ರಶ್ಮಿಕಾಗೆ ಚಾನ್ಸ್ ಕೊಟ್ಟು ಮರೆಸಿದ ಕನ್ನಡವನ್ನೇ ಮರೆತುಬಿಟ್ರಾ…?
ಕನ್ನಡ ಸಿನಿಮಾರಂಗದ ಮೂಲಕ ಮೆರೆದಿದ್ದು ರಶ್ಮಿಕಾ ಮಂದಣ್ಣ.. ಇಡೀ ಸಿನಿಮಾರಂಗಕ್ಕೆ ಪರಿಚಯ ಮಾಡಿಸಿದ್ದೇ ಕನ್ನಡ ಸಿನಿಮಾ.. ಕಿರಿಕ್ ಪಾರ್ಟಿ ಸಿನಿಮಾ.. ಈ ಚಿತ್ರದ ಮೂಲಕ ನ್ಯಾಷನಲ್ ಕ್ರಶ್ ಆದ ರಶ್ಮಿಕಾ ಕೆಲ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ರಾದ್ರೂ ಅವರಿಗೆ ಬೇರೆ ಭಾಷೆ ನಟ ನಟಿಯರು , ಸಿನಿಮಾ ಮೇಲಿರುವ ಒಲವು , ಕನ್ನಡದ ಮೇಲಿಲ್ಲಾ ಅನ್ನೋದನ್ನ ಅನೇಕ ಬಾರಿ ಅವರೇ ತಮ್ಮ ನಡೆಯಿಂದ ಸಾಬೀತು ಮಾಡಿದ್ದಾರೆ..
ಈಗಾಗಲೇ ಕನ್ನಡ ಸಿನಿಮಾರಂಗದಿಂದ ಸಂಪೂರ್ಣ ಹೊರಗುಳಿದ ರಶ್ಮಿಕಾ ಬಾಲಿವುಡ್ , ಟಾಲಿವುಡ್ ನಲ್ಲಿ ಮಿಂಚುತ್ತಿದ್ದಾರೆ.. ಸಾಲು ಸಾಲು ಸಿನಿಮಾಗಳನ್ನ ಸ್ಟಾರ್ ನಟರ ಜೊತೆಗೆ ಮಾಡ್ತಾಯಿದ್ದಾರೆ.. ಅದೇ ರೀತಿಯಾದ ಮತ್ತೊಂದು ಸಿನಿಮಾ ಪುಷ್ಪ.. ಈ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಮೂಲವಾಗಿ ತೆಲುಗಿನಲ್ಲಿ ಬರುತ್ತಿದೆ.. ಆದ್ರೆ ಕನ್ನಡ , ತಮಿಳು, ಹಿಂದಿ, ,ಮಲಯಾಳಂಗೂ ಕೂಡ ಡಬ್ಬಿಂಗ್ ಆಗಿ ರಿಲೀಸ್ ಆಗ್ತಿದೆ..
ಸುಕುಮಾರ್ ನಿರ್ದೇಶನ ಅಲ್ಲು ಅರರ್ಜುನ್ ನಟನೆಯ ಬಹುನಿರೀಕ್ಷೆಯ ಈ ಸಿನಿಮಾದ ಟ್ರೇಲರ್ ಇತ್ತೀಚೆಗಷ್ಟೇ ರಿಲೀಸ್ ಆಗಿ ಚಿಂದಿ ಉಡಾಯಿಸುತ್ತಿದೆ.. ಎಲ್ಲಾ ಭಾಷೆಗಳಲ್ಲೂ ಟ್ರೇಲರ್ ರಿಲೀಸ್ ಆಗಿದೆ.. ಆದ್ರೆ ರಶ್ಮಿಕಾ ತೆಲುಗಿನಲ್ಲಿ ತಮ್ಮ ಪಾತ್ರಕ್ಕೆ ತಾವೇ ಧ್ವನಿ ನೀಡಿದ್ದಾರೆ.. ಆದ್ರೆ ತಮ್ಮ ಮೂಲ ಭಾಷೆ ಕನ್ನಡದಲ್ಲಿ ಅವರ ಪಾತ್ರಕ್ಕೆ ಬೇರೆಯಾರೋ ಧ್ವನಿ ನೀಡಿರೋದು ರಶ್ಮಿಕಾ ಮೇಲಿನ ಕನ್ನಡಿಗರ ಕೋಪವನ್ನ ಮತ್ತಷ್ಟು ಹೆಚ್ಚಿಸಿದೆ.
ಹಾಗಂತ ಇದು ರಶ್ಮಿಕಾರ ನಿರ್ಧಾರ ಆಗಿರದೇ ನಿರ್ಮಾಪಕ, ನಿರ್ದೇಶಕರ ನಿರ್ಧಾರವೇ ಆಗಿರಬಹುದು.. ಆದರೆ ಮೂಲ ಭಾಷೆಯ ನಟರಿರುವಾಗ ಅವರ ಭಾಷೆಯ ವರ್ಷನ್ ಗೆ ಅವರ ಕೈಲೇ ಡಬ್ಬಿಂಗ್ ಮಾಡಿಸಬೇಕಿತ್ತು ಅನ್ನೋದು ಕನ್ನಡದ ಸಿನಿಪ್ರಿಯರ ವಾದ. ಮೈತ್ರಿ ಮೂವೀಸ್ ನಿರ್ಮಾಣದ ಪುಷ್ಪ ಸಿನಿಮಾ ಡಿಸೆಂಬರ್ 17 ರಂದು ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಅಲ್ಲು ಅರ್ಜುನ್ , ರಶ್ಮಿಕಾ ಹೊರತಾಗಿ ಫಹಾದ್ ಫಾಸಿಲ್, ಸುನಿಲ್, ಡಾಲಿ ಧನಂಜಯ್ ಸೇರಿದಂತೆ ಸ್ಟಾರ್ ನಟರ ದಂಡೇ ಇದೆ..