ಬೆಂಗಳೂರು : ಸ್ಯಾಂಡಲ್ ವುಡ್ ನ ‘ಯುವರತ್ನ’ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲ ಅಗಲಿ 1 ತಿಂಗಳೇ ಕಳೆದಿದೆ.. ಆದ್ರೂ ಆ ನೋವು ಇನ್ನೂ ಮಾಸಿಲ್ಲ.. ಆ ಕಹಿ ಸತ್ಯ ಅರಿಗಿಸಿ ಕೊಳ್ಳೋದಕ್ಕೆ ಕುಟುಂಬ ಹಾಗೂ ಕರ್ನಾಟಕದ ಜನರಿಂದ ಸಾಧ್ಯವಾಗ್ತಿಲ್ಲ.. ಆದ್ರೆ ಅಪ್ಪು ಅವರ ಅಗಲಿಕೆ ಕೇವಲ ಸ್ಯಾಂಡಲ್ ವುಡ್ ಅಷ್ಟೇ ಅಲ್ದೇ ಪರ ಭಾಷಾ ಸಿನಿಮಾ ರಂಗದವರಿಗೆ ಆಘಾತ , ನೋವುಂಟುಮಾಡಿದೆ..
ಇದೀಗ ಅಪ್ಪು ಸ್ಮರಣಾರ್ಥ ಟಾಲಿವುಡ್ ನ ಪವರ್ ಪವನ್ ಕಲ್ಯಾಣ್ ಅವರ ಅಭಿಮಾನಿಗಳು ನೇತ್ರದಾನಕ್ಕೆ ಮುಂದಾಗಿದ್ದಾರೆ.. ಅಂದ್ಹಾಗೆ ಪವನ್ ಕಲ್ಯಾಣ್ ಅಭಿಮಾನಿಗಳು ಕೂಡ ಪುನೀತ್ ರಾಜ್ ಕುಮಾರ್ ಅವರರನ್ನ ಅಷ್ಟೇ ಇಷ್ಟ ಪಡ್ತಾರೆ..
ಹೀಗಾಗಿ ಅಪ್ಪು ನೆನಪಿಗಾಗಿ ಪವನ್ ಕಲ್ಯಾಣ್ ಫ್ಯಾನ್ಸ್ ನೇತ್ರದಾನಕ್ಕೆ ಸಜ್ಜಾಗಿದ್ದಾರೆ..
ಕೋಲಾರದ ಚಿಂತಾಮಣಿಯ ಪವರ್ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಹಾಗೂ ನೇತ್ರದಾನಕ್ಕೆ ಮುಂದಾಗಿದ್ದಾರೆ. ಡಿಸೆಂಬರ್ 6ರಂದು ಅಪ್ಪು ನೆನಪಿನಲ್ಲಿ ನಡೆಯುತ್ತಿರುವ ಈ ಮಹತ್ ಕಾರ್ಯದಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದಾರೆ.