ವಿಜಯ್ ದೇವರಕೊಂಡ ‘ಲೈಗರ್’ ಅಮೇಜಾನ್ ಪ್ರೈಂಗೆ ಸೇಲ್
ಟಾಲಿವುಡ್ ನ ಸೆನ್ಷೇಷನಲ್ ಸ್ಟಾರ್ ವಿಜಯ್ ದೇವರಕೊಂಡ ಪ್ರಸ್ತುತ ಪುರಿ ಜಗನ್ನಾಥ್ ಅವರ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ ಲೈಗರ್ ನಲ್ಲಿ ಬ್ಯುಸಿಯಿದ್ದಾರೆ. ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.. ಸಾಕಷ್ಟು ವಿಚಾರಗಳಿಗೆ ಈ ಸಿನಿಮಾ
ಬಾಲಿವುಡ್ ಸ್ಟಾರ್ ನಿರ್ಮಾಪಕ ಕರಣ್ ಜೋಹರ್ ನಟಿ ಚಾರ್ಮಿ ನಿರ್ಮಾಣ , ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶದ ಸಿನಿಮಾದ ಹೈಪ್ ಹೆಚ್ಚಿಸಿದೆ..
ಈ ಮಧ್ಯೆ ಲೈಗರ್ ಡಿಜಿಟಲ್ ರೈಟ್ಸ್ ದೊಡ್ಡ ಮೊತ್ತ ಸೇಲ್ ಆಗಿದೆ ಎನ್ನಲಾಗಿದೆ. ಹೌದು… ಈ ಸಿನಿಮಾದ ಡಿಜಿಟಲ್ ರೈಟ್ಸ್ ಅಮೆಜಾನ್ಗೆ ಸೇಲ್ ಆಗಿದೆ ಎಂಬ ಚರ್ಚೆ ಬಾಲಿವುಡ್ ನಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡ್ತಿದೆ..
ಅಂದ್ಹಾಗೆ ಅಮೆಜಾನ್ ಪ್ರೈಂ ಸಂಸ್ಥೆ ಬರೋಬ್ಬರಿ 60 ಕೋಟಿ ಕೊಟ್ಟು ಸಿನಿಮಾವನ್ನ ಖರೀದಿ ಮಾಡಿದೆ ಎನ್ನಲಾಗ್ತಿದೆ.. ಇದು ವಿಜಯ್ ದೇವರಕೊಂಡ ವೃತ್ತಿ ಬದುಕಿಗೆ ಹೊಸ ತಿರುವು ಎನ್ನಲಾಗಿದೆ. ತೆಲುಗು , ಕನ್ನಡ , ತಮಿಳು , ಹಿಂದಿ, ಮಲಯಾಳಂನಲ್ಲಿ ಈ ಸಿನಿಮಾ ಬರಲಿದೆ..
ಲೈಗರ್ ಸಿನಿಮಾ ಬಳಿಕ ವಿಜಯ್ ದೇವರಕೊಂಡ ಮತ್ತು ಪುರಿ ಜಗನ್ನಾಥ್ ಮತ್ತೊಂದು ಸಿನಿಮಾದಲ್ಲಿ ಒಂದಾಗುತ್ತಿದ್ದಾರೆ. ಪುರಿ ಜಗನ್ನಾಥ್ ನಿರ್ದೇಶಿಸುತ್ತಿರುವ ಜನ ಗಣ ಮನ ಸಿನಿಮಾದಲ್ಲೂ ದೇವರಕೊಂಡ ಅವರು ನಟಿಸುತ್ತಿದ್ದಾರೆ.
ಅಲ್ಲದೇ ಇದು ಕೂಡ ಫ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಕರಣ್ ಜೋಹರ್ ಹಾಗೂ ಪುರಿ ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೇ ಈ ಸಿನಿಮಾ ಮೂಲಕ ಜಾಹ್ನವಿ ಕಫೂರ್ ಇದೇ ಮೊದಲ ಭಾರಿಗೆ ಟಾಲಿವುಡ್ ಚಿತ್ರರಂಗಕ್ಕೆ ಕಾಲಿಡುತ್ತಿದ್ಧಾರೆ.