ತಮಿಳಿನ ಸ್ಟಾರ್ ನಟ ಚಿಯಾನ್ ವಿಕ್ರಮ್ ಗೆ ಕೊರೊನಾ ಪಾಸಿಟಿವ್
ಚೆನ್ನೈ : ದೇಶದಲ್ಲಿ ಮತ್ತೆ ಕೋವಿಡ್ ಅದ್ರಲ್ಲೂ ಒಮಿಕ್ರಾನ್ ಆತಂಕ ಹೆಚ್ಚಾಗ್ತಿದೆ.. ಸ್ಟಾರ್ ಗಳಿಗೂ ಕೊರೊನಾ ವಕ್ಕರಿಸಿದೆ.. ಕಮಲ್ ಹಾಸನ್ , ಕರೀನಾ ಕಪೂರ್ ಅರ್ಜುನ್ ಸರ್ಜಾಗೂ ಈಗಾಗಲೇ ಕೋವಿಡ್ ದೃಢಪಟ್ಟಿದ್ದು , ನಡುವೆ ತಮಿಳಿನ ಸ್ಟಾರ್ ನಟ ಚಿಯಾನ್ ವಿಕ್ರಮ್ ಅವರಿಗೆ ಕೊರೊನಾ ಪಾಸಿಟಿವ್ ಇರೋದು ದೃಢಪಟ್ಟಿದೆ..
ಕೊರೊನಾ ಲಕ್ಷಣಗಳು ಕಂಡು ಬಂದಿದ್ದು, ವಿಕ್ರಂ ಪರೀಕ್ಷೆ ಮಾಡಿಸಿದ್ದಾರೆ. ಆಗ ಅವರಿಗೆ ಕೊರೊನಾ ಇರುವುದು ಪತ್ತೆ ಆಗಿದೆ. ಸದ್ಯ ವಿಕ್ರಂ ಐಸೋಲೇಷನ್ನಲ್ಲಿ ಇದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಚೆನ್ನೈನ ಬೆಸ್ತನ್ ನಗರದಲ್ಲಿ ಇರುವ ಅವರ ಮನೆಯಲ್ಲಿಯೇ ವಿಕ್ರಂ ಐಸೋಲೇಟ್ ಆಗಿದ್ದಾರೆ.
ಸದ್ಯ ನಟ ವಿಕ್ರಮ್ ನಟಿಸಿರುವ ಖೋಬ್ರಾ ಸಿನಿಮಾ ರಿಲೀಸ್ ಆಗಬೇಕಿದೆ.. ಮುಂದೆ ಅವರು ರಾಜಮೌಳಿ ಅವರ ಸಿನಿಮಾದಲ್ಲಿ ವಿಲ್ಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ ಅನ್ನೋ ಟಾಕ್ ಟಾಲಿವುಡ್ ಅಂಗಳದಲ್ಲಿ ತುಸು ಜೋರಾಗಿಯೇ ಸೌಂಡ್ ಮಾಡ್ತಿದೆ..