ಬಿಗ್ ಬಾಸ್ ಕನ್ನಡ ಸೀಸನ್ 5 ರ ಸ್ಪರ್ಧಿ ಹಾಗೂ ರನ್ನರ್ ಅಪ್ ಆಗಿದ್ದ ಕಿರಿಕ್ ಕೀರ್ತಿ ಮೇಲೆ ಪಬ್ ನಲ್ಲಿ ಬಿಯರ್ ಬಾಟಲಿನಿಂದ ಹಲ್ಲೆ ನಡೆಸಲಾಗಿದೆ.. ತಡರಾತ್ರಿ ಪಬ್ನಲ್ಲಿ ಪಬ್ನಲ್ಲಿ ಫೋಟೋ ವಿಚಾರಕ್ಕೆ ಕಿರಿಕ್ ನಡೆದಿದೆ ಎನ್ನಲಾಗಿದೆ.. ಗಲಾಟೆ ವೇಳೆ ಕಿರಿಕ್ ಕೀರ್ತಿ ಮೇಲೆ ಬಿಯರ್ ಬಾಟಲ್ ನಿಂದ ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ..
ಸದಾಶಿವನಗರ ಪಬ್ನಲ್ಲಿ ಪೋಟೋ ವಿಚಾರಕ್ಕೆ ಬಿಯರ್ ಬಾಟೆಲ್ನಿಂದ ಹಲ್ಲೆ ನಡೆಸಲಾಗಿದೆ. ಸ್ನೇಹಿತರು, ಕುಟುಂಬಸ್ಥರೊಂದಿಗೆ ಕಿರಿಕ್ ಕೀರ್ತಿ ಸದಾಶಿವನಗರದ ಹ್ಯಾಮರ್ಡ್ ಪಬ್ಗೆ ಹೋಗಿದ್ದರು. ಇದೇ ವೇಳೆ ಅಲ್ಲಿದ್ದ ವ್ಯಕ್ತಿಯೊಬ್ಬ ಕಿರಿಕ್ ಕೀರ್ತಿ ಅವರ ಫೋಟೋ ತೆಗೆದಿದ್ದಾರೆ. ನನ್ನ ಪರ್ಮಿಷನ್ ಇಲ್ಲದೇ ಯಾಕೆ ಫೋಟೋ ತೆಗೆದುಕೊಂಡಿದ್ದೀರ ಎಂದು ಕಿರಿಕ್ ಕೀರ್ತಿ ಕೇಳಿದ್ದಾರೆ. ಇದಾದ ಬಳಿಕ ಕೆಲ ಕಾಲ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇಬ್ಬರು ಪರಸ್ಪರ ಕಿತ್ತಡಿಕೊಂಡಿದ್ದಾರೆ. ಇದು ಅತಿರೇಕಕ್ಕೆ ತಲುಪಿದ್ದು ಆ ವ್ಯಕ್ತಿ ಅಲ್ಲೆ ಪಕ್ಕದಲ್ಲಿದ್ದ ಬಿಯರ್ ಬಾಟಲ್ ತೆಗೆದುಕೊಂಡು ಕಿರಿಕ್ ಕೀರ್ತಿ ತಲೆಗೆ ಹೊಡೆದಿದ್ದಾನೆ..
ಇದರಿಂದ ಗಾಯಗೊಂಡ ಕಿರಿಕ್ ಕೀರ್ತಿ ಅವರನ್ನು ಖಾಸಗಿ ಆಸ್ಪತ್ರೆ ಗೆ ದಾಖಲಿಸಲಾಗಿದೆ. ಈ ಬಗ್ಗೆ ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಂದ್ಹಾಗೆ ಇದೇ ರೀತಿ 2018ರಲ್ಲಿ ಕೂಡ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಕ್ಯಾಂಪಸ್ ಸಮೀಪ ಕಿರಿಕ್ ಕೀರ್ತಿ ಮೇಲೆ ಹಲ್ಲೆಯಾಗಿತ್ತು.