‘ಅಬ ಜಬ ದಬ’ದಲ್ಲಿ ಬಿಗ್ ಸ್ಕ್ರೀನ್ ಮೇಲೆ ಮತ್ತೆ ಶಂಕರ್ ನಾಗ್ ದರ್ಶನ ..!
ಎರಡು ವರ್ಷದ ಹಿಂದೆ, ಕನ್ನಡ ಗೊತ್ತಿಲ್ಲದವರಿಗೆ ಕನ್ನಡ ಕಲಿಸೋದಕ್ಕೆ ‘ ಕನ್ನಡ್ ಗೊತ್ತಿಲ’ ಸಿನಿಮಾ ಮಾಡಿದ್ದ ನಿರ್ದೇಶಕ ಮಯೂರ ರಾಘವೇಂದ್ರ ಅವರು ಈಗ ‘ಅಬ ಜಬ ದಬ’ದ ಮೂಲಕ 31 ವರ್ಷಗಳ ನಂತರ ಮತ್ತೆ ಕರಾಟೆ ಕಿಂಗ್ ಶಂಕರ್ ನಾಗ್ ಅವರನ್ನ ಬಿಗ್ ಸ್ಕ್ರೀನ್ ಮೇಲೆ ತೋರಿಸೋದಕ್ಕೆ ಹೊರಟಿದ್ದಾರೆ.. ಆದ್ರೆ ಅದು ಹೇಗೆ ಅನ್ನೋ ಕ್ಯೂರಿಯಾಸಿಟಿಯನ್ನ ಮಾತ್ರ ಹಾಗೆಯೇ ಉಳಿಸಿದ್ದಾರೆ..
ಹೌದು.. ಮಯೂರ ರಾಘವೇಂದ್ರ ಅವರು ಮಾಡುತ್ತಿರುವ ಈ ಹೊಸ ಸಿನಿಮಾದ ಹೆಸರೇ ‘ಅಬ ಜಬ ದಬ’. ಸದ್ಯ ಮಂತ್ರಾಲಯದ ರಾಯರ ಸಾನಿಧ್ಯದಲ್ಲಿ ಈ ಶೀರ್ಷಿಕೆಯನ್ನು ಬಿಡುಗಡೆ ಮಾಡಿದ್ದಾರೆ. ‘ಅಬ ಜನ ದಬ’ ಸಿನಿಮಾ ಟೈಟಲ್ ಜೊತೆ ಶಂಕರ್ ನಾಗ್ ಅವರ ಹೆಸರು ಕೂಡ ಇದೆ.. ಇದು ಕುತೂಹಲಕ್ಕೆ ಕಾರಣವಾಗಿದೆ.. ಟೈಟಲೇ ನೋಡಿದ್ರೆ ಇದೊಂದು ಪಕ್ಕಾ ಕಾಮಿಡಿ ಸಿನಿಮಾ ಅನ್ನೋದು ಗೊತ್ತಾಗುತ್ತೆ… ಜೊತೆಗೆ ಸಿನಿಮಾದಲ್ಲಿ ಕೊಂಚ ಫ್ಯಾಂಟಸಿ ಟಚ್ ಕೂಡ ಇರುತ್ತೆ ಅನ್ನೋದ್ರ ಸುಳಿವನ್ನ ಬಿಟ್ಟುಕೊಟ್ಟಿದ್ದಾರೆ ನಿರ್ದೇಶಕರು..
ಜನವರಿಯಲ್ಲಿ ಸಿನಿಮಾ ಮುಹೂರ್ತ ಮಾಡಿ, ಫೆಬ್ರವರಿಯಲ್ಲಿ ಸಿನಿಮಾದ ಚಿತ್ರೀಕರಣ ಆರಂಭ ಆಗಲಿದೆ. ಈ ಬಗ್ಗೆ ಮಾತನಾಡಿರೋ ನಿರ್ದೇಶಕರು ಎರಡು ವರ್ಷದ ಹಿಂದೆ, ಕನ್ನಡ ಗೊತ್ತಿಲದವರಿಗೆ ಕನ್ನಡ ಕಲಿಸಲು ಹೋಗಿ, ಕನ್ನಡ್ ಗೊತ್ತಿಲ್ಲ ಅಂತ ಬಂದೆವು… ಕನ್ನಡಾನೇ ಮಾತಾಡಿ ಅಂತ ಹೇಳದೆ, ಕನ್ನಡಾನು ಮಾತಾಡಿ ಎಂದು ಹೇಳಿದ ನನಗೆ, ನಿಮ್ಮ ಪ್ರೋತ್ಸಾಹ ಹಾಗೂ ಆಶೀರ್ವಾದದಿಂದ ಯಶಸ್ವಿಗೊಳಿಸಿದಿರಿ… ಇಂದು ನಿಮ್ಮ ಮುಂದೆ ಒಂದು ಹೊಸ ವಿಷಯದೊಂದಿಗೆ ನಾನು ಹಾಗೂ ನನ್ನ ತಂಡ ಬಂದಿದ್ದೇವೆ.. ಒಂದು ಹೊಸ ಚಿತ್ರ, ಹೊಸ ಪ್ರಯತ್ನ..
ಸಿನಿಮಾವನ್ನ ಹೊಸ ನಿರ್ಮಾಪಕರು ಅನಂತ ಕೃಷ್ಣ ಅವರ “ಎಸ್ ರಾಮ್ ಪ್ರೊಡ್ಯೂಕ್ಷನ್ಸ್” ಬ್ಯಾನರ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.. ನಿಮ್ಮಲ್ಲಿ ಒಂದು ನಗು ಮೂಡಿಸಲು ನಮ್ಮ ತಂಡದ ಸೃಜನಶೀಲ, ಕ್ರಿಯಾತ್ಮಕ ತಲೆಯವರು ಸೇರಿ ನಿಮ್ಮ ಮುಂದೆ ಒಂದು ಹೊಸ ಪ್ರಯತ್ನ ಎಂದಿದ್ದಾರೆ..