ಹೊಸ ದಾಖಲೆ ಬರೆದ ‘ಜೇಮ್ಸ್’ : ಅಪ್ಪುಗೆ ರೆಕಾರ್ಡ ಬ್ರೇಕ್ ಮಾಡಿನೇ ಅಭ್ಯಾಸ…!!!
ನಿನ್ನೆಯಷ್ಟೇ ರಿಲೀಸ್ ಆದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ನ ಟೀಸರ್ ಪವರ್ ಫುಲ್ ಆಗಿಯೇ ಸೌಂಡ್ ಮಾಡಿದೆ.. ಯೂಟ್ಯೂಬ್ ನಲ್ಲಿ ಹೊಸ ದಾಖಲೆ ಬರೆದಿದೆ..
ನನಗೆ ಮೊದಲಿನಿಂದಲೂ ರೆಕಾರ್ಡ್ ಬ್ರೇಕ್ ಮಾಡಿನೇ ಅಭ್ಯಾಸ… ಅಂತ ಶಿವಣ್ಣನ ಧ್ವನಿಯಲ್ಲಿ ಕೇಳಿಬಂದಿದ್ದ ಪವರ್ ಫುಲ್ ಡೈಲಾಗ್ ಜೇಮ್ಸ್ ಸಿನಿಮಾದ ಟೀಸರ್ ನ ಹೈಪ್ ಹೆಚ್ಚಿಸಿತ್ತು.. ಇದೀಗ ಈ ಡೈಲಾಗ್ ನಂತೆಯೇ ಯೂಟ್ಯೂಬ್ ನಲ್ಲಿ ರೆಕಾರ್ಡ ಗಳನ್ನ ಬ್ರೇಕ್ ಮಾಡಿ ಹಸ ದಾಖಲೆ ಬರೆದಿದೆ ಪವರ್ ಸ್ಟಾರ್ ನಟನೆಯ ಜೇಮ್ಸ್ ಸಿನಿಮಾದ ಟೀಸರ್..
ಮಾರ್ಚ್ 17 ರಂದು ರಿಲೀಸ್ ಆಗಿರೋ ಈ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬರುತ್ತಿದೆ… ಜೇಮ್ಸ್ ನ ಟೀಸರ್ ನಲ್ಲಿ ಅಪ್ಪು ಪವರ್ ಫುಲ್ ಲುಕ್ ಅಭಿಮಾನಿಗಳ ಧಡ್ಕನ್ ಹೆಚ್ಚಿಸುತ್ತೆ.. ಆಕ್ಷನ್ , ಥ್ರಿಲ್ಲರ್ ಪವರ್ ಪ್ಯಾಕ್ಡ್ ಟೀಸರ್ ಈಗ ಯೂಟ್ಯೂಬ್ ನಲ್ಲಿ ಹೊಸ ದಾಖಲೆ ಬರೆದಿದೆ.. ಟೀಸರ್ ನೋಡಿ ಅಭಿಮಾನಿಗಳು ಖುಷ್ಆಗಿರೋದು ಒಂದೆಡೆಯಾದ್ರೆ ಮತ್ತೊಂದೆಡೆ ಅಪ್ಪು ನೆನೆದು ಭಾವುಕರೂ ಆಗಿದ್ದಾರೆ.. ಮೈ ಝುಂ ಎನಿಸುವ ವಿಷ್ಯುಯಾಲಿಟಿ , ಕ್ವಾಲಿಟಿ , ಮಾಸ್ ಸೀನ್ಸ್ , ಸಖತ್ ಡೈಲಾಗ್ಸ್… ಸಿನಿಮಾವನ್ನ ಬೇರೆಯದ್ದೇ ಲೆವೆಲ್ ಗೆ ಕೊಂಡೊಯ್ದಿದೆ..
ಯೂಟ್ಯೂಬ್ ನಲ್ಲಿ ರಿಲೀಸ್ ಆದ ಒಂದೇ ಗಂಟೆಯೊಳಗೆ ಟ್ರೆಂಡಿಂಗ್ ಲಿಸ್ಟ್ ಸೇರಿದ್ದ ಸಿನಿಮಾದ ಟೀಸರ್ 60 ನಿಮಿಷದೊಳಗೆ 1ಮಿಲಿಯನ್ ವೀವ್ಸ್ ಮತ್ತು 180 ಸಾವಿರ ಲೈಕ್ಸ್ ಪಡೆದುಕೊಂಡು ಹೊಸ ದಾಖಲೆ ಬರೆದಿದೆ..