2021ನೇ ಸಾಲಿನಲ್ಲಿ – ವಿಶ್ವದ ನಂ 1 ನಟ ಪ್ರಭಾಸ್
ಹೈದ್ರಾಬಾದ್ : ಬಾಹುಬಲಿ ಸಿನಿಮಾ ಮೂಲಕ ಭಾರತದ ಬಿಗ್ ಸ್ಟಾರ್ ಆಗಿ ಗುರುತಿಸಿಕೊಂಡಿರುವ ಪ್ರಭಾಸ್ ಈಗ ಸಂಭಾವನೆ ಇರಬಹುದು , ಸಿನಿಮಾ ಬೇಡಿಕೆ ಇರಬಹುದು , ಟಾಪ್ ನಟನ ಸ್ಥಾನದಲ್ಲೇ ಇರಬಹುದು , ಬಾಲಿವುಡ್ ನ ದೊಡ್ಡ ದೊಡ್ಡ ಕಲಿಗಳನ್ನ ಹಿಂದಿಟ್ಟಿದ್ದಾರೆ.. ಸಲ್ಮಾನ್ ಖಾನ್ , ಅಕ್ಷಯ್ ಕುಮಾರ್ ಅವರಿಗಿಂತಲೂ ಹೆಚ್ಚು ಸಂಭಾವನೆ ಪಡೆಯುತ್ತಿರುವ ಪ್ರಭಾಸ್ ಅವರ ವರ್ಚಸ್ಸು ಎಲ್ರಿಗೂ ಗೊತ್ತಿದೆ..
ಇದೀಗ 2021ನೇ ಸಾಲಿನ ದಕ್ಷಿಣ ಏಷ್ಯಾದ ನಟರಲ್ಲಿ ಪ್ರಭಾಸ್ ಅವರು ವಿಶ್ವಕ್ಕೆ ನಂ 1 ಪಟ್ಟ ಪಡೆದಿದ್ದಾರೆ.. ಪ್ರಭಾಸ್ ಸಾಲು ಸಾಲು ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.. ಈ ಪೈಕಿ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಕೂಡ ಒಂದು.. ಹೀಗಿರೋವಾಗ ಬಾಲಿವುಡ್ ಸ್ಟಾರ್ ನಟರನ್ನೂ ಕೂಡ ಹಿಂದಿಕ್ಕಿರುವ ಪ್ರಭಾಸ್ 2021ನೇ ಸಾಲಿನಲ್ಲಿ ದಕ್ಷಿಣ ಏಷ್ಯಾದ ನಟರಲ್ಲಿ ವಿಶ್ವದ ನಂ1 ಪಟ್ಟಕ್ಕೇರಿದ್ದಾರೆ ಎಂದು ಬ್ರಿಟನ್‌ನ ನಿಯತಕಾಲಿಕೆಯೊಂದು ವರದಿ ಮಾಡಿದೆ. ಹೌದು ದಕ್ಷಿಣ ಏಷ್ಯಾದ ಸೆಲೆಬ್ರೆಟಿ ಪ್ರಭಾಸ್ ವಿಶ್ವದ ನಂ 1 ನಟನೆಂದು ತನ್ನ ಪತ್ರಿಕೆಯಲ್ಲಿ ವರದಿ ಮಾಡಿದೆ.