್ರುನಾಲ್ ಕಾಮ್ರಾ ಅವರ ಕಾರ್ಯಕ್ರಮವನ್ನ ಕೂಡ ರದ್ದು ಮಾಡಲಾಗಿದೆ.. ಈದ್ರೆ ಈ ಕಾರ್ಯಕ್ರಮವನ್ನ ಸ್ಥಳೀಯ ಆಡಳಿತ ರೆದ್ದು ಮಾಡಿಲ್ಲ ಬದಲಾಗಿ ಜನರ ೊತ್ತಾಯದ ಮೇರೆಗೆ ರದ್ದುಗೊಳಿಸಲಾಗಿದೆ..
ಕೋರಮಂಗಲದಲ್ಲಿ ಕುನಾಲ್ ಕಾಮ್ರಾರ ಶೋ ಆಯೋಜನೆ ಮಾಡಲಾಗಿತ್ತು. ಟಿಕೆಟ್ ಮಾರಾಟ ಸಹ ಆಗಿತ್ತು. ಆದರೆ ಆಯೋಜಕರಿಗೆ ಬಂದ ಬೆದರಿಕೆ ಕರೆಗಳು ಹಾಗೂ ಪೊಲೀಸರಿಗೆ ಬಂದ ಎಚ್ಚರಿಕೆ ಕರೆಗಳಿಂದಾಗಿ ಆಯೋಜಕರು ಕಾರ್ಯಕ್ರಮವನ್ನು ರದ್ದು ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಮಿಡಿಯನ್ ಕುನಾಲ್ ಕಾಮ್ರಾ, ಎರಡು ಕಾರಣಗಳಿಗಾಗಿ ಶೋ ಅನ್ನು ರದ್ದು ಮಾಡಲಾಗಿದೆ. 45 ಜನರು ಪಾಲ್ಗೊಳ್ಳುವುದಕ್ಕೆ ಪ್ರವೇಶವನ್ನು ನಿರಾಕರಿಸಲಾಗಿದೆ. ಹಾಗೂ ನಾನು ಅಲ್ಲಿ ಪ್ರದರ್ಶನ ನೀಡಿದರೆ ಥಿಯೇಟರ್ ಅನ್ನು ಬಂದ್ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಬಹುಷಃ ನನ್ನನ್ನು ಕೊರೊನಾದ ಹೊಸ ತಳಿ ಎಂದು ಅವರು ಭಾವಿಸಿರಬೇಕು ಎಂದು ಬೇಸರ ಹೊರಹಾಕಿದ್ದಾರೆ.