ಕ್ಯಾಟ್ – ವಿಕ್ಕಿ ಮದುವೆ ಬಗ್ಗೆ ಕಂಗನಾ ಹೇಳಿದ್ದು ಹೀಗೆ..?
ನವದೆಹಲಿ : ಬಾಲಿವುಡ್ ನಟಿ ಕಂಗನಾ ಆಗಾಗ ತಾರೆಯರು , ರಾಜಕಾರಣಿಗಳು ಹೀಗೆ ಹೆಚ್ಚಾಗಿ ಆರೋಪ , ಕಿಡಿಕಾರುವುದರ ಮೂಲಕ , ವಿವಾದಗಳಿಂದಲೇ ಸುದ್ದಿಯಲ್ಲಿರುತ್ತಾರೆ. ಇದೀಗ ಕಂಗನಾ ಕತ್ರೀನಾ ಕೈಫ್ ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.. ಬಾಲಿವುಡ್ ಸ್ಟಾರ್ ನಟಿಯರು ತಮಗಿಂತಲೂ ಕಿರಿಯ ವಯಸ್ಸಿನ ವ್ಯಕ್ತಿಗಳನ್ನು ವಿವಾಹವಾಗುತ್ತಿರುವುದು ಶ್ಲಾಘನೀಯ ಎಂದಿದ್ದಾರೆ..
ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿರುವ ಕಂಗನಾ ರಣಾವತ್, ಸಿನಿಮಾರಂಗದ ಮಹಿಳೆಯರು ಯಶಸ್ವಿ ಬದಲಾವಣೆಯೊಂದಕ್ಕೆ ಸಾಕ್ಷಿಯಾಗಿದ್ದಾರೆ. ತಮಗಿಂತಲೂ ಕಿರಿಯ ವಯಸ್ಸಿನವರನ್ನು ವಿವಾಹವಾಗುವ ಮೂಲಕ ಈವರೆಗೂ ಇದ್ದ ಕೆಲವು ನಿಯಮಗಳನ್ನು ಮುರಿದಿದ್ದಾರೆ ಎಂದು ಕತ್ರಿನಾ ಮತ್ತು ವಿಕ್ಕಿ ಕೌಶಲ್ ಹೆಸರನ್ನು ಪ್ರಸ್ತಾಪಿಸದೆಯೇ ಪರೋಕ್ಷವಾಗಿ ಶ್ಲಾಘನೆ ವ್ಯಕ್ತಪಡಿಸಿದ್ದಾಋಎ..
ಯಶಸ್ವಿ ಪುರುಷನೊಬ್ಬ ತನಗಿಂತಲೂ ಕಿರಿಯ ವಯಸ್ಸಿನ ಮಹಿಳೆಯರನ್ನು ವಿವಾಹವಾಗುವು ಸಾಮಾನ್ಯ. ಮಹಿಳೆಯರು ತಮ್ಮ ಪತಿಗಿಂತ ಹೆಚ್ಚು ಯಶಸ್ವಿಯಾಗುವುದು ಸಮಸ್ಯೆ ಎಂದೇ ಭಾವಿಸಲಾಗಿದೆ. ತನಗಿಂತ ಕಿರಿಯ ವಯಸ್ಸಿನ ವ್ಯಕ್ತಿಯನ್ನು ಮದುವೆಯಾಗುವುದು ಮಹಿಳೆಯರಿಗೆ ಅಸಾಧ್ಯದ ಮಾತು. ಇಂತಹ ಸನ್ನಿವೇಶದಲ್ಲಿ ಯಶಸ್ವಿ ಮಹಿಳೆಯರೊಬ್ಬರು ತನಗಿಂತ ಚಿಕ್ಕ ವಯಸ್ಸಿನ ವ್ಯಕ್ತಿಯನ್ನು ವಿವಾಹವಾಗುತ್ತಿರುವುದು ಶ್ಲಾಘನೀಯ. ಸಿನಿಮಾ ಕ್ಷೇತ್ರದಲ್ಲಿ ಆ ಒಂದು ಬದಲಾವಣೆಯಾಗಿದೆ ಎಂದು ಕಂಗನಾ ಅಭಿಪ್ರಾಯಪಟ್ಟಿದ್ದಾರೆ.
ಅಂದ್ಹಾಗೆ ಕತ್ರಿನಾ ಕೈಫ್‌ಗೆ 38 ವರ್ಷ, ವಿಕ್ಕಿ ಕೌಶಲ್‌ಗೆ 33 ವರ್ಷ. ಇವರಿಬ್ಬರಿಗೂ 5 ವರ್ಷ ವಯಸ್ಸಿನ ಅಂತರವಿದೆ. ಈ ವಿಚಾರವನ್ನೇ ಗಮನದಲ್ಲಿಟ್ಟುಕೊಂಡು ಕತ್ರಿನಾ ಪರೋಕ್ಷವಾಗಿ ಕತ್ರಿಕಾ ವಿಕ್ಕಿ ಬದುವೆ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ,..