Prabhu Deva : ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಮತ್ತೆ ಕನ್ನಡಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಕನ್ನಡದ ಚಿತ್ರರಂಗದ ಹೆಸರಾಂತ ಸಿನಿಮಾ ನಿರ್ಮಾಪಕ ಸಂದೇಶ ನಾಗರಾಜ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಟ ನಿರ್ದೇಶಕ ನೃತ್ಯ ಸಂಯೋಜಕ ಪ್ರಭುದೇವ ಕನ್ನಡದಲ್ಲಿ ನಿಂತು Pan Indian Movie ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಕನ್ನಡ ತಮಿಳು ತೆಲುಗು ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ.
Shivanna Warns R Chandru : ಕನ್ನಡದವರಿಗೆ ಚಾನ್ಸ್ ಕೊಡ್ರೀ… ಶಿವಣ್ಣ ವಾರ್ನಿಂಗ್…
ಸಂದೇಶ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ಹಲವು ಭಾಷೆಗಳ ಕಲಾವಿದರು ನಟಿಸಲಿದ್ದಾರೆ.
ಪ್ರಭುದೇವ ಮೂಲತಃ ಕನ್ನಡದವರೇ ಆದರೂ ತಮಿಳು ಮತ್ತು ಹಿಂದಿ ಸ್ಟಾರ್ ನಟ ನಿರ್ದೇಶಕ ಕೋರಿಯೋಗ್ರಾಫರ್ ಆಗಿ ಗುರುತಿಸಿಕೊಂಡಿದ್ದಾರೆ. ಬಹಳ ವರ್ಷಗಳ ಬಳಿಕ ಮತ್ತೆ ಕನ್ನಡ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಅಭಿಮಾನಿಗಳು ಈ ಸುದ್ದಿ ಕೇಳಿ ಕುತೂಹಲಗೊಂಡಿದ್ದಾರೆ. ಯಾವ ಪಾತ್ರ ಯಾವ ಮಾದರಿಯಲ್ಲಿ ಮೂಡಿಬರಲಿದೆ ಎಂದು ತಿಳಿದುಕೊಳ್ಳಲು ಕುತೂಹಲಿಗಳಾಗಿದ್ದಾರೆ.
ಆದಷ್ಟು ಬೇಗ ಸಿನಿಮಾದ ಟೈಟಲ್ ಅನೌನ್ಸ್ ಆಗಲಿದೆ. ಸೂಕ್ತ ಟೈಟಲ್ ಗಾಗಿ ಚಿತ್ರ ತಂಡ ಹುಡುಕಾಟ ನಡೆಸಿದೆ. ನಟ ಪ್ರಭುದೇವ ಪೂರ್ಣ ಪ್ರಮಾಣದ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಇನ್ನುಳಿದು Darling Krishna ಡಾರ್ಲಿಂಗ್ ಕೃಷ್ಣ ನಟನೆಯ Lucky Man ಲಕ್ಕಿಮ್ಯಾನ್ ಚಿತ್ರದಲ್ಲಿ Puneeth Rajkumar ಪುನಿತ್ ರಾಜ್ ಕುಮಾರ್ ಜೊತೆಗೆ ಪ್ರಭುದೇವ ಹೆಜ್ಜೆ ಹಾಕಿದ್ದಾರೆ. ಪುನೀತ್ ಮತ್ತು ಪ್ರಭು ಒಟ್ಟಿಗೆ ಡ್ಯಾನ್ ನಂಬರ್ ಸಾಂಗ್ ಗೆ ಸ್ಟೆಪ್ ಹಾಕಿರುವುದು ಅಭಿನಮಾನಿಗಳ ಕಣ್ಣಿಗೆ ಹಬ್ಬವನ್ನುಂಟು ಮಾಡಲಿದೆ.
‘ಜೇಮ್ಸ್’ಗೆ ರಾಘಣ್ಣ ಡಬ್ಬಿಂಗ್…
ಪ್ರಭುದೇವ ಮೊದಲ ಭಾರಿಗೆ ನಟನಾಗಿ ಕಾಣಿಸಿಕೊಂಡಿದ್ದು ಎಚ್ 2 ಓ ಚಿತ್ರದ ಮೂಲಕ ಉಪೇಂದ್ರ ಹೀರೋ ಆಗಿ ಕಾಣಿಸಿಕೊಂಡಿದ್ದ ಚಿತ್ರಕ್ಕೆ ಮತ್ತೋರ್ವ ಹೀರೋ ಆಗಿ ಪ್ರಭುದೇವ ಕಾಣಿಸಿಕೊಂಡಿದ್ದರು. ಇದಾದ ನಂತರ 2002 ರಲ್ಲಿ ಸಹೋದರಾದ ರಾಜು ಸುಂದರಂ ಮತ್ತು ನಾಗೇಂದ್ರ ಪ್ರಸಾದ್ ಜೊತೆ 123 ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ತದ ನಂತರ ಬೇರೆ ಭಾಷೆಗಳಲ್ಲೆ ಹೆಚ್ಚಾಗಿ ಗುರುತಿಸಿಕೊ0ಡ ಪ್ರಭುದೇವ ಈಗ ಮತ್ತೆ ಕನ್ನಡಕ್ಕೆ ಮರಳಿದ್ದಾರೆ.