ಆರ್ ಆರ್ ಆರ್ ಟ್ರೈಲರ್ ಹೇಗಿದೆ ಗೊತ್ತಾ..?
ಎನ್‌ಟಿಆರ್ ಮತ್ತು ರಾಮಚರಣ್ ನಾಯಕರಾಗಿ ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ‘ಆರ್‌ಆರ್‌ಆರ್’. ಗುರುವಾರ ಈ ಚಿತ್ರದ ಟ್ರೈಲರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ಮೈನವಿರೇಳಿಸುವಂತಹ ಆಕ್ಷನ್ ಸೀಕ್ವೆನ್ಸ್‌ಗಳು, ಹೌರಾ ಎನ್ನುವಂತಹ ಸನ್ನಿವೇಶಗಳು . ಪ್ರತಿ ಭಾರತೀಯನಲ್ಲಿ ಪ್ರೇರಣೆ ನೀಡೋ ಡೈಲಾಗ್‌ಗಳೊಂದಿಗೆ ಟ್ರೈಲರ್ ವ್ಹಾರೇ ವ್ಹಾ ಎನ್ನುವಂತಿದೆ.
ಹುಲಿನ ಹಿಡಿಬೇಕು ಅಂದ್ರೆ ಬೇಟೆಗಾರ ಬರಬೇಕು. ಒಬ್ಬನಿದ್ದಾನೆ ಸರ್..
ಯಂಗ್ ಟೈಗರ್ ಎನ್‌ಟಿಆರ್ ಆಡುಭಾಷೆಯಲ್ಲಿ ಹೇಳುವ ಪ್ರಾಣಿಕ್ಕಿಂತ ಹೆಚ್ಚಾದ ನಿನ್ನ ಸ್ನೇಹ ನನ್ ಸ್ವಂತ ಆಗ್ತಾದಣ್ಣ, ಗರ್ವದಿಂದ ಈ ಮಣ್ಣಲ್ಲಿ ಬೇರ್ಕೋತೀನಿ. ಕದ್ದು ಕದ್ದು ಹೆದರಿ ಹೆದರಿ ಅಲ್ಲ ತುಳ್ಕೊಂಡು ಹೋಗಬೇಕು.. ಎದುರಿಗೆ ಬಂದವನ ತಲೆ ಎಗಸಿಕೊಂಡು ಹೋಗಬೇಕು ಡೈಲಾಗ್ ಗಳು.
‘ಭೀಮ್.. ಈ ನರಿಗಳ ಬೇಟೆ ಇನ್ನೇಷ್ಟು ಹೊತ್ತು ಕುಂಭಸ್ತಳವನ್ನೇ ಪುಡಿ ಮಾಡೋಣ ಎನ್ನುವ ರಾಮ್ ಚರಣ್ ಡೈಲಾಗ್‌ಗಳು ಚಿಂದಿಯನ್ನುವಂತಿವೆ.
ಇನ್ನು ಪ್ರತಿಯೊಂದು ಪ್ರೇಮ್ ನಲ್ಲೂ ನಿರ್ದೇಶಕ ರಾಜಮೌಳಿಯ ಮಾರ್ಕ್ ಕಾಣಿಸುತ್ತಿದೆ. ಎಂ.ಎಂ.ಕೀರವಾಣಿ ಅವರ ಹಿನ್ನಲೆ ಸಂಗೀತ ಅದ್ಭುತವಾಗಿದೆ. ಒಟ್ಟಾರೆ ಆರ್ ಆರ್ ಆರ್ ಟ್ರೈಲರ್ ಸೂಪರಾಗಿದೆ.
ಇನ್ನು ಇತ್ತೀಚಿನ ಮಾಹಿತಿ ಪ್ರಕಾರ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. RRR ಸರಿಸುಮಾರು ಮೂರು ಗಂಟೆ ಆರು ನಿಮಿಷ 54 ಸೆಕೆಂಡ್‌ಗಳ ಅವಧಿಯೊಂದಿಗೆ ಪ್ರೇಕ್ಷಕರ ಮುಂದೆ ಬರಲಿದೆ.
400 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಎನ್ ಟಿಆರ್ ಕೊಮರಂ ಭೀಮನಾಗಿ, ರಾಮ್ ಚರಣ್ ಅಲ್ಲೂರಿ ಸೀತಾರಾಮರಾಜು ಆಗಿ ನಟಿಸಿದ್ದಾರೆ. ಚೆರ್ರಿಗೆ ಜೋಡಿಯಾಗಿ ಬಾಲಿವುಡ್ ನಟಿ ಆಲಿಯಾ ಭಟ್ ನಟಿಸಿದ್ದರೆ, ತಾರಕ್ ಗೆ ಹಾಲಿವುಡ್ ನಟಿ ಒಲಿವಿಯಾ ಮೋರಿಸ್ ಜೋಡಿಯಾಗಿದ್ದಾರೆ. RRR ಜನವರಿ 7, 2022 ರಂದು ಬಿಡುಗಡೆಯಾಗಲಿದೆ.