ಅರ್ಚಕರ ಆಕ್ರೋಶಕ್ಕೆ ಗುರಿಯಾದ ಸನ್ನಿ : ಅಸಭ್ಯವಾಗಿ ನೃತ್ಯ..??
ಮುಂಬೈ : ಬಾಲಿವುಡ್ ನಟಿ ಸನ್ನಿ ಲಿಯೋನ್ ಪರಿಚಯವಿಲ್ಲದವರು ಬಹುಶಃ ಇಲ್ಲ.. ಅದ್ರಲ್ಲೂ ಸನ್ನಿ ಐಟಂ ಸಾಂಗ್ ಗಳಿಗೆ ಮೈ ಬಳಕಿಸುವ ಮೂಲಕವೇ ಹೆಚ್ಚು ಫೇಮಸ್.. ಕನ್ನಡದಲ್ಲೂ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ.. ಇತ್ತೀಚೆಗೆ ಸನ್ನಿ ಲಿಯೋನ್ ‘ಮಧುಬನ್ ಮೇ ರಾಧಿಕಾ ನಾಚೆ’ ಎಂಬ ಹಾಡಿನಲ್ಲಿ ಬಹಳ ಮಾಧನವಾಗಿ ಮೈ ಬಳುಕಿಸಿದ್ದಾರೆ.. ಆದ್ರೆ ಇದೇ ಮಥುರಾ ಅರ್ಚರಕರ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು.. ಲಿಯೋನ್ ಅಸಭ್ಯ ರೀತಿಯಲ್ಲಿ ನೃತ್ಯ ಮಾಡಿದ್ದಾರೆ ಎಂದು ಆರೋಪಿಸಿ ಅರ್ಚಕರು ಆಕ್ರೋಶಗೊಂಡಿದ್ದಾರೆ.. ಈ ಹಾಡು ಕೃಷ್ಣ ಹಾಗೂ ರಾಧೆಯ ಪ್ರೀತಿಗೆ ಸಂಬಂಧಿಸಿದ್ದಾಗಿದ್ದು, ಸನ್ನಿ ಲಿಯೋನ್ ಇದಕ್ಕೆ ಆಕ್ಷೇಪಾರ್ಹ ರೀತಿಯಲ್ಲಿ ನೃತ್ಯ ಮಾಡಿರುವುದು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಹಾಡಿಗೆ ಹಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ..
ಅಲ್ಲದೇ ಸನ್ನಿ ಲಿಯೋನ್ ಅವರ ಈ ವೀಡಿಯೋ ಆಲ್ಬಮ್ ನಿಷೇಧಿಸಬೇಕು ಹಾಗೂ ಸರ್ಕಾರ ಆಕೆಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದು, ಕೋರ್ಟ್ ಮೊರೆ ಹೋಗುವ ಎಚ್ಚರಿಕೆಯನ್ನೂ ನೀಡಿದ್ದಾರೆ.. ಅಲ್ಲದೇ ನೃತ್ಯದ ಭಾಗವಿರುವ ವೀಡಿಯೋವನ್ನು ಹಿಂಪಡೆದು ಸಾರ್ವಜನಿಕವಾಗಿ ಕ್ಷಮೆ ಕೋರಬೇಕು.. ಅಲ್ಲಿಯವರೆಗೂ ಭಾರತದಲ್ಲಿರಲು ಆಕೆಗೆ ಅವಕಾಶ ನೀಡಬಾರದು ಎಂದು ಬೃಂದಾವನದ ಸಂತ್ ನವಲ್ ಗಿರಿ ಮಹಾರಾಜ್ ಆಗ್ರಹಿಸಿದ್ದಾರೆ. ಡಿಸೆಂಬರ್ 22ರಂದು ಮಧುಬನ್ ಟೈಟಲ್ ನ ಮ್ಯೂಸಿಕ್ ವೀಡಿಯೋವನ್ನು ಬಿಡುಗಡೆ ಮಾಡಲಾಗಿತ್ತು.. ಕನಿಕ ಕಪೂರ್ ಹಾಗೂ ಅರಿಂದಮ್ ಚಕ್ರವರ್ತಿ ಧ್ವನಿಯಲ್ಲಿ ಮೂಡಿಬಂದಿದ್ದ ಹಾಡಿಗೆ ಸನ್ನಿ ಲಿಯೋನ್ ಹೆಜ್ಜೆ ಹಾಕಿದ್ದಾರೆ.