ಕನ್ನಡದ ಹಿರಿಯ ನಟ ಶಿವರಾಮ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ತಲೆಗೆ ಪೆಟ್ಟು ಬಿದ್ದು ಗಂಭೀರವಾಗಿ ಗಾಯಗೊಂಡ ಹಿನ್ನಲೆಯಲ್ಲಿ ಅವರನ್ನ ಸೀತಾ ಸರ್ಕಲ್ ಬಳಿ ಇರುವ ಪ್ರಶಾಂತ್ ಮೆಡಿಕಲ್ ಆಸ್ಪತ್ರೆಗೆ ಸೇರಿಸಿಲಾಗಿದೆ.
ಈ ಬಗ್ಗೆ ಅವರ ಹಿರಿಯ ಪುತ್ರ ರವಿಶಂಕರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಕಲದಿನಗಳ ಹಿಂದೆಯಷ್ಟೆ ಶಿವರಾಮ್ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೊಳಗಾಗಿತ್ತು ತದನಂತರ ಅವರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು.
ನಿನ್ನೆ ಆಯ್ಯಪ್ಪ ಸ್ವಾಮಿ ಪೂಜೆಗೆಂದು ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದ ಅವರು ಎಷ್ಟು ಹೊತ್ತು ಕಳೆದರು ಹೊರಗೆ ಬರೆದೆ ಇದ್ದಾಗ, ಮನೆಯವರು ಅನುಮಾನಗೊಂಡು ಹೊಗಿ ನೋಡಿದ್ದಾರೆ. ರೂಮಿನಲ್ಲಿ ಶಿವರಾಮ್ ಅವರು ಕುಸಿದು ಬಿದ್ದಿದ್ದದರು ಅವರ ಮೆದುಳಿಗೆ ತೀವ್ರ ಪೆಟ್ಟು ಬಿದ್ದಿದ್ದು ಮೆದುಳಿನಲ್ಲಿ ತೀವ್ರ ರಕ್ತ ಸ್ರಾವವಾಗಿದೆ.
ನಂತರ ಮನೆಯವರು ಅವರನ್ನ ತಕ್ಷಣವೇ ಆಸ್ಪತ್ರೆಗೆ ಸೇರಿಸಿದ್ದಾರೆ. ಸ್ಕಾನಿಂಗ್ ರಿಪೋರ್ಟ್ ನಲ್ಲಿ ಅವರ ಮೆದುಳಿನಲ್ಲಿ ತೀವ್ರ ರಕ್ತಸ್ರಾವಾಗಿರುವುದು ಗೊತ್ತಾಗಿದೆ. ಆದರೆ ಅವರಿಗೆ 84 ವರ್ಷ ವಯಸ್ಸಾಗಿರುವುದರಿಂದ ಸರ್ಜರಿ ಮಾಡಲು ಸಾದ್ಯವಾಗಿಲ್ಲ. ಸದ್ಯ ಅವರಿಗೆ ಐಸಿಯು ನಲ್ಲಿ ಚಿಕಿತ್ಸೆ ನಡೆಯುತ್ತಿದೆ.