ಮಾಡೆಲಿಂಗ್ ಜಗತ್ತಿಗೆ ಪಾದಾರ್ಪಣೆ ಮಾಡಿದ ಸಚಿನ್ ತೆಂಡುಲ್ಕರ್ ಮಗಳು..!
ಕ್ರಿಟೆಕ್ ದಿಗ್ಗಜ ಸಚಿನ್ ತೆಂದುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ ಅವರು ಮಾಡೆಲಿಂಗ್ ಜಗತ್ತಿಗೆ ಪಾದಾರ್ಪಣೆ ಮಾಡಿದ್ದಾರೆ.. ಅಷ್ಟೇ ಅಲ್ಲ ಜನಪ್ರಿಯ ಬಟ್ಟೆಗಳ ಬ್ರ್ಯಾಂಡ್ ನ ಜಾಹೀರಾತಿನಲ್ಲೂ ನಟಿಸಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಪ್ರಖ್ಯಾತ ಉಡುಪು ಬ್ರ್ಯಾಂಡ್ ಎಜಿಯೊನ ಹೊಸ ಉಡುಪು ಶ್ರೇಣಿಯನ್ನು ಹೊರತಂದಿದ್ದು ಅದಕ್ಕಾಗಿ ಸಾರಾ ತೆಂಡೂಲ್ಕರ್ ಮಾಡೆಲಿಂಗ್ ಮಾಡಿದ್ದಾರೆ. ಸಾರಾ ತೆಂಡೂಲ್ಕರ್ ಜೊತೆಗೆ ನಟಿ ಬನಿತಾ ಸಂಧು ಹಾಗೂ ಟಾನಿಯಾ ಶ್ರಾಫ್ ಸಹ ಇದ್ದಾರೆ. ಮೂವರು ಒಟ್ಟಿಗೆ ವಿಡಿಯೋನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಸಾರಾ ತೆಂಡೂಲ್ಕರ್ ಅವರ ಮೊದಲ ಜಾಹೀರಾತಾಗಿದೆ.
ಮುಂದಿನ ದಿನಗಳಲ್ಲಿ ಇನ್ನಷ್ಟು ಜಾಹೀರಾತುಗಳ ಜೊತೆಗೆ ಸಿನಿಮಾಗಳಲ್ಲೂ ಸಾರಾ ತೆಂಡುಲ್ಕರ್ ಕಾಣಿಸಿಕೊಳ್ಳಲಿರುವ ನಿರೀಕ್ಷೆ ಇದೆ..