ಮುಂಬೈ : ಬಾಲಿವುಡ್ ನ ‘ಕ್ವೀನ್’ ಕಂಗನಾ ರಣೌತ್ ಸದಾ ಅವರಿವರ ವಿರುದ್ಧ ಕಿಡಿಕಾರೋದು , ಆರೋಪಗಳನ್ನ ಮಾಡೋ ಮೂಲಕವೇ ಕಾಂಟ್ರವರ್ಸಿಗಳಿಂದಲೇ ಸುದ್ದಿಯಲ್ಲಿರುತ್ತಾರೆ.. ಅವರು ಬೇರೆ ಅವರನ್ನ ಹೊಗಳುವುದು ತೀರಾ ಅಪರೂಪ. ಅಂತಹದ್ರಲ್ಲಿ ಈಗ ಸೌತ್ ಸಿನಿಮಾದ ಕ್ಯೂಟ್ ನಟಿಯ ಸೌಂದರ್ಯವನ್ನ ಬಾಯ್ತುಂಬ ಹೊಗಳಿ ಅಚ್ಚರಿ ಮೂಡಿಸಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರ ಅಂದವನ್ನ ‘ತಲೈವಿ’ ಹೊಗಳಿರೋದು ಆಶ್ಚರ್ಯಕ್ಕೆ ಕಾರಣವಾಗಿದೆ.
ಸಮಂತಾ ನಾಗಚೈತನ್ಯ ಜೊತೆಗೆ ವಿಚ್ಛೇದನ ಪಡೆದು ಈಗ ತಮ್ಮ ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ.. ಬೋಲ್ಡ್ ಪಾತ್ರಗಳನ್ನ ಕೂಡ ಒಪ್ತಿದ್ದಾರೆ.. ಇಂಗ್ಲಿಷ್ ಸಿನಿಮಾ ಒಂದನ್ನ ಮಾಡ್ತಿರೋ ಸಮಂತಾ ಆ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಳ್ತಿದ್ಧಾರೆ ಎನ್ನಲಾಗಿದೆ. ಈ ನಡುವೆ ಸಮಂತಾ ಇನ್ಸ್ಟಾಗ್ರಾಮ್ನಲ್ಲಿ ಫೋಟೋವನ್ನು ಶೇರ್ ಮಾಡಿದ್ದು, ಆ ಫೋಟೋಗೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.. ಸಮಂತಾ ಅವರು ಇತ್ತೀಚೆಗೆ ಮ್ಯಾಗಜೀನ್ಗಾಗಿ ಫೋಟೋಶೂಟ್ ಮಾಡಿಸಿದ್ದು, ಕೆಲವು ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಮಂತಾ ಫೋಟೋದಲ್ಲಿ ಸಖತ್ ಗಾರ್ಜಿಯಸ್ ಆಗಿ ಕಾಣಿಸಿಕೊಂಡಿದ್ದು, ಫೋಟೋ ಅಭಿಮಾನಿಗಳ ಗಮನ ಸೆಳೆದಿದೆ.. ಇದೇ ಪೋಸ್ಟ್ ಗೆ ಬಾಲಿವುಡ್ ನ ‘ಮಣಿಕರ್ಣಿಕಾ’ ( kangana ranouth) ಕೂಡ ಫಿದಾ ಆಗಿದ್ದಾರೆ.
ಸಮಂತಾ ಫೋಟೋಗೆ ‘ಪ್ರಿಟಿ ವುಮೆನ್’ ಎಂದು ಬರೆದು ಕಂಗನಾ ಕಮೆಂಟ್ ಮಾಡಿದ್ದಾರೆ. ಅದಕ್ಕೆ ಸಮಂತಾ ಸಹ ಧನ್ಯವಾದ ಎಂದು ನಗುವಿನ ಎಮೋಜಿಗಳನ್ನು ಕಳುಹಿಸಿದ್ದಾರೆ. ಈ ಹಿಂದೆಯೂ ಕೂಡ ನಾಗ ಚೈತನ್ಯ ಜೊತೆ ಸಮಂತಾ ವಿಚ್ಛೇದನ ಪಡೆದಾಗ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಕಂಗನಾ ಸಮಂತಾ ಬೆಂಬಲವಾಗಿ ನಿಂತಿದ್ದರು. ಪರೋಕ್ಷವಾಗಿ ಅಮೀರ್ ಖಾನ್ ಗೂ ಟಾಂಟ್ ಕೊಟ್ಟಿದ್ರು..