‘ಮಗಳು ಜಾನಕಿ’ಗೆ ಮಹಾ ಅದೃಷ್ಟ : ಶಿವಣ್ಣಗೆ ನಾಯಕಿಯಾದ ಗಾನವಿ..!
ಕಿರುತೆರೆ ತಾರೆಯರು ಸಿನಿಮಾರಂಗಕ್ಕೂ ಎಂಟ್ರಿಕೊಟ್ಟು ಮಿಂಚಿದ್ದಾರೆ.. ಮಿಂಚುತ್ತಿದ್ದಾರೆ.. ಹಾಗಂತ ಸಿನಿಮಾ ಜಗತ್ತಿಗೆ ಎಂಟ್ರಿಯಾದ್ರೂ ಆರಂಭದಲ್ಲೇ ದೊಡ್ಡ ದೊಡ್ಡ ನಟರ ಜೊತೆಗೆ ನಟನೆಯ ಅದೃಷ್ಟ ಸಿಗೋದು ಕೆಲವರಿಗೆ ಮಾತ್ರವೇ.. ಅಂತವರ ಪೈಕಿ ರಚಿತಾ ರಾಮ್ ಇರಬಹುದು, ಜೊತೆಜೊತೆಯಲ್ಲಿ ನಟಿ ಮೇಘನಾ ಶೆಟ್ಟಿ ಕೂಡ ಸೇರಿದ್ದಾರೆ..
ಈಗ ಕಿರುತೆರೆಯ ಮತ್ತೊಬ್ಬ ನಟಿಗೆ ದೊಡ್ಡ ಅದೃಷ್ಟ ಖುಲಾಯಿಸಿದೇ ಮೊದಲ ಸಿನಿಮಾದಲ್ಲೇ ರಿಶಬ್ ಶೆಟ್ಟಿಯ ಹೀರೋ ಸಿನಿಮಾದಲ್ಲಿ ಮಿಂಚಿದ್ದ ನಟಿ ಈಗ ಚಂದವನದ ಸ್ಟಾರ್ ನಟ ಹ್ಯಾಟ್ರಿಕ್ ಹೀರೋ ಶಿವಣ್ಣನಿಗೆ ನಾಯಕಿಯಾಗೋ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ.. ಅಂದ್ಹಾಗೆ ಆ ನಟಿ ಮತ್ಯಾರೂ ಅಲ್ಲ ಕನ್ನಡದ ಟಿಎನ್ ಸೀತಾರಾಮ್ ನಿರ್ದೇಶನದ ‘ಮಗಳು ಜಾನಕಿ’ ಧಾರಾವಾಹಿಯ ನಟಿ ಗಾನವಿ ಲಕ್ಷ್ಮಣ್.. ಶಿವರಾಜ್ ಕುಮಾರ್ ನಟನೆ , ಎ ಹರ್ಷ ನಿರ್ದೇಶನದ ಬಹುನಿರೀಕ್ಷೆಯಯ ಚಿತ್ರ ವೇದದಲ್ಲಿ ಗಾನವಿ ನಟಟಿಸಲಿದ್ದಾರೆ..