5ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಚಂದನವನದ ‘ರಾಕಿಂಗ್’ ದಂಪತಿ..!
ಬೆಂಗಳೂರು : ಸೌತ್ ಇಂಡಿಯಾ ಸಿನಿಮಾದ ಸ್ಟಾರ್ ಕಪಲ್ , ಎಲ್ಲರ ಫೇವರೇಟ್ ಕಪಲ್ ರಾಕಿಂಗ್ ಸ್ಟಾರ್ ಯಶ್ , ರಾಧಿಕಾ ಪಂಡಿತ್ ಇಂದು 5ನೇ ವರ್ಷದ ಮದುವೆ ಸಂಭ್ರಮದಲ್ಲಿದ್ದಾರೆ.. ಚಂದನವನದ ರಾಕಿಂಗ್ ದಂಪತಿ ಮಿಸ್ಟರ್ ಅಂಡ್ ಮಿಸ್ಟರ್ ರಾಮಾಚಾರಿ ಕಪಲ್ ಗೆ ಅಭಿಮಾನಿಗಳು , ತಾರೆಯರು ಶುಭಾಷಯಗಳ ಮಹಾಪೂರವನ್ನೇ ಹರಿಸ್ತಾಯಿದ್ದಾರೆ..
ಮದುವೆ ವಾರ್ಷಿಕೋತ್ಸವದ ಹಿನ್ನೆಲೆ ರಾಧಿಕಾ ಅವರು ಇನ್‍ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಒಂದನ್ನ ಹಾಕಿದ್ದಾರೆ.. ಯಶ್ ಜೊತೆಗಿನ ಫೋಟೋವನ್ನು ಪೋಸ್ಟ್ ಮಾಡಿ , “ ಯಾರಾದರೂ ನಿಮ್ಮನ್ನು ನೀವು ಉತ್ತಮಗೊಳ್ಳುವಂತೆ ಮಾಡುವ ಪ್ರೀತಿಯಲ್ಲಿ ಮತ್ತು ಜೀವನದಲ್ಲಿ ನಿಮ್ಮನ್ನು ಪ್ರೇರೇಪಿಸುವ, ಪ್ರೋತ್ಸಾಹಿಸುವ, ನೀವು ನಿರ್ಲಕ್ಷಿಸುವ ಕನಸುಗಳು ಮತ್ತು ಗುರಿಗಳ ಕಡೆಗೆ ನಿಮ್ಮನ್ನು ಮತ್ತೆ ತಳ್ಳುವವರು, ಯಾವುದೇ ಅಪೇಕ್ಷೆಗಳಿಲ್ಲದೆ ನಿಸ್ವಾರ್ಥವಾಗಿ ಅವರ ಸಮಯವನ್ನು ನಿಮಗಾಗಿ ತ್ಯಾಗ ಮಾಡುವವರು ನಿಮ್ಮ ಜೀವನದಲ್ಲಿ ಇದ್ದರೆ, ನೀವು ಧೈರ್ಯಶಾಲಿ, ಸುಸಜ್ಜಿತ ಸಂತೋಷದ ವ್ಯಕ್ತಿಯಾಗಲು ಸಹಾಯ ಮಾಡುತ್ತೆ. ಅಂತಹ ಸಂಬಂಧ ಪವಿತ್ರವಾದದ್ದು, ಅಂತಹ ಪ್ರೀತಿಯನ್ನು ನೀವು ಹಿಡಿದುಕೊಳ್ಳಿ” ಎಂದು ಮನಸ್ಸು ಮುಟ್ಟುವ ಸಾಲುಗಳನ್ನ ಬರೆದುಕೊಂಡಿದ್ದಾರೆ.
ಇನ್‍ಸ್ಟಾದಲ್ಲಿ ರಾಧಿಕಾ, ಯಶ್ ಜೊತೆಗೆ ಬೀಚ್ ನಲ್ಲಿ ಕೈಹಿಡಿದುಕೊಂಡು ಕುಳಿತುಕೊಂಡಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.. ಅಂದ್ಹಾಗೆ ಯಶ್ ಹಾಗೂ ರಾಧಿಕಾ ಪಂಡಿತ್ ಸ್ಯಾಂಡಲ್ ವುಡ್ ನ ಪರ್ಪೆಕ್ಟ್ ಸ್ಟಾರ್ ಕಪಲ್ , ಆನ್ ಸ್ಕ್ರೀನ್ ಇರಲಿ ಆಫ್ ಸ್ಕ್ರೀನ್ ಇರಲಿ ಈ ಜೋಡಿ ತುಂಬಾ ಕ್ಯೂಟ್.. ಅದ್ರಲ್ಲೂ ಮೊಗ್ಗಿನ ಮನಸ್ಸು , ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ , ಸಂತೂ ಸ್ಟ್ರೈಟ್ ಫಾರ್ವಡ್ ಸಿನಿಮಾ ದಲ್ಲಿ ಈ ಜೋಡಿಯ ಕೆಮಿಸ್ಟ್ರಿಗೆ ಅಭಿಮಾನಿಗಳು ಫಿದಾ ಆಗಿದ್ರು..
ಈ ಜೋಡಿ ಸುಮಾರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ರು.. 2016ರ ಡಿಸೆಂಬರ್ 9 ರಂದು ಇವರು ವಿವಾಹವಾಗಿದ್ದರು. ಇದೀಗ ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ. 2018 ಡಿಸೆಂಬರ್ ನಲ್ಲಿ ಹೆಣ್ಣು ಮಗು ಜನಿಸಿದ್ದು, ಮುದ್ದು ಮಗಳಿಗೆ ಐರಾ ಎಂದು ಹೆಸರಿಟ್ಟಿದ್ದಾರೆ. ನಂತರ 2019 ರಲ್ಲಿ ಗಂಡು ಮಗು ಜನಿಸಿದ್ದು, ಮಗನಿಗೆ ಯಥರ್ವ್ ಎಂದು ಹೆಸರಿಟ್ಟಿದ್ದಾರೆ.