ಚೀಪ್ ನಟಿ ಎಂದವನಿಗೆ ಜಬರ್ ದಸ್ತ್ ಉತ್ತರ ಕೊಟ್ಟ ಲಾವಣ್ಯ..!!!
ಯಾವುದೇ ಸಿನಿಮಾರಂಗದ ನಟಿಯರು ಇರಲಿ , ಅವರಿಗೆ ಎಷ್ಟು ಅಭಿಮಾನಿಗಳಿರುತ್ತಾರೋ , ಅಷ್ಟೇ ಟ್ರೋಲ್ ಮಾಡುವವರು ಇರುತ್ತಾರೆ.. ಅಂತೆಯೇ ಇತ್ತೀಚೆಗೆ ತೆಲುಗಿನ ನಟಿ ಲಾವಣ್ಯ ತ್ರಿಪಾಠಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ.. ಜೊತೆಗೆ ಟ್ರೋಲ್ ಕೂಡ ಆಗ್ತಿದ್ದಾರೆ.. ಇದಕ್ಕೆ ನಾನಾ ಕಾರಣಗಳಿವೆ.. ಪ್ರಮುಖವಾಗಿ ತೆಲುಗು ನಟ ವರುಣ್ ತೇಜ್ ಜೊತೆಗೆ ಲಾವಣ್ಯ ಮದುವೆ ಆಗ್ತಾರೆ ಎನ್ನುವ ವಿಚಾರ ಭಾರೀ ಸದ್ದು ಮಾಡ್ತಿದೆ.
ಹಾಗಂತ ಟ್ರೋಲ್ ಗಳನ್ನ ನೋಡಿಕೊಂಡು ಲಾವಣ್ಯ ಅವರು ಸಹ ಸುಮ್ನೆ ಕೂತಿಲ್ಲ.. ಟ್ರೋಲ್ ಗಳಿಗೆ ತಕ್ಕ ಉತ್ತರ ನೀಡಿದ್ದಾರೆ. ನಟಿ ಲಾವಣ್ಯಗೆ ಓರ್ವ ನೆಟ್ಟಿಗ ಚೀಪ್ ನಟಿ ಎಂದು ಕಮೆಂಟ್ ಮಾಡಿದ್ದ.. ಅಂತಹ ನೆಟ್ಟಿಗನ ಕಮೆಂಟ್ ಗೆ ಮುಟ್ಟಿನೋಡಿಕೊಳ್ಳುವಂತೆ ಉತ್ತರ ನೀಡಿದ್ದಾರೆ ಲಾವಣ್ಯ…
ಅಂದ್ಹಾಗೆ ಕೆಲ ದಿನಗಳ ಹಿಂದೆ ಲಾವಣ್ಯ ಹೆಸರಿನ ತಮಿಳು ನಾಡಿನ ಹುಡುಗಿಯು ಆಕೆಯನ್ನ ಕ್ರೈಸ್ತ ಧರ್ಮಕ್ಕೆ ಮತಾಂತರಕ್ಕೆ ಹಿಂಸಿಸುತ್ತಿದ್ದ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಳು.. ಈ ವಿಚಾರ ನೆಟ್ಟಿಗರ ಕಣ್ಣು ಕೆಂಪಾಗಿಸಿತ್ತು.. ಇದೇ ಸುದ್ದಿ ಟ್ವಿಟ್ಟರ್ ನಲ್ಲಿ ವೈರಲ್ ಆಗ್ತಿತ್ತು.. ಆದ್ರೆ ಹ್ಯಾಶ್ ಟ್ಯಾಗ್ ಲಾವಣ್ಯ ಎಂದು ಸಿಕ್ಕಾಪಟ್ಟೆ ವೈರಲ್ ಆಗ್ತಿತ್ತು.. ಮತ್ತೊಂದೆಡೆ ಲಾವಣ್ಯ ತ್ರಿಪಾಠಿ ಹೆಸರು ಬಳಸಿ, ಸಾಕಷ್ಟು ಮಂದಿ ಈ ವಿಚಾರವಾಗಿ ಟ್ವೀಟ್ ಗಳನ್ನು ಮಾಡಿದ್ದಾರೆ.
ಆದ್ರೆ ಇದಕ್ಕೆ ನೆಟ್ಟಿಗನೋರ್ವ ಆ ಚೀಪ್ ನಟಿಯ ಹೆಸರು ಬಳಸಬೇಡಿ ಎಂದು ಕಮೆಂಟ್ ಮಾಡಿದ್ದ.. ಹೌದು.. ದಯವಿಟ್ಟು #ಲಾವಣ್ಯತ್ರಿಪಾಠಿ ಬಳಸಬೇಡಿ. ಆಕೆ ಒಬ್ಬ ನಟಿ, ಲಾವಣ್ಯ ತಮಿಳುನಾಡಿನ ಸಾಮಾನ್ಯ ದಲಿತ ಹುಡುಗಿ. ಆಕೆ ಧರ್ಮಕ್ಕಾಗಿ ಪರಮ ತ್ಯಾಗ ಮಾಡಿದ್ದಾಳೆ, ಆಕೆಯನ್ನು ಈ ರೀತಿ ಚೀಪ್ ನಟಿಯರೊಂದಿಗೆ ಹೋಲಿಸಬೇಡಿ ಎಂದಿದ್ದಾನೆ. ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ರೀತಿ ಹೇಳಿದವನಿಗೆ ಉತ್ತರಿಸಿದ ಲಾವಣ್ಯ ತ್ರಿಪಾಠಿ , ನಿಮ್ಮಂತಹ ಗಂಡಸರು, ಏನಾದ್ರೂ ಅನಾಹುತವಾದಾಗ ಹೆಣ್ಣನ್ನು ಗೌರವಿಸೋಕೆ ಶುರು ಮಾಡ್ತಾರೆ, ಅದಕ್ಕೂ ಮುನ್ನ ಚೀಪ್ ಅಂತಾರೆ. ಎಲ್ಲರನ್ನು ಗೌರವಿಸೋಕೆ ಕಲಿ. ನಡೆದಿರುವುದು ಅತ್ಯಂತ ದುರದೃಷ್ಟಕರ ಘಟನೆ, ಆದರೆ ಇದೇ ನಮ್ಮ ಸಮಾಜದ ವಾಸ್ತವ ಎಂದು ಆಕ್ರೋಶ ಹೊರಹಾಕಿದ್ದಾರೆ..