“ಬಾಹುಬಲಿ 2” ರೆಕಾರ್ಡ್ ನೇ ಪೀಸ್ ಪೀಸ್ ಮಾಡಿದ ‘RRR’..!
ಭಾರತದಲ್ಲಿ ಸೌತ್ ಇಂಡಿಯಾ ಸಿನಿಮಾರಂಗದ ತಾಕತ್ತನ್ನ ಪತೋರಿಸಿದ್ದ ಸಿನಿಮಾ ‘ಬಾಹುಬಲಿ’.. ಬಾಲಿವುಡ್ ಸೌತ್ ಇಂಡಿಯಾ ಮುಂದೆ ಏನೂ ಇಲ್ಲ ಅನ್ನೋದರ ಝಲಕ್ ನೀಡಿದ್ದ ಬಾಹುಬಲಿಯಲ್ಲಿ ರಾಜಮೌಳಿ ಸ್ಕ್ರೀನ್ ಪ್ಲೇ ಎಂಥಹದ್ದು ಅನ್ನೋದಕ್ಕೆ ಸಾಕ್ಷಿ ಸಿಕ್ಕಿತ್ತು.. ರಾಜಮೌಳಿ , ಪ್ರಭಾಸ್ ಕಾಂಬಿನೇಷನ್ ನ ಸಿನಿಮಾ ಸೂಪರ್ ಹಿಟ್ ಆಗಿತ್ತು.. ಇಂಡಸ್ಟ್ರಿಯ ರೆಕಾರ್ಡ್ ಗಳನ್ನ ಛಿದ್ರ ಛಿದ್ರಗೊಳಿಸಿತ್ತು.. ಎರೆಡು ಸರಣಿಗಳಲ್ಲಿ ಬಾಹುಬಲಿ ಸಿನಿಮಾ ಮೂಡಿಬಂದಿತ್ತು..
ಇದೀಗ ಬಾಹುಬಲಿಯ ನಂತರ ರಾಜಮೌಳಿ ನಿರ್ದೇಶನದ ಮತ್ತೊಂದು ಬಿಗ್ ಬಜೆಟ್ ಹೈ ವೋಲ್ಟೇಜ್ ಸಿನಿಮಾ ‘RRR’ ತೆಗೆಗೆ ಬರಲು ಸಜ್ಜಾಗ್ತಿದೆ.. ಸಿನಿಮಾ ತಂಡ ಅಬ್ಬರದ ಪ್ರಚಾರ ಶುರು ಮಾಡಿದೆ.. ಈ ನಡುವೆ ಅದ್ಧೂರಿಯಾಗಿ ಸಿನಿಮಾದ ಟ್ರೇಲರ್ ರಿಲೀಸ್ ಮಾಡಲಾಗಿದೆ.. ಈ ಟ್ರೇಲರ್ ಯೂಟ್ಯೂಬ್ ಗೆ ಬೆಂಕಿ ಹಚ್ಚಿದೆ.. ಮಿಲಿಯನ್ ಗಟ್ಟಲೆ ವೀವ್ಸ್ ಪಡೆದಿರುವ ಈ ಸಿನಿಮಾದ ಟ್ರೇಲರ್ ಬಾಹುಬಲಿ 2 ನ ರೆಕಾರ್ಡ್ ಮುರಿದಿದೆ..
RRR 3:15 ನಿಮಿಷದ ಟ್ರೇಲರ್ ಮೈನವಿರೇಳಿಸುವಂತಿದೆ. RRR ಟ್ರೇಲರ್ ಮಸ್ತಾಗಿದೆ. ಈ ಟ್ರೇಲರ್ ಎಲ್ಲಾ ರೆಕಾರ್ಡ್ ಗಳನ್ನ ಬ್ರೇಕ್ ಮಾಡಿದೆ.. ಬಾಹುಬಲಿ 2 ಹಾಗೂ ಪುಷ್ಪ ಟ್ರೇಲರ್ ನ ರೆಕಾರ್ಡ್ ಕೂಡ RRR ಚಿತ್ರ ಬ್ರೇಕ್ ಮಾಡಿಹಾಕಿದೆ..
RRR ಅತಿ ವೇಗವಾಗಿ 5 ಲಕ್ಷ ಲೈಕ್ಸ್ ಪಡೆದ ಮೊದಲ ಟ್ರೇಲರ್ ಆಗಿ ದಾಖಲೆ ಮಾಡಿದೆ. ತೆಲುಗಿನಲ್ಲಿ ಅತಿ ವೇಗವಾಗಿ 3ಲಕ್ಷ ಲೈಕ್ಸ್ ಪಡೆದ ಟ್ರೇಲರ್ RRR ಆಗಿದೆ..