ಟಾಲಿವುಡ್ , ಕಾಲಿವುಡ್ ನಲ್ಲಿ ನಟಿಸಿ ಈಗ ಬಾಲಿವುಡ್ ನಲ್ಲಿ ಮಿಂಚುತ್ತಿರುವ ನಟಿ ತಾಪ್ಸಿ ಪನ್ನು.. ಸದ್ಯ ತಾಪ್ಸಿಯನ್ನ ಸಿಕ್ಕಾಪಟ್ಟೆ ಸ್ಟ್ರಾಂಗ್ ನಟಿಯರ ಪೈಕಿ ಗಣನೆಗೆ ತೆಗೆದುಕೊಳ್ಳಲಾಗುತ್ತೆ.. ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ತಾಪ್ಸಿ ನಟಿಸುತ್ತಾ ತಮ್ಮದೇ ಆದ ಚಾಪು ಮೂಡಿಸುತ್ತಿದ್ದಾರೆ..
ಇತ್ತ ಟಾಲಿವುಡ್ ನಟಿ ಸಮಂತಾ ಕೂಡ ಪತಿ ಜೊತೆಗೆ ವಿಚ್ಛೇಧನದ ನಂತರ ಸಾಕಷ್ಟು ಬೋಲ್ಡ್ ನಿರ್ಧಾರಗಳನ್ನ ತೆಗೆದುಕೊಳ್ತಾಯಿದ್ದಾರೆ.. ಇದೀಗ ಸ್ಯಾಮ್ ನಟನೆಯ ಸಿನಿಮಾಗೆ ತಾಪ್ಸಿ ಬಂಡವಾಳ ಹೂಡುತ್ತಿದ್ದಾರೆ. ತಾಪ್ಸಿ ಪನ್ನು ಇತ್ತೀಚೆಗಷ್ಟೆ ತಮ್ಮದೇ ಆದ ಪ್ರೊಡಕ್ಷನ್ ಹೌಸ್ ‘ದಿ ಔಟ್ಸೈಡರ್ಸ್ ಫಿಲಮ್ಸ್’ ಸ್ಥಾಪಿಸಿದ್ದಾರೆ. ತಮ್ಮ ನಿರ್ಮಾಣದ ಸಿನಿಮಾದಲ್ಲಿ ನಟಿಸುವಂತೆ ಸಮಂತಾರನ್ನು ತಾಪ್ಸಿ ಕೇಳಿಕೊಂಡಿರೋದಾಗಿ ಕೆಲ ದಿನಗಳ ಹಿಂದೆ ಸುದ್ದಿಯಾಗಿತ್ತು..
ಸಮಂತಾರಿಗೆ ಸಿನಿಮಾ ಆಫರ್ ಕೊಟ್ಟಿರುವ ಬಗ್ಗೆ ತಾಪ್ಸಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಸಮಂತಾ ಸಹ ತಾಪ್ಸಿಯ ಸಿನಿಮಾದಲ್ಲಿ ನಟಿಸಲು ಉತ್ಸುಕರಾಗಿದ್ದಾರೆ ಎನ್ನಲಾಗ್ತಿದೆ. ವಿಶೇಷ ಅಂದ್ರೆ ಈ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಎನ್ನಲಾಗ್ತಿದೆ. ದಕ್ಷಿಣ ಭಾರತ ಭಾಷೆಗಳಲ್ಲಿ ಸಮಂತಾ ನಟಿಸಿದರೆ ತಾಪ್ಸಿ ಹಿಂದಿ ಭಾಷೆಯಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಇನ್ನು ನಟಿ ಸಮಂತಾ ಗುಣಶೇಖರ್ ನಿರ್ದೇಶನದ ‘ಶಕುಂತಲಮ್’, ಹರಿ ಶಂಕರ್ ನಿರ್ದೇಶನದ ‘ಯಶೋಧಾ’ ಸಿನಿಮಾದಲ್ಲಿ ಬ್ಯುಸಿಯಿದ್ದಾರೆ.. ಅಷ್ಟೇ ಅಲ್ದೇ ತಮ್ಮ ಮೊದಲ ಹಾಲಿವುಡ್ ಸಿನಿಮಾ ‘ಅರೇಂಜ್ಮೆಂಟ್ಸ್ ಆಫ್ ಲವ್’ ಸಿನಿಮಾದಲ್ಲಿ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ..
ಜೊತೆಗೆ ಅಲ್ಲು ಅಭಿನಯದ ‘ಪುಷ್ಪ’ ಸಿನಿಮಾದಲ್ಲಿ ಮೊದಲ ಬಾರಿಗೆ ಐಟಂ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ. ಇತ್ತ ತಾಪ್ಸಿ ನಟನೆಯ ‘ಶಬಾಶ್ ಮಿತು’ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಇದರ ಜೊತೆಗೆ ತಾಪ್ಸಿ ಮಿಷನ್ ಇಂಪಾಸಿಬಲ್ ,ದೊ ಬಾರ, ಬ್ಲರ್, ಸೇರಿದಂತೆ ಇನ್ನೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.