Happy Birthday Darshan : ದರ್ಶನ್ ಸ್ಯಾಂಡಲ್ ವುಡ್ ಪಾಲಿನ ಡಿ ಬಾಸ್ ಆಗಿದ್ದು ಹೇಗೆ…???
ಅಭಿಮಾನಿಗಳ ಪಾಲಿನ ದಾಸ… ಸ್ಯಾಂಡಲ್ ವುಡ್ ನ ಡಿ ಬಾಸ್… ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ… ಚಂದನವನದ ‘ಒಡೆಯ’ ಇಂದು 45ನೇ ವಸಂತಕ್ಕೆ ಕಾಲಿಟ್ಟಿದ್ದಾರೆ…
‘ಯಜಮಾನ’ನ ಹುಟ್ಟುಹಬ್ಬವನ್ನು ದಚ್ಚು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಹಬ್ಬದಂತೆ ಸೆಲಬ್ರೇಟ್ ಮಾಡ್ತಿದ್ದಾರೆ… ಸಾಮಾಜಿಕ ಜಾಲತಾಣಗಳಲ್ಲಿ ‘ ಪ್ರಿನ್ಸ್’ ಗೆ ಅಭಿಮಾನಿಗಳು , ಸಿನಿ ತಾರೆಯರು , ಆಪ್ತರು , ಇತರರು ಶುಭಾಶಯಗಳ ಮಹಾಪೂರವನ್ನ ಹರಿಸುತ್ತಿದ್ದಾರೆ…
ಪ್ರತಿ ವರ್ಷ ‘ಬಾಸ್’ ಬರ್ತ್ ಡೇ ಬಂತಂದ್ರೆ ಸಾಕು ದಾಸನ ಫ್ಯಾನ್ಸ್ ಮಧ್ಯರಾತ್ರಿಯಿಂದಲೇ ದರ್ಶನ ಮನೆ ಮುಂದೆ ಜಮಾಯಿಸಿಬಿಡ್ತಿದ್ದರು… ಅದ್ಧೂರಿಯಾಗಿ ಕೇಕ್ ಕಟ್ ಮಾಡಿ ಸೆಲೆಬ್ರೇಟ್ ಮಾಡ್ತಿದ್ದರು… ಆದ್ರೆ ಕೋವಿಡ್ ಕಾರಣದಿಂದಾಗಿ ಕಳೆದೊಂಡೆರೆಡು ವರ್ಷಗಳಿಂದ ‘ಕೆಂಚ’ ಅಭಿಮಾನಿಗಳ ಜೊತೆಗೆ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಳ್ಳಲು ಸಾಧ್ಯವಾಗ್ತಿಲ್ಲ…
ಆದ್ರೆ ವಿಡಿಯೋ ಮೂಲಕ ‘ಮಿಸ್ಟರ್ ಐರಾವತ’ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ…
ಪ್ರೀತಿಯ ಅಭಿಮಾನಿಗಳಲ್ಲಿ ನಿಮ್ಮ ದಾಸ ದರ್ಶನ್ ತೂಗುದೀಪ ಮಾಡುವ ವಿನಂತಿ. 2021ರ ಕರಾಳ ದಿನಗಳು ಮತ್ತೆ ಮರುಕಳಿಸದಿರಲಿ, ಕೋವಿಡ್ ಇಂದ ಸಂಪೂರ್ಣವಾಗಿ ನಮ್ಮ ಜನತೆ ಚೇತರಿಸಿಕೊಳ್ಳಲಿ ಎಂಬ ಕಾರಣದಿಂದ ನನ್ನ ಹುಟ್ಟುಹಬ್ಬವನ್ನು ಈ ಬಾರಿಯೂ ಸಹ ಸರಳವಾಗಿರಲೆಂದು ನಿರ್ಧರಿಸಿದ್ದೇನೆ. ಈ ಬಾರಿಯೂ ಬೆಂಗಳೂರಿನಲ್ಲಿ ನಾನು ಈ ಸಮಯದಲ್ಲಿರುವುದಿಲ್ಲ’. ಆದಷ್ಟು ಬೇಗ ನಿಮ್ಮನ್ನ ಭೇಟಿಯಾಗುವೆ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ..
ಮೆಜೆಸ್ಟಿಕ್ ನಿಂದ ಆರಂಭವಾದ ಡಿ ಬಾಸ್ ಸಿನಿಮಾ ಪಯಣ…
ಚಂದನವನದ ಹಿರಿನ ನಟ ತೂಗುದೀಪ ಶ್ರೀನಿವಾಸ ಅವರ ಪುತ್ರ ದರ್ಶನ್ ಅವರು , ನಿನಾಸಮ್ ನಲ್ಲಿ ತರಬೇತಿ ಪಡೆದು , ಸಿನಿಮಾರಂಗದಲ್ಲಿ ತೆರೆ ಹಿಂದೆ ಕೆಲಸ ಮಾಡಲು ಆರಂಭಿಸಿದರು,,, ಕ್ಯಾಮೆರಾ ಮ್ಯಾನ್ ಆಗಿ ಕೆಲಸ ಮಾಡಿದರು, ನಂತರ ಸಣ್ಣ ಪುಟ್ಟ ಆಡ್ ಗಳಲ್ಲಿ ಕಾಣಿಸಿಕೊಂಡರು ,, ಬಳಿಕ ಮೊದಲ ಬಾರಿಗೆ 1997 ರಲ್ಲಿ ಮಹಾಭಾರತ ಸಿನಿಮಾದಲ್ಲಿ ಪೂಷಕ ಪಾತ್ರದಲ್ಲಿ ನಟಿಸಿದರು , 2000 ದಲ್ಲಿ ದೇವರ ಮಗ ಸಿನಿಮಾದಲ್ಲಿ ಕಾಣಿಸಿಕೊಂಡರು. ನಂತರ ಎಲ್ಲರ ಮನೆ ದೋಸೆನೂ , ಭೂತಯ್ಯನ ಮಕ್ಕಳು , ಮಿಸ್ಟರ್ ಹರೀಶ್ಚಂದ್ರ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡರು..
ಇವರಿಗೆ ಮೇಜರ್ ಬ್ರೇಕ್ ತಂದುಕೊಟ್ಟ ಸಿನಿಮಾ ಚಂದನವನಕ್ಕೆ ಡಿಬಾಸ್ ಮಾಡಿದ ಸಿನಿಮಾ ಅಂದ್ರೆ ಅದು 2001 ರಲ್ಲಿ ತೆರಕಂಡ ಮೆಜೆಸ್ಟಿಕ್ ಸಿನಿಮಾ… ಈ ಸಿನಿಮಾ ಬಂದು 20 ವರ್ಷಗಳಾಗಿದೆ.. ಈಗಲೂ ಈ ಸಿನಿಮಾಗೆ ಅದೇ ಕ್ರೇಜ್ ಇದೆ.. ಇಲ್ಲಿಂದ ಶುರುವಾದ ‘ಸಾರಥಿ’ಯ ಜರ್ನಿ ‘ಚಿಂಗಾರಿ’ಯಂತೆ ಸ್ಯಾಂಡಲ್ ವುಡ್ ನಲ್ಲಿ ಹಬ್ಬಿತ್ತು… ನಂತರ
ಕಿಟ್ಟಿ , ನಿನಗೋಸ್ಕರ , ನೀನಂದ್ರೆ ಇಷ್ಟ , ದಾಸ, ಕರಿಯ , ಲಾಲಿ ಹಾಡು , ನಮ್ಮ ಪ್ರೀತಿಯ ರಾಮು ಸಿನಿಮಾಗಳಲ್ಲಿ ದರ್ಶನ್ ತರ ತರವಾಗಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡು ಇಷ್ಟೊತ್ತಿಗೆ ಅಪಾರ ಪ್ರಮಾಣದ ಅಭಿಮಾನಿಗಳನ್ನ ಸಂಪಾನೆ ಮಾಡಿದರು…
ಇದಾದ ನಂತರ ದಾಸನ ಮತ್ತೊಂದು ಎರಾ ಶುರುವಾಗಿತ್ತು… ಬಾಸ್ , ಪ್ರಿನ್ಸ್ ,ಸಾರಥಿ , ಚಿಂಗಾರಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ , ಅಂಬರೀಶ, ಮಿಸ್ಟರ್ . ಐರಾವತ ,ವಿರಾಟ್ , ಜಗ್ಗು ದಾದ , ಚಕ್ರವರ್ತಿ , ತಾರಕ್ , ಯಜಮಾನ , ಕುರುಕ್ಷೇತ್ರ , ಒಡೆಯದಲ್ಲಿ ನಟಿಸಿದರು.. ಈ ಸಿನಿಮಾಗಳು ಬ್ಲಾಕ್ ಬಾಸ್ಟರ್ ಎನಿಸಿಕೊಂಡವು…
ಕಡೆಯದಾಗಿ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಥಿಯೇಟರ್ ಗಳಲ್ಲಿ ರಿಲೀಸ್ ಆಗಿ ಧೂಳೆಬ್ಬಿಸಿದೆ… ಈ ನಡುವೆ ದರ್ಶನ್ ಅವರ ಹೊಸ ಸಿನಿಮಾ ಕ್ರಾಂತಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ… ದಾಸನ ಹುಟ್ಟುಹಬ್ಬದ ಪ್ರಯುಕ್ತ ಕ್ರಾಂತಿ ಸಿನಿಮಾ ತಂಡವು ಹೊಸ ಪೋಸ್ಟರ್ ಕೂಡ ರಿಲೀಸ್ ಮಾಡಿದೆ..